ಈ ವರ್ಷದ ಜನವರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಭಾರೀ ಜಿಗಿತವಾಗಿದ್ದು ೧.೧೦,೮೨೮ ಕೋಟಿ ರೂಗಳಿಗೆ ಏರಿದೆ. ಹೊಸ ತೆರಿಗೆ ಪದ್ಧತಿ ಜಾರಿಯಾದ ಮೇಲೆ ಇದೀಗ ಎರಡನೇ ಬಾರಿಗೆ ಮಾಸಿಕ ಜಿಎಸ್‌ಟಿ ಸಂಗ್ರಹ ಮೊತ್ತ ೧.೧ ಲಕ್ಷ ಕೋಟಿ ರೂಗಳ ಗಡಿಯನ್ನು ದಾಟಿದೆ.
ಜನವರಿ ತಿಂಗಳ ಜಿಎಸ್‌ಟಿ ಮೊತ್ತದಲ್ಲಿ ಸಿಜಿಎಸ್‌ಟಿ-೨೦,೯೪೪ ಕೋಟಿ ರೂ, ಎಸ್‌ಜಿಎಸ್‌ಟಿ-೨೮,೨೨೪ ಕೋಟಿ ರೂ ಹಾಗೂ ಐಜಿಎಸ್‌ಟಿ-೫೩,೦೧೩ ಕೋಟಿ ರೂಗಳಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ. ೨೦೧೯ ಡಿಸೆಂಬರ್ ತಿಂಗಳಿನಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹ ಮೊತ್ತ ೧,೦೩,೧೮೪ ಕೋಟಿ ರೂಗಳಾಗಿತ್ತು.
೨೦೧೯ ಜನವರಿಗೆ ಹೋಲಿಸಿದರೆ ದೇಶೀಯ ವಹಿವಾಟುಗಳಿಂದ ಜಿಎಸ್‌ಟಿ ಸಂಗ್ರಹ ಮೊತ್ತದಲ್ಲಿ ಶೇ.೧೨ರಷ್ಟು ಏರಿಕೆಯಾಗಿದ್ದು ಆಮದು ಸರಕುಗಳ ಮೇಲಿನ ಐಜಿಎಸ್‌ಟಿ ಸೇರಿ ಒಟ್ಟಾರೆ ಜಿಎಸ್‌ಟಿ ಸಂಗ್ರಹದಲ್ಲಿ ಶೇ.೮ರಷ್ಟು ಹೆಚ್ಚಳವಾಗಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಗಣನೀಯ ಏರಿಕೆಯಾಗಿರುವುದು ಆರ್ಥಿಕ ಪುನಶ್ಚೇತನದ ಕುರುಹಾಗಬಹುದೆಂದು ವಿಶ್ಲೇಷಿಸಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here