​ಇಂಗ್ಲೆಂಡ್​ ಸ್ಟಾರ್​ ಕ್ರಿಕೆಟ್​​ ಆಟಗಾರ್ತಿ, ವಿಕೆಟ್ ಕೀಪರ್​ ,ಹದಿನೇಳನೇ ವಯಸ್ಸಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಅಡಿಯಿಟ್ಟ ಸಾರಾ ಟೇಲರ್​ ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದೂರ ಉಳಿದಿದ್ದಾರೆ. ಆದರೆ ಅವರು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಒಂದು ಫೋಟೋ ಈಗ ಎಲ್ಲರು ಆಕೆಯತ್ತ ಹಾಗೂ ಆ ರೀತಿಯ ಫೋಟೋ ಹಾಕಲು ಕಾರಣವೇನು ಎಂದು ತಿಳಿಯುವತ್ತ ಗಮನವನ್ನು ಹರಿಸಿದ್ದಾರೆ. ಹೀಗೆ ಜನರ ಗಮನವನ್ನು ಸೆಳೆಯಲು ಕಾರಣವಾದದ್ದು ಆಕೆ ಪೋಸ್ಟ್ ಮಾಡಿರುವ ತನ್ನ ಬೆತ್ತಲೆ ಫೋಟೊ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಕ್ರೀಡಾಪಟು ಈ ರೀತಿ ಫೋಟೋ ಹಾಕಿದಾಗ ಸಹಜವಾಗಿಯೇ ಎಲ್ಲರ ಗಮನವನ್ನು ಅದು ಸೆಳೆದಿದೆ.

ಸಾರಾ ಟೇಲರ್ ಅವರು ವಿಶ್ವದಾದ್ಯಂತ ಮಹಿಳೆಯರ ಆರೋಗ್ಯ ಸಮಸ್ಯೆಗಳ ಕುರಿತಾಗಿ ಜಾಗೃತಿ ಮೂಡಿಸುವ ಒಂದು ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಅದೇ ಹಿನ್ನೆಲೆಯಲ್ಲಿ ಇನ್​ಸ್ಟಾಗ್ರಾಂನಲ್ಲಿ ಒಂದು ನಗ್ನವಾಗಿರುವ ಫೋಟೊ ಹರಿಬಿಟ್ಟಿದ್ದು, ನನ್ನ ಬಗ್ಗೆ ತಿಳಿದಿರುವ ಜನರಿಗೆ ನಾನು ಹಾಕಿರುವ ಈ ಪೋಸ್ಟ್ ಅನ್ ಕಂಪರ್ಟಬಲ್ ಎನಿಸಬಹುದಾದರೂ ಈ ಅಭಿಯಾನದಲ್ಲಿ ಭಾಗಿಯಾಗಿರುವ ಸಂತಸ ತನಗಿದೆ ಎಂದು ಅವರು ತಮ್ಮ ಪೋಸ್ಟ್ ಮೂಲಕ ಹೇಳಿದ್ದಾರೆ. ಅವರು ಅದೇ ಪೋಸ್ಟ್ ನಲ್ಲಿ ಇನ್ನು ಒಂದೆರಡು ವಿಷಯಗಳನ್ನು ಕೂಡಾ ಹೇಳಿದ್ದಾರೆ.

ನನ್ನ ದೇಹದಲ್ಲಿ ಯಾವಾಗಲೂ ಕೆಲವು ಸಮಸ್ಯೆಗಳಿವೆ. ಈ ಅಭಿಯಾನದ ಭಾಗವಾಗಲು ಕೆಲವೊಂದನ್ನು ಮೀರಿ ಮುನ್ನಡಿಯಿಡಬೇಕಾಯಿತು. ಇದು ನನ್ನನ್ನು ಸಬಲಗೊಳಸಲು ಸಹಾಯಕವಾಗಿದೆ ಎಂದವರು ಹೇಳಿದ್ದಾರೆ. ಪ್ರತಿಯೊಬ್ಬ ಹುಡುಗಿಯೂ ಕೂಡ ಸೌಂದರ್ಯ ಹೊಂದಿರುತ್ತಾಳೆ. ಪ್ರತಿ ಮಹಿಳೆಯೂ ಕೂಡಾ ಸುಂದರವಾಗಿರುತ್ತಾಳೆ. ಈ ಅಭಿಯಾನದಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದಗಳು ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here