ಮಾಜಿ ಸಚಿವ ಜಿ.ಟಿ.ದೇವೇಗೌಡರು ಹೊಸ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಮೈಸೂರಿನಲ್ಲಿ ಇಂದು ಮಾತನಾಡಿರುವ ಮಾಜಿ ಸಚಿವರು, ದಸರಾ ಮಾಡಲು ನನ್ನನ್ನು ಬಿಜೆಪಿ ಜೊತೆ ಕಳುಹಿಸಿದವರು ಮಾಜಿ ಸಿಎಂ ಕುಮಾರಸ್ವಾಮಿ ಅವರೇ ಎಂಬ ಒಂದು ಹೇಳಿಕೆಯನ್ನು ನೀಡಿದ್ದಾರೆ. ಅವರು ಮಾತನಾಡುತ್ತಾ ಈ ಹಿಂದೆಯೂ ಕೂಡಾ ಲೋಕಸಭಾ ಚುನಾವಣೆಯ ವೇಳೆ ನನ್ನನ್ನು ಬಿಜೆಪಿ ಜೊತೆಗೆ ಕಳುಹಿಸಿದ್ದು ಕೂಡಾ ಅವರೇ ಎನ್ನುತ್ತಾ, ಕುಮಾರಸ್ವಾಮಿ ಅವರು ನೀಡಿದ ಕೆಲಸವನ್ನು ಬಹಳ ಯಶಸ್ವಿಯಾಗಿದೆ ನಿರ್ವಹಿಸಿದ್ದೇನೆ ಎಂದು ಹೇಳಿದ್ದಾರೆ.

ಇದೇ ವೇಳೆ ಅವರು ಸಾ.ರಾ.ಮಹೇಶ್ ಅವರು ಹೇಳಿದ ಒಂದ ಮಾತಿಗೆ ಪ್ರತಿಕ್ರಿಯೆ ಕೂಡಾ ನೀಡಿದ್ದಾರೆ. ಸಾ.ರಾ.ಮಹೇಶ್ ಅವರು ಈ ಹಿಂದೆ ಜಿಟಿಡಿ ಹಿರಿಯರು, ಅವರನ್ನು ಬಿಟ್ಟರೆ ಅವರ ಮಗ ಜಿ.ಡಿ.ಹರೀಶ್ ಅವರನ್ನು ಚುನಾವಣೆಗೆ ನಿಲ್ಲಿಸುವುದಾಗಿ ಹೇಳಿಕೆಯೊಂದರಲ್ಲಿ ನೀಡಿದ್ದು, ಆ ವಿಷಯವಾಗಿ ಮಾತನಾಡಿದ ಜಿಟಿಡಿ ಹರೀಶ್ ಮೇಲೆ ಸಾ.ರಾ.ಮಹೇಶ್ ಅವರಿಗೆ ಅಷ್ಟೊಂದು ಪ್ರೀತಿಯಿದ್ದರೆ ಅವರೇ ಖುದ್ದು ಮಾತನಾಡಲಿ ಎಂದು ಹೇಳಿದ್ದಾರೆ. ಅಲ್ಲದೆ ಸಾ.ರಾ. ಮಹೇಶ್ ಅವರಿಗೆ ಹರೀಶ್ ಮೇಲೆ ಎಷ್ಟು ಪ್ರೀತಿ ಇದೆ ಎಂಬುದು ಆ ದೇವರಿಗೆ ಗೊತ್ತಿದೆ ಎಂದಿದ್ದಾರೆ.

ಹರೀಶ್ ಮೇಲೆ ಸಾ.ರಾ.ಮಹೇಶ್ ಗೆ ಎಷ್ಟು ಪ್ರೀತಿ ಇದೆ ಎಂಬುದು ನನಗೂ ಗೊತ್ತಿದೆ ಎಂದ ಅವರು, ಈ ವಿಷಯ ಖುದ್ದು ಸಾ.ರಾ.ಮಹೇಶ್ ಅವರಿಗೆ ಕೂಡಾ ಗೊತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ರಾಜ್ಯ ರಾಜಕೀಯದಲ್ಲಿ ಇಂತಹ ಹೇಳಿಕೆಗಳು ದಿನಕ್ಕೊಂದು ಕೇಳಿ ಬರುತ್ತಲೇ ಇದ್ದು, ಒಟ್ಟಾರೆ ರಾಜಕೀಯ ಪರಿಸ್ಥಿತಿ ಹದಗೆಟ್ಟಂತೆ ಕಂಡಬರುತ್ತಿದ್ದು, ಒಬ್ಬರ ಮೇಲೆ ಮತ್ತೊಬ್ಬರು ಟೀಕೆ, ವಾಗ್ದಾಳಿಗಳನ್ನು ನಡೆಸುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here