ಬಿಗ್ ಬಾಸ್ ಸೀಸನ್ 7 ರಲ್ಲಿ ಎಂಟನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದೆ. ಈ ವಾರ ಮನೆಯಿಂದ ಹೊರ ಬಂದವರು ಏಳನೇ ವಾರದಲ್ಲಿ ಮನೆಯೊಳಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ರಕ್ಷಾ ಸೋಮಶೇಖರ್ ಅವರು. ಈ ವಾರ ಮನೆಯ ಕ್ಯಾಪ್ಟನ್ ಬಿಟ್ಟು ಉಳಿದ ಎಲ್ಲಾ ಸದಸ್ಯರು ಕೂಡಾ ನಾಮಿನೇಟ್ ಆಗಿದ್ದರು‌‌‌. ಅದಕ್ಕೆ ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬ ಕುತೂಹಲ ಸಹಜವಾಗಿಯೇ ಇದ್ದು, ಅದಕ್ಕೆ ತೆರೆ ಬಿದ್ದಾಗಿದೆ. ಬಿಗ್ ಬಾಸ್ ಹೌಸ್ ನಲ್ಲಿ ಇತ್ತೀಚಿಗೆ ಹರೀಶ್ ರಾಜ್ ಅವರು ಒಬ್ಬರೇ ಕುಳಿತು ಕುಕ್ಕರ್ ಜೊತೆ ನಡೆಸಿದ ಸಂಭಾಷಣೆ ಒಂದು ಎಲ್ಲರ ಗಮನವನ್ನು ಸೆಳೆದಿತ್ತು.

ಹರೀಶ್ ಅವರು ಒಬ್ಬರೇ ಕುಕ್ಕರ್ ಸ್ಟವ್ ಮೇಲಿಟ್ಟು ಒಬ್ಬರೇ ಕುಳಿತಿದ್ದಾಗ ಮನೆಯ ಸದಸ್ಯರಾರು ತನ್ನ ಜೊತೆಗಿಲ್ಲವೆಂದು ಕುಕರ್ ಜೊತೆ ಅಣ್ಣಾವ್ರ ಶೈಲಿಯಲ್ಲಿ ಮಾತನಾಡಿದ್ದಾರೆ. ಅಣ್ಣಾವ್ರ ಶೈಲಿಯಲ್ಲಿ ಮಾತನಾಡುತ್ತಾ ಅವರು ಜೀವನದ ಸಾರವನ್ನು ಬಹಳ ಚೆನ್ನಾಗಿ ಹೇಳಿದ್ದರು. ಅವರು ಮಿಮಿಕ್ರಿ ಮಾಡಿದ್ದು ಬಹಳ ಚೆನ್ನಾಗಿತ್ತು. ಈ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಅವರು ಕೂಡಾ ಆ ವಿಷಯದ ಬಗ್ಗೆ ಮಾತನಾಡಿದ್ದಾರೆ. ಹರೀಶ್ ರಾಜ್ ಅವರು ಅಣ್ಣಾವ್ರ ಶೈಲಿಯಲ್ಲಿ ಮಾತನಾಡಿದ್ದನ್ನು ಮೆಚ್ಚಿಕೊಂಡ ಸುದೀಪ್ ಅವರು ಹರೀಶ್ ರಾಜ್ ಅವರಿಗೆ ಮನೆಯ ಸದಸ್ಯರ ಬಗ್ಗೆ ಅದೇ ಶೈಲಿಯಲ್ಲಿ ಮಾತನಾಡಲು ಹೇಳಿದ್ದಾರೆ.

ಹರೀಶ್ ರಾಜ್ ಅವರು ಆಗ ಅಣ್ಣಾವ್ರ ಶೈಲಿಯಲ್ಲಿ ವಾಸುಕಿ ವೈಭವ್ ಕುರಿತಾಗಿ, ಚಂದನ್ ಆಚಾರ್ ಅವರ ಬಗ್ಗೆ ಮತ್ತ ತನ್ನ ಪಕ್ಕದಲ್ಲಿ ಕುಳಿತಿದ್ದ ಚೈತ್ರ ಕೊಟ್ಟೂರು ಅವರ ಬಗ್ಗೆ ಹಾಸ್ಯದ ಮಾತುಗಳನ್ನು ಆಡಿದ್ದಾರೆ. ಅವರ ಮಿಮಿಕ್ರಿ ಇರುವ ದೃಶ್ಯದ ಪ್ರೋಮೋವನ್ನು ವಾಹಿನಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಹರೀಶ್ ರಾಜ್ ಅವರು ಡಾ.ರಾಜ್‍ಕುಮಾರ್ ಅವರ ರೀತಿ ಮಾತನಾಡಿರುವ ಸನ್ನಿವೇಶ ಹಾಗೂ ಅದರ ಸಂಪೂರ್ಣವಾದ ಆನಂದಕ್ಕೆ ಇಂದು ರಾತ್ರಿಯ ಎಪಿಸೋಡ್ ತಪ್ಪದೇ ನೋಡಬೇಕು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here