ಕೊಡಗಿನಲ್ಲಿ ರೆಸಾರ್ಟ್ ಗಳಿವೆ, ಹೋಂ ಸ್ಟೇ ಗಳಿವೆ ಆದರೆ ಸುಸಜ್ಜಿತವಾದ ಒಂದು ಆಸ್ಪತ್ರೆ ಕೂಡಾ ಇಲ್ಲ ಎಂದು ಕೊಡಗಿನ ಜನರು ಆನ್ಲೈನ್ ಅಭಿಯಾನದ ಮೂಲಕ ಆಸ್ಪತ್ರೆ ಬೇಕೆಂಬ ಅಭಿಯಾನವನ್ನು ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ ಸ್ಯಾಂಡಲ್ ವುಡ್ ನಿಂದ ಶಿವರಾಜ್ ಕುಮಾರ್ ಅವರು ಪ್ರತಿಕ್ರಿಯಿಸಿ ಸ್ಯಾಂಡಲ್ ವುಡ್ ನ ಬೆಂಬಲ ಈ ಅಭಿಯಾನಕ್ಕೆ ಇದ್ದೇ ಇರುತ್ತದೆಂದು ಹೇಳಿದ್ದರು. ಶಿವಣ್ಣನವರ ನಂತರ ಈಗ ಸ್ಯಾಂಡಲ್ ವುಡ್ ನ ಇಬ್ಬರು ಖ್ಯಾತ ನಟಿಯರಾದ ರಶ್ಮಿಕ ಮಂದಣ್ಣ ಹಾಗೂ ಹರ್ಷಿಕ ಪೂಣಚ್ಚ ಅವರು ಬೆಂಬಲ ಸೂಚಿಸುತ್ತಾ ಸಿಎಂ ಅವರಲ್ಲಿ ಮನವಿಯನ್ನು ಮಾಡಿಕೊಂಡು, ಕೊಡಗಿನ ಆಸ್ಪತ್ರೆಯ ಅಭಿಯಾನಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.

ಈ ಇಬ್ಬರೂ ನಟಿಯರು ವಿಡಿಯೋ ಹಾಕುವ ಮೂಲಕ ಟ್ವೀಟ್ ಮಾಡಿದ್ದು, ಕೊಡಗಿನಲ್ಲಿ ನಡೆಯುತ್ತಿರುವ ಆಸ್ಪತ್ರೆ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ರಶ್ಮಿಕಾ ಅವರು ತಮ್ಮ ವಿಡಿಯೋಗದಲ್ಲಿ ನಮಗೆ ಬಹುಮುಖ್ಯವಾಗಿ ಬೇಕಾಗಿರುವುದು ಆಸ್ಪತ್ರೆ. ಆದರೆ ನಮ್ಮ ಕೂರ್ಗ್ ನಲ್ಲಿ ಒಳ್ಳೆಯ ಆಸ್ಪತ್ರೆಯಿಲ್ಲ. ಒಂದೊಳ್ಳೆ ಆಸ್ಪತ್ರೆಗಾಗಿ ನಾವು ಬಹು ದೂರ ಪ್ರಯಾಣಿಸಬೇಕು. ಅದರ ಬದಲು ಕೊಡಗಿನಲ್ಲೇ ಒಂದು ಆಸ್ಪತ್ರೆ ಇದ್ದರೆ ಜನರಿಗೆ ಅನುಕೂಲವಾಗುತ್ತದೆ‌ ಎಂದು ಅದಕ್ಕೆ ಸ್ಪಂದಿಸಿ ಎಂದು ಸಿಎಂ ಅವರನ್ನು ಟ್ಯಾಗ್ ಮಾಡಿದ್ದಾರೆ.

ಹರ್ಷಿಕಾ ಪೂಣಚ್ಚ ಅವರು ಟ್ವೀಟ್ ಮಾಡಿರುವ ವಿಡಿಯೋದಲ್ಲಿ ನಾನು ಈ ಅಭಿಯಾನಕ್ಕೆ ಬೆಂಬಲ ನೀಡುತ್ತಿದ್ದೇನೆ. ಇತ್ತೀಚೆಗಷ್ಟೇ ನನ್ನ ತಂದೆಯವರಿಗೆ ಹುಷಾರಿಲ್ಲದೆ ಆದಾಗ ಬೆಂಗಳೂರಿಗೆ ಕರೆದುಕೊಂಡು ಬರಬೇಕಾಯಿತು. ಏಕೆಂದರೆ ಕೊಡಗಿನಲ್ಲಿ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ‌. ಇಂತಹ ತೊಂದರೆ ಬೇರೆಯವರಿಗೆ ಆಗಬಾರದು‌. ಸಾಕಷ್ಟು ವರ್ಷಗಳಿಂದ ಜನರು ಈ ತೊಂದರೆ ಅನುಭವಿಸುತ್ತಿದ್ದು, ಮುಂದೆ ಇಂತಹ ಸಮಸ್ಯೆ ಆಗಬಾರದು. ಕೊಡಗಿನಲ್ಲಿ ಆಸ್ಪತ್ರೆ ಬರಲೇಬೇಕು. ಅಭಿಯಾನ ಆರಂಭಿಸಿದವರಿಗೆ ಧನ್ಯವಾದಗಳು ಎಂದು ತಮ್ಮ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ ಹರ್ಷಿಕಾ ಪೂಣಚ್ಚ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here