ಭಾರತದ ಸೇನೆಗೆ ಹೊಸ ಶಕ್ತಿಯನ್ನು ನೀಡಲಿದೆ, ಶತೃ ದೇಶಗಳಿಗೆ ಒಂದು ಭಯವನ್ನು ಹುಟ್ಟಿಸುತ್ತದೆ, ಶತೃ ದೇಶಗಳು ಭಾರತದ ಕಡೆ ನೋಡಲು ಕೂಡಾ ಆಲೋಚನೆ ಮಾಡಬೇಕು ಎಂದೇ ಹೇಳಲಾಗಿದ್ದ, ಬಹು ನಿರೀಕ್ಷಿತ ಯುದ್ಧ ವಿಮಾನಗಳಾದ ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್‌ನಿಂದ ಸುದೀರ್ಘವಾದಂತಹ ಪ್ರಯಾಣವನ್ನು ಮುಗಿಸಿದ ಬಳಿಕ ಹರಿಯಾಣದ ಅಂಬಾಲಾ ವಾಯುನೆಲೆಗೆ ಬಂದು ಸುರಕ್ಷಿತವಾಗಿ ಇಲ್ಲಿನ ವಾಯು ನೆಲೆಯಲ್ಲಿ ಭೂ ಸ್ಪರ್ಶ ಮಾಡಿವೆ. ಈ ವಿಮಾನಗಳು ಬಂದಿಳಿದಾಗ ವಾಯುನೆಲೆಯಲ್ಲಿ ಟ್ಯಾಂಕರ್‌ಗಳ ಮೂಲಕ ವಾಯು ಸೇನೆಯು ವಾಟರ್ ಸೆಲ್ಯೂಟ್ ಮೂಲಕ ಸ್ವಾಗತವನ್ನು ನೀಡಲಾಗಿದೆ.

ರಫೇಲ್ ಯುದ್ಧ ವಿಮಾನಗಳು ಜಗತ್ತಿನಲ್ಲಿನ ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ವಿಮಾನಗಳು ಸೋಮವಾರ ಫ್ರಾನ್ಸ್‌ನ ಮೆರಿಗ್ನಾಕ್‌ನಿಂದ ಪ್ರಯಾಣ ಆರಂಭಿಸಿದ್ದವು. ಅವು ಅಲ್ಲಿಂದ ಒಟ್ಟು 7,364 ಕಿ.ಮೀ ಗಗನ ಮಾರ್ಗವನ್ನು ಕ್ರಮಿಸಿ ನಮ್ಮ ಭಾರತದ ವಾಯುನೆಲೆಯನ್ನು ಸೇರಿಕೊಂಡಿವೆ. ಭಾರತ ಮತ್ತು ಫ್ರಾನ್ಸ್ ನಡುವಿನ ಒಪ್ಪಂದದ ಪ್ರಕಾರ ಮೊದಲ ಭಾಗವಾಗಿ ಈಗ ಫ್ರಾನ್ಸ್‌ನಿಂದ ಐದು ರಫೇಲ್‌ ವಿಮಾನಗಳು ಭಾರತವನ್ನು ತಲುಪುವ ಮೂಲಕ ಭಾರತೀಯ ವಾಯುಸೇನೆಯ ಬಲ ಹೆಚ್ಚಿಸಿವೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here