ಮಹಾರಾಷ್ಟ್ರದ ಮುಂಬೈನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವ ಮಟ್ಟ ಜನರನ್ನು ಕಂಗಾಲಾಗಿ ಮಾಡುತ್ತಿದೆ‌. ಈ ಮಟ್ಟದ ಏರಿಕೆಯ ಕಾರಣ ವೈದ್ಯಕೀಯ ಸೌಲಭ್ಯಗಳು ಕೂಡಾ ಕೊರತೆಯಾಗಲಿದೆ ಎನ್ನುವ ಮಾತುಗಳು ಕೂಡಾ ಕೇಳಿ ಬರುತ್ತಿದೆ. ಇದರ ನಡುವೆ ಹಲವರು ತಮ್ಮಿಂದಾಗುವ ನೆರವು ನೀಡುತ್ತಾ ಮಾನವೀಯತೆ ಮರೆಯುವಾಗಲೇ ಷಾನವಾಜ್ ಹುಸೇನ್ ಮತ್ತು ಅಬ್ಬಾಸ್ ರಿಜ್ವಿ ಎಂಬ ಇಬ್ಬರು ಸ್ನೇಹಿತರು ಕೊರೊನಾ ಸಂಕಷ್ಟದಲ್ಲಿ ಅಗತ್ಯ ಇರುವವರಿಗೆ ಉಚಿತವಾಗಿ ಆಕ್ಸಿಜನ್ ಸಿಲಿಂಡರ್ ಗಳನ್ನು ಒದಗಿಸುವ ಕೆಲಸವನ್ನು ನಿಸ್ವಾರ್ಥವಾಗಿ ಮಾಡುತ್ತಿದ್ದಾರೆ.

ತಮ್ಮ ಸಂಬಂಧಿ ಗರ್ಭವತಿ ಮಹಿಳೆಗೆ ಉಸಿರಾಟದ ತೊಂದರೆಯಾಗಿ ನಿಧನಳಾದಾಗ, ಆಕ್ಸಿಜನ್ ಅಗತ್ಯದ ಬಗ್ಗೆ ಮನವರಿಕೆ ಆದ ಈ ಗೆಳೆಯರು ಕೊರೊನಾ ಸಂಕಷ್ಟದಲ್ಲಿ ಸೋಂಕಿತರಲ್ಲಿ ಅನಿವಾರ್ಯ ಎನಿಸಿದವರಿಗೆ ಉಚಿತವಾಗಿ ಆಮ್ಲಜನಕ ಸಿಲಿಂಡರ್ ಪೂರೈಕೆ ಮಾಡಲು ನಿರ್ಧಾರವನ್ನು ಮಾಡಿದರು‌. ಆದರೆ ದಿನೇ ದಿನೇ ಏರುತ್ತಿರುವ ಸೋಂಕಿನ ಪ್ರಕರಣಗಳಿಂದ ಆಕ್ಸಿಜನ್ ಸಿಲಿಂಡರ್ ಗಳ ಬೇಡಿಕೆ ಹೆಚ್ಚಿದ್ದು, ಬೇಡಿಕೆಯನ್ನು ಪೂರೈಸಲು ಬೇರೆ ದಾರಿಯಿಲ್ಲದೆ ಷಾನವಾಜ್ ಹುಸೇನ್ ಅವರು ತಮ್ಮ SUV ಕಾರನ್ನು ಮಾರಾಟವನ್ನು ಮಾಡಿದ್ದಾರೆ.

ಸೋಂಕು ಹೆಚ್ಚುತ್ತಿರುವುದರಿಂದ ಜನರು ಬೆಡ್ ಗಳನ್ನು ಪಡೆಯಲು ಮತ್ತು ಆಕ್ಸಿಜನ್ ಗಾಗಿ ಪರದಾಡುವಂತೆ ಆಗಿದೆ. ಈ ಪರಿಸ್ಥಿತಿ ನೋಡಿ ನಾವು ಅಗತ್ಯ ಇರುವವರಿಗೆ ಆಕ್ಸಿಜನ್ ಸಿಲಿಂಡರ್ ಪೂರೈಸುವ ಕೆಲಸದಲ್ಲಿ ತೊಡಗಿದ್ದೇವೆ. ಬಡವ, ಶ್ರೀಮಂತರು, ಹಿಂದೂ, ಮುಸ್ಲಿಂ ಎಂಬುದನ್ನು ನೋಡದೆ ಅಗತ್ಯ ಇರುವವರಿಗೆ ಆಕ್ಸಿಜನ್ ಪೂರೈಕೆ ಮಾಡುವುದು ನಮ್ಮ ಗುರಿಯಾಗಿದೆ ಎನ್ನುತ್ತಾರೆ ಷಾನವಾಜ್ ಹುಸೇನ್ ಅವರು. ವೈದ್ಯರ ಪ್ರಿಸ್ಕಿಪ್ಷನ್ ಇದ್ದು ಬರುವ ಯಾರಿಗೇ ಆಗಲೀ ನಾವು ಆಕ್ಸಿಜನ್ ಅನ್ನು ಪೂರೈಕೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಇಲ್ಲಿಯವರೆಗೆ ಇಬ್ಬರೂ ಸ್ನೇಹಿತರೂ 250-300 ಆಮ್ಲಜನಕ ಸಿಲಿಂಡರ್‌ಗಳ ನಡುವೆ ಸರಬರಾಜು ಮಾಡಿದ್ದಾರೆ. ಆಮ್ಲಜನಕ ಸಿಲಿಂಡರ್ ಗಳನ್ನು 48 ಗಂಟೆಗಳ ಕಾಲ ಉಚಿತವಾಗಿ ನೀಡಲಾಗುತ್ತಿದೆ.
ಸರಾಸರಿ, ರಾತ್ರಿಯ ಸಮಯದಲ್ಲಿ ಸಿಲಿಂಡರ್‌ಗಳ ಅವಶ್ಯಕತೆ ಹೆಚ್ಚು ಇದ್ದು, ಕನಿಷ್ಠ 10-15 ಸಿಲಿಂಡರ್‌ಗಳನ್ನು ಜನರಿಗೆ ಪ್ರತಿದಿನ ಒದಗಿಸುವ ಕಾರ್ಯ ನಡೆಯುತ್ತಿದೆ ಎಂದು ಅಬ್ಬಾಸ್ ರಿಜ್ವಿ ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here