ಸರಿಗಮಪ ಸೀಸನ್ 15 ಅಂತಿಮ ಘಟ್ಟ ತಲುಪುವ ಹಂತಕ್ಕೆ ಅಂದರೆ ಫೈನಲ್ಸ್ ನ ಕಡೆ ಅಡಿ ಇಟ್ಟಿದೆ. ಆರು ಜನ ಸ್ಪರ್ಧಿಗಳು ಫೈನಲ್ಸ್ ತಲುಪಿದ್ದು ಅದರಲ್ಲಿ ಈ ಬಾರಿ ಬಹಳಷ್ಟು ಆಸಕ್ತಿ ಕೆರಳಿಸಿದ ಪ್ರತಿಭಾವಂತ ಹನುಮಂತಣ್ಣ ಕೂಡಾ ಇರುವುದು ಒಂದು ಸಂತಸದ ವಿಷಯವಾಗಿದೆ. ತನ್ನ ಪ್ರತಿಭೆಯ ಬಲದಿಂದಾಗಿ ಹನುಮಂತಣ್ಣ ಪ್ಲಾಟಿನಂ ಟಿಕೆಟ್ ಪಡೆಯುವ ಮೂಲಕ ಹನುಮಂತಣ್ಣ ಫೈನಲ್ಸ್ ತಲುಪಿರುವುದು ಅನೇಕರಿಗೆ ಸಂತಸವನ್ನು ತಂದು ಕೊಟ್ಟಿದೆ. ಹನುಮಂತಣ್ಣ ಫೈನಲ್ಸ್ ನಲ್ಲಿ ಗೆಲ್ಲುವುದು , ಬಿಡುವುದರ ನಿರ್ಣಯ ಮುಂದೆ ಆಗಲಿದೆ. ಆದರೆ ಈಗಾಗಲೇ ಆತ ಜನರ ಹಾಗೂ ಜಡ್ಜ್ ಗಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಹನುಮಂತಣ್ಣನಿಗೆ ಈಗಾಗಲೇ ವಿಶೇಷ ಉಡುಗೊರೆಗಳು ದೊರೆತಿವೆ. ಆ ವಿಶೇಷ ಉಡುಗೊರೆಗಳು ಏನು? ಕೊಟ್ಟವರಾರು? ಎಂಬ ಆಸಕ್ತಿಕರ ಮಾಹಿತಿ ಇಲ್ಲಿದೆ. ಹನುಮಂತಣ್ಣ ಕಳೆದ ವಾರ ಜೋಗಿ ಸಿನಿಮಾದ ಸುಪ್ರಸಿದ್ಧ ಹಾಡಾದ ಬೇಡುವೆನು ವರವನ್ನು ಹಾಡು ಹಾಡುವ ಮೂಲಕ ಎಲ್ಲರನ್ನು ರಂಜಿಸಿದ್ದರು. ಅಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಹಾಗರು ಹಂಸಲೇಖ ಅವರ ಪತ್ನಿ ಶ್ರೀಮತಿ ಲತ ಅವರು ಹನುಮಂತಣ್ಣ ನಿಗೆ ತಾವೇ ಖುದ್ದಾಗಿ ಹಾರ್ಮೋನಿಯಂ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿರುವ ಖ್ಯಾತ ಹಿನ್ನೆಲೆ ಗಾಯಕರಾದ ವಿಜಯ್ ಪ್ರಕಾಶ್ ಅವರು ಸಹಾ ಈ ಹಿಂದೆ ಹನುಮಂತಣ್ಣ ನಿಗೆ ಒಂದು ಉಡುಗೊರೆ ನೀಡಿದ್ದರು. ಹನುಮಂತಣ್ಣ ಹಾಡುಗಳನ್ನು ಮೊಬೈಲ್ ನಲ್ಲಿ ಕೇಳುವ ಮೂಲಕ ಅಭ್ಯಾಸ ಮಾಡುತ್ತಿದ್ದರಿಂದ, ಅನುಕೂಲವಾಗಲಿ ಎಂದು ಒಂದು ಹಿಯರ್ ಫೋನ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಹೀಗೆ ಹನುಮಂತಣ್ಣ ಫೈನಲ್ ತಲುಪುವ ಮೊದಲೇ ಉಡುಗೊರೆಗಳನ್ನು ಪಡೆದು ಸಂಭ್ರಮಿಸುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here