ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಮಂಡಿಸಿದ ಬಜೆಟ್ ನ ಬಗ್ಗೆ ಮಾತನಾಡುತ್ತಾ ಬಜೆಟ್ ನಲ್ಲಿ ನೀಡಿರುವ ಅನುದಾನ ಸುಣ್ಣ ಬಣ್ಣ ಬಳಿಯಲು ಕೂಡಾ ಸಾಕಾಗುವುದಿಲ್ಲ ಎಂದು ಟೀಕೆ ಮಾಡಿದ್ದಾರೆ. ಮಾದ್ಯಮಗಳ ಮುಂದೆ ಮಾತನಾಡುವ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಬಜೆಟ್ ನ ಎರಡನೇ ಪುಟದಲ್ಲೋ, ಮೂರನೇ ಪುಟದಲ್ಲೋ ನರೇಂದ್ರ ಮೋದಿಯವರ ಮಾರ್ಗದಲ್ಲಿ ಹೋಗುವುದಾಗಿ ಹೇಳಿಕೊಂಡಿದ್ದಾರೆ, ಆದರೆ ಕೇಂದ್ರದ ಅನುದಾನ ಬರುವುದಿಲ್ಲ ಅದಕ್ಕೆ ಹೀಗೆ ಬಜೆಟ್ ನಲ್ಲಿ ಏನೂ ಇಲ್ಲ ಎಂದು ವ್ಯಂಗ್ಯವಾಡುವ ಮೂಲಕ ಬಜೆಟ್ ಬಗ್ಗೆ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ನಮ್ಮ ರಾಜ್ಯ ತೆರಿಗೆ ಸಂಗ್ರಹದಲ್ಲಿ ಹಿಂದೆ ಬಿದ್ದಿರಲಿಲ್ಲ. ಇಷ್ಟೆಲ್ಲಾ ಬಿಕ್ಕಟ್ಟುಗಳಿದ್ದರೂ ಕೂಡಾ ತೆರಿಗೆ ಸಂಗ್ರಹದಲ್ಲಿ ಹಿಂದೆ ಬಿದ್ದಿಲ್ಲ. ಕಳೆದ ಬಾರಿ ನಾವು ಬಜೆಟ್ ಮಂಡನೆ ಮಾಡಿದಾಗ ಏನೆಲ್ಲಾ ನಿರೀಕ್ಷೆ ಇಟ್ಟುಕೊಂಡಿದ್ದೆವೋ ಆ ನಿರೀಕ್ಷೆಗಳ ನಿಕಟಕ್ಕೆ ನಾವು ಹೋಗಿದ್ದರು. ಅಲ್ಲದೆ 14% ಹೆಚ್ಚಿನ ತೆರಿಗೆಯನ್ನು ಸಂಗ್ರಹ ಕೂಡಾ ಮಾಡಲಾಗಿತ್ತು ಎಂದು ಹೇಳಿದ್ದಾರೆ. ಆದರೆ ಈ ಬಾರಿ ಬಜೆಟ್ ನ ಅನುದಾನವನ್ನು ನೋಡಿದಾಗ, ಅದರಲ್ಲೂ ವಿಶೇಷವಾಗಿ ಆರೋಗ್ಯ ಇಲಾಖೆಗೆ ನೀಡಿರುವ ಅನುದಾನ ಗಮನಿಸಿದರೆ ಅದು ಸುಣ್ಣ ಬಣ್ಣ ಬಳಿಯಲು ಕೂಡಾ ಸಾಕಾಗುವುದಿಲ್ಲ ಎಂದಿದ್ದಾರೆ.

ಬಜೆಟ್ ನಲ್ಲಿ ಯಾವುದೂ ಸ್ಪಷ್ಟನೆಯಾಗಿಲ್ಲ. ನಮ್ಮ ಯೋಜನೆಯನ್ನು ಈ ಸರ್ಕಾರ ಮುಂದುವರೆಸುವುದು ಸಾಧ್ಯವಿಲ್ಲ.‌ ಆದ್ದರಿಂದಲೇ ಈ ಸರ್ಕಾರ ಜನತೆಗೆ ಯಾವುದೇ ರೀತಿಯ ಸ್ಪಷ್ಟನೆಯನ್ನು ನೀಡುವುದು ಕೂಡಾ ಸಾಧ್ಯವಾಗಿಲ್ಲ ಎಂದು ಕುಮಾರಸ್ವಾಮಿ ಅವರು ಇಂದಿನ ಬಜೆಟ್ ಅನ್ನು ಟೀಕೆ ಮಾಡುವ ಮೂಲಕ ಬಜೆಟ್ ಬಗ್ಗೆ ತಮ್ಮ ಅಭಿಪ್ರಾಯ ಹಾಗೂ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here