ಆಧುನಿಕ ಜೀವನದ ಒತ್ತಡಗಳಿಂದ ದೇಹಾರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿರುವ ಈ ದಿನಗಳಲ್ಲಿ, ಎಲ್ಲರೂ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸುತ್ತಿದ್ದು, ತಮ್ಮ ಆಹಾರ ಕ್ರಮದ ಬಗ್ಗೆ ಕೂಡಾ ಗಮನ ನೀಡುತ್ತಿದ್ದಾರೆ. ಆಹಾರದಲ್ಲಿ ಮೊಳೆಕೆ ಕಾಳುಗಳ ಸೇವನೆ ನಮ್ಮ ದೇಹಾರೋಗ್ಕಕ್ಕೆ ಬಹಳಷ್ಟು ಪೂರಕವಾಗಿದೆ‌. ಮೊಳಕೆ ಕಾಳುಗಳಲ್ಲಿ ಬಹಳಷ್ಟು ಪೋಷಕಾಂಶಗಳು ಇದ್ದು , ಇದು ಸುಲಭವಾಗಿ ಜೀರ್ಣವಾಗುವ ಸಾಮರ್ಥ್ಯವನ್ನು ಹೊಂದಿದೆಯಲ್ಲದೆ ದೇಹಕ್ಕೆ ಅಗತ್ಯವಾದ ಪೋಷಣೆ ನೀಡುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.

 

ಮೊಳಕೆ ಕಾಳುಗಳಲ್ಲಿ ವಿಟಮಿನ್ ಬಿ, ಸಿ ಮತ್ತು ಕೆ ಇದ್ದು ಇದು ನಮ್ಮ ದೇಹಕ್ಕೆ ಬಹಳ ಉತ್ತಮವಾದ ಪೋಷಕಾಂಶಗಳು. ಈ ವಿಟಮಿನ್ ಗಳು ಸಮರ್ಪಕವಾದ ಪಚನ ಕ್ರಿಯೆಗೆ ನೆರವಾಗುವುದರ ಜೊತೆಗೆ ಮೊಳಕೆ ಕಾಳುಗಳಲ್ಲಿರುವ ವಿಟಮಿನ್ ಹಾಗೂ ಮಿನರಲ್ ಗಳು ಪ್ರೋಟೀನ್ ಜೊತೆ ಸೇರಿ ಬಿಡುಗಡೆ ಮಾಡುವ ಉತ್ತಮ ಪ್ರೋಟೀನ್ ಗಳು ಜೀವಕೋಶಗಳ ದುರಸ್ತಿ ಕಾರ್ಯವನ್ನು ಬಹಳ ಚೆನ್ನಾಗಿ ಮಾಡುತ್ತವೆ. ಮತ್ತೊಂದು ವಿಶೇಷ ಎಂದರೆ ಕಾಳುಗಳನ್ನು ಮೊಳಕೆ ಹಾಕುವುದರಿಂದ ಅವುಗಳಲ್ಲಿನ ಸತ್ವ ದ್ವಿಗುಣಗೊಳ್ಳುತ್ತದೆ. ಅಂದ ಮೇಲೆ ಅದು ಆರೋಗ್ಯಕ್ಕೆ ಉತ್ತಮವೇ ಅಲ್ಲವೇ?

ಸ್ಥೂಲ ಕಾಯದಿಂದ ಬೇಸರಗೊಂಡು ಡಯಟ್ ನಲ್ಲಿ ಇರುವವರು ಕೂಡಾ ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ತೂಕ ಇಳಿಯುವ ಜೊತೆಯಲ್ಲೇ, ದೇಹದ ಆರೋಗಕ್ಕೆ ಕೂಡಾ ಮೊಳಕೆ ಕಾಳುಗಳು ಸಹಾಯಕವಾಗುತ್ತವೆ‌. ಬೆಳೆಯುವ ಮಕ್ಕಳಿಗೆ, ಹದಿ ಹರೆಯದವರಿಗೆ ಇದು ಆರೋಗ್ಯ ವರ್ಧನೆಗೆ ಸೂಕ್ತ. ರಕ್ತಡ ಒತ್ತಡ ಸಮಸ್ಯೆ ಇರುವವರು ಕೂಡಾ ತಮ್ಮ ವೈದ್ಯರ ಸಲಹೆಯ ಮೇರೆಗೆ ತಮ್ಮ ಆಹಾರ ಕ್ರಮದಲ್ಲಿ ಮೊಳಕೆ ಕಾಳುಗಳನ್ನು ಬಳಸಿಕೊಳ್ಳುವ ಅವಕಾಶಗಳು ಇವೆ‌. ಮೊಳೆಕೆ ಕಾಳಿನಲ್ಲಿ ಬೇಗ ವಿಟಮಿನ್ ಗಳು ಹಾಳಾಗುವ ಸಂಭವವಿದ್ದು, ಆದ್ದರಿಂದ ಅದು ತಾಜಾ ಇರುವಾಗಲೇ ಸೇವಿಸುವುದು ಅತ್ಯುತ್ತಮ. ಮೊಳಕೆ ಕಾಳಿನ ಬಳಕೆ ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದೆ ಎಂಬುದು ಕೂಡಾ ನಿಜ. ಇನ್ನು ಕಾಳನ್ನು ಮೊಳಕೆ ಹಾಕಲು ಶುದ್ಧವಾದ ನೀರನ್ನು ಬಳಸುವುದನ್ನು ಮರೆಯಬಾರದು.

ಅರೆಬರೆ ಬಟ್ಟೆ ಹಾಕುವಂತಿಲ್ಲ.. ಪಬ್ಲಿಕ್ ನಲ್ಲಿ ಕಿಸ್ ಮಾಡುವಂತಿಲ್ಲ.. ಹೊಸ ರೂಲ್ಸ್.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here