ಸಾಮಾಜಿಕ ಜಾಲ ತಾಣಗಳಲ್ಲಿ ಜೆಡಿಎಸ್ ನ ಮಾಜಿ ಅಧ್ಯಕ್ಷರಾದ ಹೆಚ್. ವಿಶ್ವನಾಥ್ ಅವರು ಮಾತನಾಡಿದ್ದಾರೆ ಎನ್ನುವಂತಹ , ಅವರ ಧ್ವನಿಯಂತಿರುವ ಅಶ್ಲೀಲ ಆಡಿಯೋ ಬಹಳ ಸದ್ದು ಮಾಡಿದೆ. ಈ‌ ಕುರಿತಾಗಿ ವಿಶ್ವನಾಥ್ ಅವರು ಮಾತನಾಡಿ ನಾನು ರಾಜೀನಾಮೆ ನೀಡಿರುವುದರಿಂದ ನನ್ನ ತೇಜೋವಧೆ ಮಾಡಲು ಇಂತಹುದೊಂದು ಷಡ್ಯಂತ್ರವನ್ನು ಹೂಡಲಾಗಿದೆಯೆಂದು, ಅದು ತನ್ನ ಧ್ವನಿಯಲ್ಲವೆಂದು ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರು ಅತೃಪ್ತ ಶಾಸಕರೊಟ್ಟಿಗೆ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದು, ಅಶ್ಲೀಲ ಆಡಿಯೋ‌ ಬಗ್ಗೆ ನಿನ್ನೆ ಮಾದ್ಯಮಗಳಿಗೆ ಸ್ಪಷ್ಟತೆ ನೀಡಿದ್ದಾರೆ.

ತಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತಮ್ಮ ಪಕ್ಷದವರೋ, ಬೇರೆ ಪಕ್ಷದವರೋ‌ ಅಥವಾ ತಮ್ಮ ವಿರೋಧಿಗಳಾರೋ‌ ಇಂತಹ ಒಂದು ಕುತಂತ್ರ ಮಾಡಿದ್ದಾರೆ ಎಂದಿರುವ ಅವರು ಆ ಆಡಿಯೋ ಸಂಭಾಷಣೆಯು ಮಿಮಿಕ್ರಿ ಇದ್ದಂತೆ ಇದೆ. ಇಂತಹ ಸಂದರ್ಭಗಳಲ್ಲಿ ಇದೆಲ್ಲಾ ಸಾಮಾನ್ಯ.ಲಭ್ಯವಿರುವ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಏನಾದರೂ ಮಾಡಬಹುದು. ನಾನು ಇಂತಹುದೆಲ್ಲವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.

ಆಡಿಯೋ ಕೊನೆಯಲ್ಲಿ ಬರುವ ಸಾಲನ್ನು ಗಮನಿಸಿದರೆ ಜನರಿಗೆ ಅದರ ಸತ್ಯಾಸತ್ಯತೆಯು ತಿಳಿಯುತ್ತದೆ. ನಾನು ಏನೆಂಬುದು ಜನರಿಗೆ ತಿಳಿದಿದೆ. ಆ ಆಡಿಯೋ ದುರುದ್ದೇಶದಿಂದ ಕೂಡಿದ್ದು, ಅದಕ್ಕೆಲ್ಲಾ ನಾನು ಹೆದರುವುದಿಲ್ಲ ಎಂದಿದ್ದಾರೆ. ರಾಜಕೀಯ ಬೆಳವಣಿಗೆಗಳು, ರಾಜಕೀಯ ಪರಿಸ್ಥಿತಿ ಸಮರ್ಪಕವಾಗಿ ಇಲ್ಲದಿರುವ ಸಂದರ್ಭಗಳಲ್ಲಿ ಇಂಹವುದೆಲ್ಲವನ್ನು ಹುಟ್ಟು ಹಾಕುತ್ತಾರೆ ಎಂದು ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here