ಯಾವಾಗಲೂ ಒಂದಲ್ಲ ಒಂದು ವಿವಾದಕ್ಕೆ ಕಾರಣವಾಗುವ ಉತ್ತರಾಖಂಡದ ಬಿಜೆಪಿ ಶಾಸಕ ಕುವರ್ ಪ್ರಣವ್ ಸಿಂಹ ಚ್ಯಾಂಪಿಯನ್ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿ ಬಹಳಷ್ಟು ಸದ್ದು ಮಾಡಿದೆ. ಈ ವಿಡಿಯೋ ಯಾವಾಗಿನದು ಎಂಬುದರ ಮಾಹಿತಿ ಲಭ್ಯವಾಗದಿದ್ದರೂ, ಮಂಗಳವಾರ ರಾತ್ರಿ ಈ ವಿಡಿಯೋ ವೈರಲ್ ಆಗಿದೆ. ವಿಡಿಯೋ ಬಗ್ಗೆ ಈಗಾಗಲೇ ಚರ್ಚೆ, ವಿಮರ್ಶೆಗಳು ಬಹಳ ಜೋರಾಗಿ ನಡೆಯುತ್ತಿವೆ. ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಕೆಲವೇ ಗಂಟೆಗಳಲ್ಲಿ ಸಹಸ್ರಾರು ಮಂದಿ ಈ ವಿಡಿಯೋವನ್ನು ನೀಡಿದ್ದಾರೆ. ವಿಡಿಯೋದಲ್ಲಿ ಶಾಸಕರು ಇದ್ದ ಪರಿಸ್ಥಿತಿ ಬಹಳ ಟೀಕೆಗೆ ಗುರಿಯಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಸಿನಿಮಾ ಹಾಡಿಗೆ ನೃತ್ಯ ಮಾಡುತ್ತಿರುವ ಶಾಸಕರ ತಮ್ಮೆರಡು ಕೈಗಳಲ್ಲಿ ಬಂದೂಕು ಹಿಡಿದು ನರ್ತನ ಮಾಡಿದ್ದಾರೆ. ಅಲ್ಲದೆ ಪಿಸ್ತೂಲನ್ನು ಬಾಯಲ್ಲಿ ಇಟ್ಟುಕೊಂಡು ಕುಣಿದಿದ್ದಾರೆ ಹಾಗೂ ಮದ್ಯ ಸೇವನೆ ಕೂಡಾ ಮಾಡಿರುವುದು ವಿಡಿಯೋದಲ್ಲಿ ಕಂಡಿದೆ. ಇದೆಲ್ಲದರ ಜೊತೆಗೆ ಅವರು ಉತ್ತರಾಖಂಡದ ಬಗ್ಗೆ ಕೆಲವು ಕೆಟ್ಟ ಶಬ್ದಗಳನ್ನು ಕೂಡಾ ಬಳಕೆ ಮಾಡಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಶಾಸಕನಾದವನ‌ ಇಂತಹ ನಡೆಯನ್ನು ಹಲವರು ಉಗ್ರವಾಗಿ ಖಂಡನೆಯನ್ನು ಮಾಡಿದ್ದಾರೆ. ಶಾಸಕರು ಮಾತ್ರ ಇದಕ್ಕೆ ಪ್ರತಿಯಾಗಿ ತನ್ನ ವಿರೋಧಿಗಳು ತನ್ನ ಮರ್ಯಾದೆ ತೆಗೆಯಲು ವಿಡಿಯೋ ವೈರಲ್ ಮಾಡಿದ್ದಾರೆ ಎಂದಿದ್ದಾರೆ.

ತಾನು ವಿಡಿಯೋದಲ್ಲಿ ಯಾರನ್ನು ಬೈದಿಲ್ಲ, ಯಾರಿಗೂ ಭಯ ಹುಟ್ಟಿಸಲು ಗನ್ ಬಳಸಿಲ್ಲ ಎಂದಿದ್ದಾರೆ. ಈಗಾಗಲೇ ಅವರನ್ನು ಮೂರು ತಿಂಗಳಿಗೆ ಬಿಜೆಪಿ ಅಮಾನತು ಮಾಡಿತ್ತು. ಈಗ ಈ ವಿಡಿಯೋ ವೈರಲ್ ಆದ ಮೇಲೆ ಅವರನ್ನು ಬಾಜಪ ಸದಸ್ಯತ್ವ ದಿಂದ ಉಚ್ಛಾಟನೆ ಮಾಡಬೇಕೆಂದು ಹಲವು ರಾಜಕೀಯ ಧುರೀಣರು ಸಲಹೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಪಕ್ಷ ಪ್ರಣವ್ ಸಿಂಹ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಜೊತೆಗೆ ಈ ವಿಡಿಯೋ ಬಗ್ಗೆ ಕೂಡಾ ಪರಿಶೀಲನೆ ಮಾಡಿ ಇದು ಯಾವಾಗಿನದು ಎಂದು ನೋಡಬೇಕಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here