ತಲೆಗೂದಲು ಎಂದರೆ ಬಹುತೇಕ ಎಲ್ಲರಿಗೂ ಅಪಾರವಾದ ಪ್ರೀತಿ. ತಲೆಗೂದಲು ಉದುರಲು ಆರಂಭಿಸಿದರೆ ಅಥವಾ ಕೂದಲು ಬೆಳ್ಳಗಾಗಲೂ ಆರಂಭಿಸಿದರೆ ಹಲವರಿಗೆ ಆತಂಕ ಶುರುವಾಗುತ್ತದೆ. ಹಾಗಾದರೆ ಇಂದು ನಾವು ಕೂದಲಿನ ಆರೈಕೆ ಮಾಡುವ ಕೆಲವು ವಿಧಾನಗಳನ್ನು ತಿಳಿಯೋಣ ಬನ್ನಿ.

೧. ವಾರದಲ್ಲಿ ಎರಡು ಬಾರಿ ತಲೆಗೆ ಸ್ನಾನ ಮಾಡಬೇಕು. ಆದರೆ ತಲೆಗೆ ಹೆಚ್ಚು ಬಿಸಿ ನೀರನ್ನು ಬಳಸಬಾರದು. ಬೆಚ್ಚಗಿರುವ ನೀರನ್ನು ಬಳಸುವುದು ಉತ್ತಮ. ಇತ್ತೀಚಿನ ದಿನಗಳಲ್ಲಿ ಕೂದಲಿಗೆ ಬಹುತೇಕ ಶ್ಯಾಂಪುಗಳನ್ನು ಬಳಸುತ್ತಾರೆ. ಆದರೆ ಅವುಗಳ ಆಯ್ಕೆಯಲ್ಲಿ ಜಾಗರೂಕರಾಗಿರುವಿದ್ದು ಸಲ್ಫೇಟ್ ಮುಕ್ತವಾದ ಶಾಂಪು ಬಳಸಿ. ಇದು ಬಹಳ ಮುಖ್ಯವಾದ ವಿಚಾರವಾಗಿದೆ.

೨. ತಲೆಗೆ ಸ್ನಾನ ಮಾಡಿದಾಗ ಕೂದಲು ಬಹಳ ದುರ್ಬಲವಾಗಿರುತ್ತವೆ‌. ತೇವಾಂಶದಿಂದ ಇರುವ ಕೂದಲ ಮೇಲೆ ಬಾಚಣಿಗೆಯನ್ನು ಬಳಸುವುದೋ, ಬೇರಾವುದೋ ಒತ್ತಡವನ್ನು ಹೇರುವುದೋ ಮಾಡಬಾರದು. ಬದಲಾಗಿ ಕೈ ಬೆರಳುಗಳ ಮೂಲಕವೋ ಅಥವಾ ಬಾವಣಿಗೆಗಳಲ್ಲಿ ದೂರದೂರಕ್ಕೆ ಹಲ್ಲಿರುವುದನ್ನು ಬಳಸಿ ಬಾಚಿಕೊಳ್ಳುವುದು ಬಹಳ ಉತ್ತಮವಾದ ಅಭ್ಯಾಸ.

೩. ತಲೆಗೂದಲಿಗೆ ನಿಯಮಿತವಾಗಿ ಎಣ್ಣೆಯನ್ನು ಹಚ್ಚಿಕೊಳ್ಳುವುದು ಕೂದಲ ಸಂರಕ್ಷಣೆಗೆ ಬಹಳ ಒಳ್ಳೆಯದು. ಇದು ಕೂದಲ ಕಾಂತಿಯನ್ನು ಹೆಚ್ಚು ಮಾಡುವುದಲ್ಲದೆ, ಕೂದಲನ್ನು ಬಲಗೊಳಿಸುತ್ತದೆ. ಕೊಬ್ಬರಿ ಎಣ್ಣೆ ಮೊದಲಿನಿಂದ ಬಳಸುವ ಎಣ್ಣೆಯಾಗಿದ್ದು, ಈಗ ಮಾರುಕಟ್ಟೆಯಲ್ಲಿ ಇನ್ನೂ ಹಲವು ವಿಧದ ಪೋಷಕಾಂಶಗಳು ಇರುವ ಹೇರ್ ಆಯಿಲ್ ಗಳು ಲಭ್ಯವಿದೆ. ಬಾದಾಮಿ ಎಣ್ಣೆಯನ್ನು ಬಳಸಿ ವಾರದಲ್ಲಿ ಮೂರು ಬಾರಿಯಾದರೂ ನೆತ್ತಿಗೆ ಮಸಾಜ್ ಮಾಡಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ.

೪. ಕ್ಯಾರೆಟ್ ಜ್ಯೂಸ್ ಸೇವನೆ ಕೂಡಾ ಕೂದಲ ಆರೋಗ್ಯಕ್ಕೆ ಒಳ್ಳೆಯ ಫಲಿತಾಂಶ ನೀಡುತ್ತದೆ. ತಲೆಯಲ್ಲಿ ಹೊಟ್ಟು ಹೆಚ್ಚಾದರೆ ನಿಂಬೆ ಹಣ್ಣಿನ ರಸದಿಂದ ತಲೆಗೆ ಮಸಾಜ್ ಮಾಡಿದರೆ ಅದು ಕಡಿಮೆಯಾಗುತ್ತದೆ. ಮೆಹಂದಿ ಪುಡಿಗೆ ಹುಳಿ ಮಜ್ಜಿಗೆ ಸೇರಿಸಿದ ಮಿಶ್ರಣವನ್ನು ಕೂದಲಿಗೆ ಹಚ್ಚಿ, ಒಣಗಿದ ನಂತರ ತೊಳೆಯುವುದರಿಂದ ಕೂದಲು ಉದುರುವ ಸಮಸ್ಯೆಗೆ ಪರಿಹಾರದ ಜೊತೆಗೆ, ಕೂದಲು ಹೊಳಪನ್ನು ಕೂಡಾ ಪಡೆದುಕೊಳ್ಳುತ್ತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here