ಟೀಂ ಇಂಡಿಯಾ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಸರ್ಬಿಯಾದ ನಟಿ ನತಾಶ ಸ್ಟ್ಯಾಂಕೋವಿಕ್ ಜತೆ ಎಂಗೇಜ್​ಮೆಂಟ್​​ ಮಾಡಿಕೊಂಡಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ದುನಿಯಾ ವಿಜಯ್ ಅಭಿನಯದ “ದನ ಕಾಯೋನು” ಚಿತ್ರದ ಹಾಡೊಂದರಲ್ಲಿ ಡ್ಯಾನ್ಸ್ ಮಾಡಿರುವ ನಟಿ ನತಾಶ ಸ್ಟ್ಯಾಂಕೋವಿಕ್ ಜೊತೆ ಐಟಂ ಸಾಂಗ್​ನಲ್ಲಿ ನಟಿಸಿದ್ದರು. ಹಾರ್ದಿಕ್ ಪಾಂಡ್ಯಾ ವಜ್ರದ ಉಂಗುರವನ್ನು ತೊಡಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.ದುಬೈನಲ್ಲಿ ಎಂಜೇಗ್ ಮೆಂಟ್ ಉಂಗುರ ತೊಟ್ಟಿರುವ ಫೋಟೋವನ್ನು ಹಾರ್ದಿಕ್ ಇನ್​​​ಸ್ಟಾಗ್ರಾಮ್​​ನಲ್ಲಿ ಶೇರ್ ಮಾಡಿದ್ದಾರೆ. ಈ ಪೋಟೋ ನೋಡಿದ ಅಭಿಮಾನಿಗಳು ಶುಭಾಶಯಗಳನ್ನ ತಿಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಸಖತ್ ವೈರಲ್​ ಆಗುತ್ತಿದೆ.

ಇಷ್ಟು ದಿನ ಹಲವು ನಟಿಯರ ಜೊತೆಗೆ ಹಾರ್ದಿಕ್ ಪಾಂಡ್ಯ ಹೆಸರು ತಳುಕು ಹಾಕಿಕೊಂಡಿತ್ತು. ಆದ್ರೀಗ, ತಮ್ಮ ಮನಸ್ಸಿನಲ್ಲಿ ಇರುವ ಹುಡುಗಿ ನತಾಶ ಸ್ಟ್ಯಾಂಕೋವಿಕ್. ಹಾಗೂ ಈಕೆಯೇ ತಮ್ಮ ಮನದರಸಿ ಎಂಬುದನ್ನ ಹಾರ್ದಿಕ್ ಪಾಂಡ್ಯ ಖಚಿತ ಪಡಿಸಿದ್ದಾರೆ.ಹಾರ್ದಿಕ್ ಪಾಂಡ್ಯ ಹೊಸ ವರ್ಷದಾಚರಣೆಗೆಂದು ನತಾಶ ಸ್ಟ್ಯಾಂಕೋವಿಕ್ ಜೊತೆಗೆ ದುಬೈಗೆ ಹೋಗಿದ್ದರು. ನ್ಯೂ ಇಯರ್​ ಸೆಲೆಬ್ರೇಷನ್​ ಮಾಡುವ ವೇಳೆ ವಜ್ರದ ಉಂಗುರುವನ್ನು ನತಾಶ ಬೆರಳಿಗೆ ತೊಡಿಸಿದ್ದಾರೆ.ನತಾಶಾ ಸ್ಟ್ಯಾಂಕೋವಿಕ್ ಮೂಲತಃ ಸರ್ಬಿಯಾ ಮೂಲದ ಯುವತಿ. ಭಾರತೀಯ ಚಿತ್ರರಂಗದಲ್ಲಿ ನಟಿಯಾಗಿ, ರಿಯಾಲಿಟಿ ಟಿವಿ ಸ್ಟಾರ್ ಆಗಿ ಗುರುತಿಸಿಕೊಂಡಿರುವ ನತಾಶಾ ಸ್ಟ್ಯಾಂಕೋವಿಕ್, ಮಾಡೆಲ್ ಹಾಗೂ ಡ್ಯಾನ್ಸರ್ ಆಗಿ ಕೂಡ ಪ್ರಖ್ಯಾತಿಯನ್ನು ಹೊಂದಿದ್ದು ಹಲವಾರು ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದಾರೆ. 2018 ರಲ್ಲಿ ಬಿಡುಗಡೆ ಆದ ಶಾರುಖ್ ಖಾನ್ ಅಭಿನಯದ “ಝೀರೋ” ಚಿತ್ರದಲ್ಲಿ ನತಾಶ ಸ್ಟ್ಯಾಂಕೋವಿಕ್ ಅಭಿನಯಿಸಿದ್ದರು.

ಇದಲ್ಲದೇ ಸತ್ಯಾಗ್ರಹ, 7 ಹವರ್ಸ್ ಟು ಗೊ, ಡ್ಯಾಡಿ, ಜೀರೋ ಅಂತಹ ಚಿತ್ರಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ.ಈಗಾಗಲೇ ನಟಾಶಳನ್ನು ಹಾರ್ದಿಕ್ ಪಾಂಡ್ಯ ತಮ್ಮ ಕುಟುಂಬಕ್ಕೆ ಪರಿಚಯಿಸಿದ್ದಾರೆ. ಬಹುತೇಕ ಎಲ್ಲ ಕೌಟುಂಬಿಕ ಕಾರ್ಯಕ್ರಮಗಳಿಗೂ ನತಾಶಾ ಹೋಗ್ತಾರಂತೆ. ಅಲ್ಲದೇ ಇತ್ತೀಚಿಗಷ್ಟೆ ಹಾರ್ದಿಕ್ ಅವರ ಮನೆಯಲ್ಲಿ ನಡೆದಿದ್ದ ಬರ್ತಡೇಯಲ್ಲೂ ನಟಾಶ ಕಾಣಿಸಿಕೊಂಡಿದ್ದು ಬಾರಿ ಮಟ್ಟದಲ್ಲಿ ಸುದ್ದಿಯಾಗಿದ್ದಲ್ಲದೆ ಇವರಿಬ್ಬರ ನಡುವೆ ಏನೋ ನಡೆಯುತ್ತದೆ ಎಂಬ ಗುಸುಗುಸು ಸ್ಟಾರ್ಟ್​ ಆಗಿತ್ತು. ಇದೀಗ ಹಾರ್ದಿಕ್ ಪಾಂಡ್ಯ ಅಧಿಕೃತವಾಗಿ ಘೋಷಣೆ ಮಾಡುವುದರ ಮೂಲಕ ಎಲ್ಲ ಗೊಂದಲಗಳಿಗೂ ತೆರೆಎಳೆದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here