ಆಲಯಗಳೆಂದರೆ ಜನರಿಗೆ ಭಕ್ತಿ ಭಾವ ಸದಾ ಇದ್ದೇ ಇದೆ. ಅದರಲ್ಲೂ ನಮ್ಮ ದೇಶದಲ್ಲಿ ಅಸಂಖ್ಯಾತ ದೇವಾಲಯಗಳು ಇದ್ದು, ಕೆಲವು ದೇವಾಲಯಗಳು ತಮ್ಮಲ್ಲಿ ನಿಗೂಢತೆಯನ್ನು, ಮಹಿಮೆಗಳನ್ನು ಹಾಗೂ ರಹಸ್ಯಗಳನ್ನು ಅಡಗಿಸಿಕೊಂಡು ವಿಸ್ಮಯದ ಕೇಂದ್ರಗಳಾಗಿವೆ. ಅಂತುಹುದೇ ಒಂದು ವಿಸ್ಮಯಕಾರಿ ದೇವಾಲಯದ ಬಗ್ಗೆ ನಾವು ತಿಳಿಯೋಣ. ಈ ಆಲಯ ಉತ್ತರ ಪ್ರದೇಶದ ಇಟಾವಾದಿಂದ 12 ಕಿಮೀ ದೂರದಲ್ಲಿ ರೂರಾ ಎಂಬ ಹಳ್ಳಿಯ ಬಳಿ ಯಮುನಾ ನದಿ ದಂಡೆಯಲ್ಲಿ ಸ್ಥಾಪಿತವಾಗಿದೆ. ಇದು ರಾಮ ಭಕ್ತ ಹನಮನ ಆಲಯವಾಗಿದ್ದು ಪಿಲುವಾ ಮಹಾವೀರ ಮಂದಿರ ಎಂದು ಕರೆಯಲಾಗುತ್ತದೆ. ಈ ಆಲಯಕ್ಕೆ ದೂರ ದೂರದ ಪ್ರದೇಶಗಳಿಂದ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆಯುತ್ತಾರೆ.

ಇಲ್ಲಿನ ಹನುಮನ ಆಶೀರ್ವಾದದಿಂದ ವಾಸಿಯಾಗದ ಕಾಯಿಲೆಗಳು ಕೂಡಾ ಗುಣವಾಗುತ್ತವೆ ಎಂಬುದು ಇಲ್ಲಿನ ಸ್ಥಳೀಯರ ನಂಬಿಕೆ. ಆದರೆ ಈ ದೇಗುಲದ ವಿಶೇಷತೆ ಅದಲ್ಲ. ಬದಲಾಗಿ ಇಲ್ಲಿ ನೆಲೆಸಿರುವ ಹನುಮಮಥ ದೇವರ ವಿಗ್ರಹದಲ್ಲಿ ಅಡಗಿದೆ ಒಂದು ಚಮತ್ಕಾರ. ಅದೇನೆಂದರೆ ಈ ಆಲಯದಲ್ಲಿ ಹನುಮಂತನ ವಿಗ್ರಹದ ಸುತ್ತ ಸದಾ ಕಾಲ ರಾಮ ನಾಮ ಕೇಳಿ ಬರುತ್ತಲೇ ಇರುತ್ತದೆ. ಅಲ್ಲದೆ ಇಲ್ಲಿ ವಿಗ್ರಹದ ಬಾಯೊಳಗೆ ಹಾಕುವ ಪ್ರಸಾದ ಎಲ್ಲಿ ಹೋಗುತ್ತದೆ ಎಂಬುದು ಇದುವರೆಗೂ ತಿಳಿದಿಲ್ಲ ಎಂಬುದೇ ವಿಸ್ಮಯವನ್ನು ಹುಟ್ಟು ಹಾಕುವ ವಿಚಾರವಾಗಿದೆ.

ಸ್ಥಳ ಪುರಾಣದ ಪ್ರಕಾರ ಮುನ್ನೂರು ವರ್ಷಗಳ ಹಿಂದೆ ರಾಜ ಹುಕ್ಮ ಚಂದ್ರ ಪ್ರತಾಪ ಸಿಂಹನ ಸ್ವಪ್ನದಲ್ಲಿ ಹನುಮಂತನು ತಾನು ಇರುವ ಜಾಗವನ್ನು ತೋರಿಸಿದಾಗ, ಆತ ಅಲ್ಲಿಗೆ ಬಂದು ಅಲ್ಲಿದ್ದ ವಿಗ್ರಹವನ್ನು ತೆಗೆಯಲು ಪ್ರಯತ್ನಿಸಿದರೂ ಸಾಧ್ಯವಾಗದೇ ಇದ್ದಾಗ, ಮಹಾರಾಜನು ಹನುಮನ ವಿಗ್ರಹವಿರುವ ಅದೇ ಜಾಗದಲ್ಲಿ ಆಲಯ ನಿರ್ಮಾಣ ಮಾಡಿಸಿದನು ಎನ್ನಲಾಗಿದೆ. ದಕ್ಷಿಣ ಮುಖವಾಗಿ ಮಲಗಿರುವ ಹನುಮಂತನ ವಿಗ್ರಹ ಈ ಆಲಯದಲ್ಲಿ ಇದ್ದು, ವಿಗ್ರಹದ ಬಳಿ ಸೂಕ್ಷ್ಮವಾಗಿ ಗಮನಿಸಿದಾವ ಉಸಿರಾಟದ ಶಬ್ಧ ಕೂಡಾ ಕೇಳಿ ಬರುತ್ತದೆ ಎನ್ನುತ್ತಾರೆ ಸ್ಥಳೀಯರು‌. ರಾಮ ನಾಮ ಕೇಳಿ ಬರುವ ಈ ಹನುಮಾನ್ ಆಲಯ ನಿಜಕ್ಕೂ ಒಂದು ವಿಸ್ಮಯ ಎನಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here