ಸಖಲ ಸರ್ಕಾರ ಗೌರವಗಳೊಂದಿಗೆ ನಮ್ಮ ದೇಶದ ಹೆಮ್ಮೆಯ ಯೋಧ , ನಮ್ಮ ನಾಡಿನ ಕುಲಪುತ್ರ ವೀರ ಸೇನಾನಿ ಗುರು ಅವರ ಅಂತಿಮ ವಿಧಿವಿಧಾನಗಳನ್ನು ಇಂದು ಯೋಧ ಗುರು ಅವರ ಸ್ವಗ್ರಾಮ ಬಳಿಯ ಕೆ.ಎಂ. ದೊಡ್ಡಿಯಲ್ಲಿ ನೆರವೇರಿತು. ಗುರು ಅವರ ಅಂತಿಮ ವಿಧಿವಿಧಾನಗಳ ಕಾರ್ಯದಲ್ಲಿ ಸರ್ಕಾರದ ಪರವಾಗಿ ನಾಡಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಸರ್ಕಾರ ಮಂತ್ರಿಗಳು ,ಶಾಸಕರು ,ವಿವಿಧ ಮಠಾಧೀಶರು ಸೇರಿ ಹಲವಾರು ಕನ್ನಡನಾಡಿನ ಪ್ರಮುಖರು ಭಾಗವಹಿಸಿದ್ದರು. ಈ  ವೇಳೆ ಯೋಧ ಗುರು ಅವರಿಗೆ ರಾಷ್ಟ್ರಗೌರವ ನೀಡಲಾಯಿತು. ರಾಷ್ಟ್ರಗೌರವ ನೀಡುವ ಸಮಯದಲ್ಲಿ ಬಂದ ರಾಷ್ಟ್ರ ಗೀತೆ ಸಮಯದಲ್ಲಿ ಯೋಧ ಗುರು ಅವರ ಪತ್ನಿ ಕಲಾವತಿ‌ ಅವರು ಭಾವುಕರಾಗಿ ಭಾರತ್ ಮಾತಾ ಕಿ ಜೈ ಎಂದು ಜೋರಾಗಿ ಕೂಗಿದರು.

ಗುರು ಅವರ ತಂದೆ ತಾಯಿಗಳು ನೆರೆದಿದ್ದ ಅಪಾರ ಸಂಖ್ಯೆಯ ಜನರನ್ನು ನೋಡಿ ಭಾವುಕರಾಗಿ ಕೈ ಮುಗಿದರು.  ಗುರು ಅವರ ಸಹೋದರ ಅವರು ಯೋಧ ಗುರು ಅವರ ಚಿತಗೆ ಅಗ್ನಿ ಸ್ಪರ್ಶ ಮಾಡಲಿದ್ದಾರೆ. ಇದಕ್ಕೂ ಮೊದಲು ಗುರು ಅವರ ಪಾರ್ಥಿವ ಶರೀರ ಮದ್ದೂರಿನ ಗುಡಿಗೇರಿಗೆ ಸಂಜೆ 7-00 ಗಂಟೆಗೆ ಆಗಮಿಸಿತು.ಪಾರ್ಥಿವ ಶರೀರ ಗುಡಿಗೇರಿಯ ಮನೆಗೆ ಆಗಮಿಸುತ್ತಿದ್ದಂತೇ ಗುರುವಿನ ತಂದೆ ತಾಯಿ ಸಹೋದರ ಹಾಗೂ ಗುರುವಿನ ಪತ್ನಿ ಕಲಾವತಿ ಅವರ ದುಃಖದ ಕಟ್ಟೆ ಹೊಡೆದು ಹೋಗಿತ್ತು.

 

ಗುರು ಅವರ ಪತ್ನಿ ಕಲಾವತಿ ಅವರು ಯೋಧ ಗುರು ಅವರ ಪಾರ್ಥಿವ ಶರೀರಕ್ಕೆ ಹೂಮಾಲೆ ಹಾಕಿ‌ ನಂತರ ಕೆಲ ಹೊತ್ತು ಸೆಲ್ಯೂಟ್ ಮಾಡಿದ ದೃಶ್ಯ ಅಲ್ಲಿದ್ದವರಲ್ಲಿ ದೇಶಪ್ರೇಮದ ಕಿಚ್ಚು ಹೆಚ್ಚಿಸಿತತ್ತು. ಗುರು ಅವರ ಪಾರ್ಥೀವ ಶರೀರದ ಅಂತಿಮ ವಿಧಿವಿಧಾನ ಕುಟುಂಬದವರು ಕಣ್ಣೀರಿನ ಮೂಲಕ ನೆರವೇರಿಸುವ ದೃಶ್ಯ ಎಂತಹವರಿಗೂ ಕರುಳು ಹಿಂಡುವಂತಿತ್ತು. ಗುರು ಅವರ ಪಾರ್ಥಿವ ಶರೀರ ಛಿಧ್ರ ವಾಗಿರುವ ಕಾರಣ ಶವಪೆಟ್ಟಿಗೆಯಿಂದ ಗುರು ಅವರ ಪಾರ್ಥೀವ ಶರೀರ ಹೊರ ತೆಗೆಯುವ ಅವಕಾಶ ಇಲ್ಲ. ಹೀಗಾಗಿ ಆ ದೇವರು ಕುಟುಂಬದ ಸದಸ್ಯರಿಗೆ ಗುರುವಿನ ಮುಖ ದರ್ಶನ ಮಾಡುವ ಅವಕಾಶವನ್ನು ಕೊಡಲಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here