ಬಸ್ ನಿಲ್ದಾಣದಲ್ಲಿ ಯುವಕ ಹಾಗೂ ಯುವತಿಯ ನಡೆದ ಮಾರಾಮಾರಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಯುವತಿಯನ್ನು ಚುಡಾಯಿಸಿದ್ದಕ್ಕೆ ಕಾಲೇಜು ಯುವಕ ಮತ್ತು ಯುವತಿಯರ ನಡುವೆ ಸಾರ್ವಜನಿಕರು ಇರುವ, ಬಸ್ ನಿಲ್ದಾಣ ದಲ್ಲಿಯೇ ಮಾರಾಮಾರಿ ನಡೆದಿರುವುದನ್ನು ಕಾಣಬಹುದಾಗಿದ್ದು, ಇದು ಹಾಸ‌ನ ಜಿಲ್ಲೆಯ ಸಿಟಿ ಬಸ್​ ನಿಲ್ದಾಣದಲ್ಲಿ ನಡೆದಿದೆ. ನಗರ ಸಾರಿಗೆ ಬಸ್​ನಿಲ್ದಾಣಕ್ಕೆ ಪ್ರತಿ ದಿನವೂ ಬೇರೆ ಬೇರೆ ಊರುಗಳಿಂದ ಸಾವಿರಾರು ಯುವಕರು ಬರುತ್ತಾರೆ. ಆದರೆ ಯುವಕರ ಗುಂಪೊಂದು ಸಭ್ಯತೆಯನ್ನು ಮೀರಿ ನಡೆದುಕೊಂಡ ವಿಧಾನ ಈ ಗಲಾಟೆಗೆ ಕಾರಣವಾಗಿದೆ ಎನ್ನಲಾಗಿದೆ.

ಯುವಕರ ಗುಂಪೊಂದು ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿಯೊಬ್ಬಳನ್ನು ಚುಡಾಯಿಸಿದ್ದಕ್ಕಾಗಿ, ತಾಳ್ಮೆ ಕಳೆದುಕೊಂಡು ಯುವತಿ ಹುಡುಗ‌ನ ಬಟ್ಟೆ ಕಿತ್ತು ಗಲಾಟೆ ಮಾಡಿದ್ದಾಳೆ. ಅದಾದ ನಂತರ ಅಲ್ಲಿದ್ದ ಯುವಕರು ಕೂಡಾ ಯುವತಿಯ ಮೇಲೆ ಗಲಾಟೆ ಮಾಡಿರುವುದು ಮಾತ್ರವಲ್ಲದೇ, ಯುವತಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಆ ಸಂದರ್ಭದಲ್ಲಿ ಅಲ್ಲಿ ಇದ್ದು ಇತರೆ ವಿದ್ಯಾರ್ಥಿಗಳು ಈ ದೃಶ್ಯವನ್ನು ತಮ್ಮ ಮೊಬೈಲ್ ಗಳಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.

https://twitter.com/suddimanenews/status/1192811253703405568?s=19

ಈಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾಕಷ್ಟು ಜನ ಇದರ ಬಗ್ಗೆ ಪ್ರತಿಕ್ರಿಯೆಗಳನ್ನು ನೀಡುತ್ತಿರುವುದು ಹೌದು. ಆದರೆ ಸಾರ್ವಜನಿಕ ಸ್ಥಳದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ತಕ್ಷಣಕ್ಕೆ ಅದರ ಬಗ್ಗೆ ಪ್ರತಿಕ್ರಿಯಿಸಿ ಅವರ ನಡುವಿನ ಜಗಳವನ್ನು ನಿಲ್ಲಿಸುವ ಪ್ರಯತ್ನವನ್ನು ಯಾರೂ ಮಾಡದೇ ಇದ್ದುದ್ದು ಒಂದು ಕ್ಷಣ ಆಲೋಚಿಸುವಂತೆ ಮಾಡುತ್ತಿದೆ ಎಂಬುದು ಕೂಡಾ ವಾಸ್ತವ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here