ದಿನೇ ದಿನೇ ವಾತಾವರಣದಲ್ಲಿ ಬದಲಾವಣೆಗಳು ಆಗುತ್ತಿದೆ. ಆದರೆ ಕಾಲ ಯಾವುದೇ ಇರಲಿ ನಮ್ಮ ತ್ವಚೆಯ ರಕ್ಷಣೆ ಮಾಡಿಕೊಳ್ಳ ಬೇಕಾದ ಅಗತ್ಯ ಹೆಚ್ಚೇ ಇದೆ. ಅದರಲ್ಲೂ ಮಹಿಳೆಯರಿಗೆ ತ್ವಚೆಯ ಬಗ್ಗೆ ತುಸು ಹೆಚ್ಚು ಕಾಳಜಿ ಎಂಬುದರಲ್ಲಿ ಸಂಶಯವೇ ಇಲ್ಲ. ಕೆಲವರಿಗೆ ಬೇಸಿಗೆ ಹಾಗೂ ಚಳಿಗಾಲದಲ್ಲಿ ಶುಷ್ಕ ಚರ್ಮದ ತೊಂದರೆ ಕಾಡುತ್ತದೆ. ಇಂತಹ ಸಮಸ್ಯೆಯಿಂದ ತಪ್ಪಿಸಿಕೊಳ್ಳುವ ಮೂರು ಮುಖ್ಯವಾದ ವಸ್ತುಗಳನ್ನು ಬಳಸಬೇಕಾಗುತ್ತದೆ. ಅವುಗಳನ್ನು ಬಳಕೆ ಮಾಡುವುದರಿಂದ ಕಾಲವು ಯಾವುದೇ ಆದರೂ ಕೂಡಾ ಚರ್ಮವು ಶುಷ್ಕವಾಗುವುದಿಲ್ಲ. ಹಾಗಾದರೆ ಅದೇನು ಎಂದು ತಿಳಿದುಕೊಳ್ಳೋಣ ಬನ್ನಿ.

ಆ ಮುಖ್ಯವಾದ ಮೂರು ವಸ್ತುಗಳು ಯಾವುವೆಂದರೆ ಪುದಿನಾ ಎಲೆಗಳು, ಗ್ಲಿಸರಿನ್ ಹಾಗೂ ರೋಜ್ ವಾಟರ್. ಇನ್ನು ಈ ಮೂರು ವಸ್ತಗಳು ಸಾಮಾನ್ಯವಾಗಿ ಮನೆಯಲ್ಲಿರುತ್ತದೆ. ಇಲ್ಲದೆ ಹೋದರೆ ಅವುಗಳನ್ನು ಕೊಂಡು ತರಬಹುದು. ಮೂರು ವಸ್ತಗಳನ್ನು ತೆಗೆದುಕೊಂಡ ಮೇಲೆ, ಮೊದಲಿಗೆ ಪುದಿನಾದ ಹಸಿರು ಎಲೆಗಳನ್ನು ಅರೆದು ನುಣ್ಣನೆ ಪೇಸ್ಟ್ ಮಾಡಿಕೊಳ್ಳಬೇಕು. ಹೀಗೆ ನುಣುಪಾಗಿ ಅರೆದಿರುವ ಆ ಪೇಸ್ಟಿಗೆ , ಗುಲಾಬಿ ಜಲ ಅಥವಾ ರೋಜ್ ವಾಟರನ್ನು ಮಿಶ್ರಣ ಮಾಡಿಕೊಳ್ಳಬೇಕು.

ರೋಜ್ ವಾಟರನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣದ ಮಾಡಿದ ನಂತರ ಅದಕ್ಕೆ ಒಂದೆರಡು ಹನಿ ಗ್ಲಿಸರಿನ್ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಮೂರು ವಸ್ತುಗಳು ಸೇರಿ ಸಿದ್ಧವಾದ ಪೇಸ್ಟನಂತಹ ಮಿಶ್ರಣವನ್ನು ಮುಖದ ಮೇಲಿನ ಚರ್ಮದ ಮೇಲೆ ಅಪ್ಲೈ ಮಾಡಿ, ಅದನ್ನು ಸುಮಾರು 30 ನಿಮಿಷಗಳ ಕಾಲ ಬಿಟ್ಟು ಅನಂತರ ತೊಳೆಯಿರಿ. ಈ ಮಿಶ್ರಣದ ನಿಯಮಿತವಾದ ಬಳಕೆಯಿಂದ ಚರ್ಮದಲ್ಲಿ ಶುಷ್ಕತೆ ಎನ್ನುವುದು ಕಾಡದೆ , ಮುಖದ ಚರ್ಮ ನಯವಾಗಿರುವುದು ಮಾತ್ರವಲ್ಲದೆ ಹೊಸ ಹೊಳಪು ಕೂಡಾ ಮೂಡುತ್ತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here