ಜೀ ಕನ್ನಡದ ಪ್ರಸಿದ್ಧ ಹಾಗೂ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ. ಈ ಕಾರ್ಯಕ್ರಮದ ಮೂಲಕ ಹಲವು ಗಾನ ಪ್ರತಿಭೆಗಳು ನಾಡಿನ ಜನರಿಗೆ ಪರಿಚಯವಾದರು. ಮಾತ್ರವಲ್ಲ ಅವರ ಹಾಡಿಗೆ ಒಂದು ಅದ್ಭುತ ವೇದಿಕೆಯನ್ನು ಕೂಡಾ ನಿರ್ಮಾಣ ಮಾಡುತ್ತಿದೆ. ಅವರ ಉಜ್ವಲ ಭವಿಷ್ಯಕ್ಕೆ ಕೂಡಾ ಈ ವೇದಿಕೆ ಒಂದು ಅವಕಾಶವನ್ನು ಕಲ್ಪಿಸಿದೆ. ಇನ್ನು ಈ ಬಾರಿಯ ಸರಿಗಮಪ ಕೂಡಾ ರಾಜ್ಯದ ಮೂಲೆ ಮೂಲೆಗಳಿಂದ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಹಾಡುವ, ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಅವಕಾಶ ನೀಡಿದೆ. ಅಂತಹ ಸುವರ್ಣಾವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಈಗ ನಾಡಿನ ಜನರ ಮೆಚ್ಚಿನ ಗಾಯಕನಾಗಿ ಹೊರಹೊಮ್ಮುತ್ತಿದ್ದಾನೆ ಹನುಮಂತು.

ಇನ್ನು ಹನುಮಂತಪ್ಪ ತನ್ನ ಹಾಡಿನ ಮೂಲಕ ಈಗಾಗಲೇ ಶೋನ ನಿರ್ಣಾಯಕರನ್ನು ಮಾತ್ರವಲ್ಲದೆ,
ಸಿನಿಮಾ ನಿರ್ದೇಶಕ ಯೋಗರಾಜ ಭಟ್ಟರ ಮನಸ್ಸನ್ನು ಕೂಡಾ ಗೆದ್ದು, ಸಿನಿಮಾದಲ್ಲಿ ಹಾಡುವ ಅವಕಾಶವನ್ನು ಕೂಡಾ ಪಡೆದುಕೊಂಡ ಪ್ರತಿಭಾವಂತ. ಟಿವಿ ಯಲ್ಲಿ ಕಾರ್ಯಕ್ರಮವನ್ನು ನೋಡುವ ಲಕ್ಷಾಂತರ ವೀಕ್ಷಕರ ಮನಸ್ಸನ್ನು ಕೂಡಾ ಗೆದ್ದಿರುವ ಗಾಯಕನಾಗಿ ಹೊರಹೊಮ್ಮುತ್ತಿದ್ದು, ಹನುಮಂತಪ್ಪ ಈ ಶೋ ನ ನಿರೂಪಕಿಯಾದ ಅನುಶ್ರೀ ಯವರಿಗೆ ಈ ಹನುಮಂತಪ್ಪ ನು ಒಂದು ಸುಂದರವಾದ ಉಡುಗೊರೆಯನ್ನು ಸಹಾ ನೀಡಿದ್ದಾನೆ.

ಹನುಮಂತಪ್ಪ ಅನುಶ್ರೀ ಅವರಿಗೆ ನೀಡಿರುವ ಆ ಉಡುಗೊರೆ ಬಹಳ ಅಮೂಲ್ಯ ಹಾಗೂ ಒಂದು ಉತ್ತಮ ಸ್ನೇಹದ ಸಂಕೇತವಾಗಿದೆ. ಇಷ್ಟ ಕ್ಕೂ ಹನುಮಂತಪ್ಪ ಕೊಟ್ಟಿರುವ ಉಡುಗೆ ಏನೆಂದರೆ ತನ್ನ ತಾಯಿಯ ಧರಿಸುತ್ತಿದ್ದ ಸಾಂಪ್ರದಾಯಿಕ ಉಡುಗೆಯನ್ನು ಅನುಶ್ರೀ ಅವರಿಗೆ ಕಾಣಿಕೆ ಯಾಗಿ ನೀಡಿದ್ದಾನೆ. ಇನ್ನು ಅನುಶ್ರೀ ಅವರು ಆ ಅಂದವಾದ ವಸ್ತ್ರ ಧರಿಸಿ, ಹನುಮಂತಪ್ಪ ಅವರ ತಾಯಿಯ ಜೊತೆ ತೆಗೆಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹನುಮಂತಪ್ಪ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here