ಹಾಸನದಲ್ಲಿ ಹೆಚ್ ಡಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎ.ಮಂಜು ಅವರ ವಿರುದ್ಧ  ಮೂವತ್ತ ಮೂರು ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಿ ಗೆಲುವಿನ ಬಾಗಿಲಿನ ಕಡೆ ಹೆಜ್ಜೆ ಇಟ್ಟಿದ್ದಾರೆ.ಇನ್ನು ತುಮಕೂರಿನ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಹೆಚ್ ಡಿ ದೇವೇಗೌಡರು ಹಿನ್ನಡೆ ಮುನ್ನಡೆ ಹಾವು ಏಣಿ ಆಟದಂತೆ ಸಾಗುತ್ತಿದೆ.

ಲೋಕಸಮರದ ಮತದಾನ ಎಣಿಕೆ ಬಹಳ ಬಿರುಸಿನಿಂದ ಸಾಗಿದೆ. ಕೋಲಾರದ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುಮಾರು 18,000 ಮತಗಳ ಭಾರೀ ಅಂತರದಿಂದ ಮುನ್ನಡೆಯನ್ನು ಸಾಧಿಸಿದ್ದಾರೆ. ಇದು ಒಂದು ಹೊಸ ವಿಷಯವೇ ಆಗಿದೆ. ಕೆ.ಹೆಚ್.ಮುನಿಯುಪ್ಪನವರು ಚುನಾವಣೆಗೆ ಸ್ಪರ್ಧಿಸುವಾಗ ಕಾಂಗ್ರೆಸ್ ಅವರಿಗೆ ತೀವ್ರ ವಿರೋಧ ವ್ಯಕ್ತ ಪಡಿಸಿತ್ತು‌. ಆದರೆ ಈಗ ಚುನಾವಣಾ ಕೌಂಟಿಂಗ್ ನಡೆಯುವಾಗ ಬಿಜೆಪಿ ಅಭ್ಯರ್ಥಿ ಸಾಗುತ್ತಿರುವ ವೇಗ ಎಲ್ಲರ ಗಮನ ಸೆಳೆದಿದೆ. ಇದು ಒಂದು ಸಂತಸದ ವಿಚಾರವಾಗಿದೆ ಬಿಜೆಪಿ ಪಾಳಯಕ್ಕೆ‌. ಏಕೆಂದರೆ ಕೋಲಾರದಲ್ಲಿ ಬಿಜೆಪಿಗೆ ಅಷ್ಟಾಗಿ ಬೆಂಬಲ ಇರಲಿಲ್ಲ.

ನಿಖಿಲ್ ಕುಮಾರಸ್ವಾಮಿ ಕೂಡಾ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾದ ಸುಮಲತ ಅವರನ್ನು ಮೊದಲ ಹಂತದಲ್ಲಿ ಮೀರಿಸಿ ಸುಮಾರು ಒಂದು ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಎನ್ಡಿಎ 259 ಕ್ಚೇತ್ರದಲ್ಲಿ ಮುನ್ನಡೆ ಸಾಧಿಸಿದೆ‌. ಯುಪಿಎ 118 ಕಡೆ ಮುನ್ನಡೆ ಸಾಧಿಸಿದೆ. ಎಲ್ಲಕ್ಕಿಂತ ಆಕರ್ಷಕ ಎಂದರೆ ದೇವೇಗೌಡರು ಅವರ ಪ್ರತಿಸ್ಪರ್ಧಿ ನಡುವೆ ಕೆಲವೇ ಕೆಲವು ಮತಗಳ ಅಂತರದಿಂದ ಮುನ್ನಡೆಯಲ್ಲಿದೆ. ಮೈಸೂರಿನಲ್ಲಿ ಕೂಡಾ ಬಿಜೆಪಿ ಅಭ್ಯರ್ಥಿಯಾದ ಪ್ರತಾಪ್ ಸಿಂಹ ಮುನ್ನಡೆ ಸಾಧಿಸಿದ್ದಾರೆ. ಅಮೇತಿಯಲ್ಲಿ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿ ಅವರ ವಿರುದ್ಧ ಮುನ್ನಡೆಯನ್ನು ಸಾಧಿಸಿ ಮುಂದುವರೆದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here