ರಾಜಕಾರಣ ಎಂದರೆ ಒಬ್ಬರು ಮತ್ತೊಬ್ಬರ ಮೇಲೆ ಕೆಸರೆರಚಾಟ ಮಾಡುವುದು, ದೋಷಾರೋಪ ಮಾಡುವುದು, ಆರೋಪ, ಪ್ರತ್ಯಾರೋಪ ಮಾಡಿಕೊಂಡು, ಒಬ್ಬರ ಮೇಲೊಬ್ಬರು ವಾಗ್ದಾಳಿಯನ್ನು ನಡೆಸುವುದು ಕೂಡಾ ಬಹಳ ಸಾಮಾನ್ಯವಾದ ವಿಷಯ. ಅದರಲ್ಲೂ ಚುನಾವಣೆ ಹತ್ತಿರವಾದಂತಹ ಸಂದರ್ಭದಲ್ಲಂತೂ ಇಂತಹ ದೋಷಾರೋಪಣೆಗಳ ಸಂಖ್ಯೆ ಬಹಳ ಹೆಚ್ಚಾಗಿಯೇ ಇರುತ್ತದೆ.‌ ಇಂತಹ ಆರೋಪಗಳು, ವಾಗ್ದಾಳಿ ಗಳ ಸಮರ ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ತೀವ್ರವಾದಂತೆ ಕಾಣುತ್ತಿವೆ‌.

ಇಂತಹುದೇ ಒಂದು ವಾಗ್ದಾಳಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಸಚಿವ ಜಿ.ಟಿ ದೇವೇಗೌಡ ಅವರ ಬಗ್ಗೆ ಮಾತನಾಡುತ್ತಾ, ಜಿಟಿಡಿ ಜೆಡಿಎಸ್​​ಗೆ ಮತ್ತೊಂದು ಶಾಕ್ ಅಂತಾರೆ, ನಾನು ಹೇಳ್ತೇನೆ ಫ್ಯೂಸೇ ಇಲ್ಲ ಎನ್ನುವ ಮೂಲಕ ಜಿಟಿಡಿ ಬಗ್ಗೆ ವ್ಯಂಗ್ಯ ಮಾಡಿದ್ದಾರೆ ಕುಮಾರಸ್ವಾಮಿಯವರು. ಬೆಂಗಳೂರಿನಲ್ಲಿ ಮಾಜಿ ಸಿಎಂ ಅವರು
ಮಾಧ್ಯಮಗಳ ಜೊತೆ ಮಾತನಾಡುವ ಸಂದರ್ಭದಲ್ಲಿ ಇಂತಹುದೊಂದು ಹೇಳಿಕೆಯನ್ನು ನೀಡಿದ್ದಾರೆ.

ಜಿಟಿ ದೇವೇಗೌಡರ ಬಗ್ಗೆ ಮಾತನಾಡುತ್ತಾ ಕುಮಾರಸ್ವಾಮಿ ಅವರು ಜಿ.ಟಿ ದೇವೇಗೌಡರ ಫ್ಯೂಸ್ ಕಿತ್ತೋಗಿದೆ, ಇನ್ನು ಶಾಕ್ ಹೊಡೆಯೋದೆಲ್ಲಿ? ಅಂತಾ ಪ್ರಶ್ನೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಹೊರಟ್ಟಿ ಬಗ್ಗೆ ಮಾತನಾಡಿ, ಬಸವರಾಜ ಹೊರಟ್ಟಿ, ನನ್ನ ಸಂಬಂಧವೇ ಬೇರೆ ರೀತಿಯಿದ್ದು, ಹೊರಟ್ಟಿ ಇಂದಿಗೂ ಕೂಡಾ ನನಗ ಅಣ್ಣನೇ. ಅದಕ್ಕೆ ಬೇರೆ ಬೇರೆ ಅಪಾರ್ಥ ಕಲ್ಪಿಸುವುದು ಬೇಡ ಎಂದು ಕೂಡಾ ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here