ನಡೆದಾಡುವ ದೇವರು ,ತ್ರಿವಿಧ ದಾಸೋಹಿ ,ಪರಮ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಎಲ್ಲಾ ಪ್ರಶಸ್ತಿ ,ಗೌರವಗಳು ಒಲಿದು ಬಂದಿವೆ.ಆದರೆ ನಡೆದಾಡುವ ದೇವರಿಗೆ ಇನ್ನೂ ಭಾರತದ ಪ್ರತಿಷ್ಟಿತ ಅತ್ಯುನ್ನತ ಗೌರವ ಭಾರತ ರತ್ನ ಪ್ರಶಸ್ತಿ ಮಾತ್ರ ಇನ್ನೂ ಒಲಿದು ಬಂದಿರಲಿಲ್ಲ. ಇದು ನಡೆದಾಡುವ ದೇವರ ಭಕ್ತರ ಸುಮಾರು ವರ್ಷಗಳ ಕನಸು ಕನವರಿಕೆ.ಹೌದು ಈಗ ಈ ಕನಸು ಕನವರಿಕೆಗಳಿಗೆ ವಿರಾಮ ಹಾಕುವ ಸಮಯ ಬಂದಿದೆ.

ಬಲ್ಲ ಮೂಲಗಳ ಖಚಿತ ಮಾಹಿತಿಯ ಪ್ರಕಾರ ಇದೇ ಗಣರಾಜ್ಯೋತ್ಸವದಂದು ತುಮಕೂರಿನ ಸಿದ್ದಗಂಗಾ ಮಠದ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮಿಗಳಿಗೆ ಭಾರತದ ಅತ್ಯುನ್ನತ ನಾಗರೀಕ ಗೌರವ ಪ್ರತಿಷ್ಟಿತ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂಬ ಮಾಹಿತಿ ಹೊರಬಂದಿದ್ದು , ಕೇಂದ್ರ ಸರ್ಕಾರದಿಂದ ಈ ಮಾಹಿತಿ ಅಧಿಕೃತ ಪ್ರಕಟಣೆ ಆಗಬೇಕಿದೆ.ಈ ವಿಷಯ ತಿಳಿದು ಕರ್ನಾಟಕದ ಎಲ್ಲರಿಗೂ ಸಂತಸವಾಗಿದ್ದು ಹಲವು ವರ್ಷಗಳ ಕನಸು ಈಗ ನನಸಾಗುತ್ತಿದೆ.ಈ ಹಿಂದೆ ಕರ್ನಾಟಕದ ಹೆಮ್ಮೆಯ ಸರ್.ಎಂ.ವಿಶ್ವೇಶ್ವರಯ್ಯ ,ಭೀಮಸೇನ್ ಜೋಷಿ ,ಹಾಗೂ ಸಿ.ಎನ್ ,ಆರ್ ,ರಾವ್ ಅವರಿಗೆ ಭಾರತ ರತ್ನ ಪ್ರಶಸ್ತಿ ಲಭಿಸಿತ್ತು.

ಈಗ ನಡೆದಾಡುವ ದೇವರಿಗೆ ಈ ಪ್ರಶಸ್ತಿ ಲಭಿಸುತ್ತದೆ ಎಂಬ ಸುದ್ದಿ ಸಹಜವಾಗಿ ಸಿದ್ದಗಂಗಾ ಮಠದ ಭಕ್ತರಿಗೆ ಸಂತಸ ತಂದಿದೆ. ಇದೇ ಜನವರಿ ೨೬ ರಂದು ಗಣರಾಜ್ಯೋತ್ಸವ ಇದ್ದು ಪ್ರತಿ ವರ್ಷ ಗಣರಾಜ್ಯೋತ್ಸವದ ದಿನ ದೇಶದ ಸಾಧಕರಿಗೆ ,ಭಾರತ ರತ್ನ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here