ದೇಹ ಸೌಂದರ್ಯದ ವಿಷಯ ಬಂದಾಗಲೆಲ್ಲಾ ಹಲವರನ್ನು ಕಾಡುವ ಸಾಮಾನ್ಯ ಸಮಸ್ಯೆ ಎಂದರೆ ಕಣ್ಣಿನ ಸುತ್ತ ಮೂಡುವ ಕಪ್ಪು ವರ್ತುಲಗಳು. ಕೆಲಸದ ಒತ್ತಡ, ನಿದ್ರೆ ಕಡಿಮೆಯಾದ ಕಾರಣಗಳಿಂದ ಪ್ರತಿ ಹತ್ತು ಜನರಲ್ಲಿ ಆರು ಜನ ಈ ಸಮಸ್ಯೆಯಿಂದ ಬಳಲುವುದನ್ನು ನಾವು ನೋಡಿದ್ದೇವೆ. ಅದರಲ್ಲೂ ವಿಶೇಷವಾಗಿ ಮಹಿಳೆಯರು ಕಣ್ಣಿನ ಸುತ್ತ ಕಪ್ಪು ವರ್ತುಲ ಕಂಡರೆ ಬಹಳ ಆತಂಕಕ್ಕೆ ಒಳಗಾಗಿ ಬಿಡುತ್ತಾರೆ. ಅಲ್ಲದೆ ನಮ್ಮನ್ನು ನೋಡುವವರು ಕೂಡಾ ಆ ಕಪ್ಪು ವರ್ತುಲ ಗಳನ್ನು ನೋಡಿ ಬಹುಶಃ ನಾವು ಯಾವುದೋ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇವೆ ಎಂದು ಕೊಳ್ಳುವರು. ಹಾಗಾದರೆ ಬನ್ನಿ ಈ ಕಪ್ಪು ವರ್ತುಲಗಳನ್ನು ನಿಯಂತ್ರಿಸುವ ಕೆಲವು ವಿಧಾನಗಳ ಬಗ್ಗೆ ನಾವು ಇಂದು ತಿಳಿಯೋಣ.

ಸ್ವಲ್ಪ ಕಚ್ಚಾ ಆಲೂಗಡ್ಡೆಯನ್ನು ತುರಿ ಮಾಡಿ ಮತ್ತು ಅದರ ರಸವನ್ನು ಹೊರತೆಗೆಯಬೇಕು. ಹತ್ತಿಯನ್ನು ಸಣ್ಣ ಉಂಡೆಯನ್ನಾಗಿ ಮಾಡಿ, ಆಲೂಗಡ್ಡೆ ರಸದಲ್ಲಿ ನೆನೆಸಿ ಕಣ್ಣುಗಳನ್ನು ಮುಚ್ಚಿ ಮತ್ತು ಈ ಹತ್ತಿಯ ಉಂಡೆಯನ್ನು ಕಣ್ಣುಗಳ ಕೆಳಗೆ ಮತ್ತು ಕಣ್ಣುರೆಪ್ಪೆಗಳ ಕೆಳಗೆ ಇರುವ ಕಪ್ಪು ವಲಯಗಳ ಸಂಪೂರ್ಣ ಪ್ರದೇಶವನ್ನು ಆವರಿಸಿದೆಯೇ? ಎಂದು ಖಚಿತಪಡಿಸಿಕೊಂಡು ಸುಮಾರು 10 ನಿಮಿಷಗಳ ಕಾಲ ಬಿಟ್ಟು ಅನಂತರ ತಣ್ಣೀರಿನಿಂದ ತೊಳೆಯುವುದರಿಂದ ಕಪ್ಪು ವರ್ತುಲಗಳು ಕಡಿಮೆಯಾಗುತ್ತವೆ. ಟಮೋಟೋ ಕೂಡಾ ಒಂದು ಸ್ವಾಭಾವಿಕ ಪರಿಹಾರವಾಗಿದ್ದು, ಟಮೋಟೋ ರಸಕ್ಕೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಕಣ್ಣಿನ ಸುತ್ತ ಹಚ್ಚಿ ಸ್ವಲ್ಪ ಹೊತ್ತಿನ ನಂತರ ತೊಳೆಯುವುದರಿಂದ ಕೂಡಾ ಕಣ್ಣಿನ ಸುತ್ತಲಿನ ಕಪ್ಪು ವರ್ತುಲಗಳು ಕಡಿಮೆಯಾಗುತ್ತವೆ.

ಮತ್ತೊಂದು ಪರಿಣಾಮಕಾರಿ ಮನೆ ಪರಿಹಾರವೆಂದರೆ ಕಿತ್ತಳೆ ಹಣ್ಣಿನ ರಸ. ಕಿತ್ತಳೆ ಹಣ್ಣಿನ ರಸಕ್ಕೆ ಕೆಲವಿ ಹನಿ ಗ್ಲಿಸರಿನ್ ಮಿಶ್ರಣ ಮಾಡಿ ಕಣ್ಣಿನ ಸುತ್ತ ಹಚ್ಚುವುದರಿಂದಲೂ ಕರ್ಪು ವರ್ತುಲಗಳನ್ನು ಕಡಿಮೆ ಮಾಡುತ್ತದೆ ಮತ್ತು ಅದು ಕಣ್ಣುಗಳಿಗೆ ನೈಸರ್ಗಿಕ ಹೊಳಪನ್ನು ಕೂಡಾ ನೀಡುತ್ತದೆ. ಸೌತೆಕಾಯಿಯನ್ನು ವೃತ್ತಾಕಾರದಲ್ಲಿ ಹಚ್ಚಿ ಕಣ್ಣಿನ ಸುತ್ತ ಇಡುವುದರಿಂದಲೂ ಕೂಡಾ ಕಪ್ಪು ವರ್ತುಲಗಳು ಕಡಿಮೆಯಾಗುತ್ತವೆ. ಬಾಳೆಹಣ್ಣು ಮತ್ತು ಪಪ್ಪಾಯ ಹಣ್ಣಿನ ತುಂಡುಗಳ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ ವಾರಕ್ಕೊಮ್ಮೆ ಮುಖಕ್ಕೆ ಲೇಪಿಸಿಕೊಂಡು ಒಂದು ಗಂಟೆ ಬಿಟ್ಟು ಮುಖ ತೊಳೆಯುವುದು ಕೂಡಾ ಒಂದು ಪರಿಹಾರವಾಗಿದೆ. ಇವೆಲ್ಲವುಗಳ ಜೊತೆಗೆ
ಪ್ರತಿಯೊಬ್ಬರೂ ಕೂಡಾ ದಿನಕ್ಕೆ 8 ಗಂಟೆ ನಿದ್ದೆಯನ್ನು ಮಾಡಬೇಕು. ದಿನವೊಂದಕ್ಕೆ ಸುಮಾರು ಮೂರು ಲೀಟರ್ ನೀರು ಕುಡಿಯಬೇಕು. ಆಹಾರದಲ್ಲಿ ತರಕಾರಿ, ಸೊಪ್ಪು ಮತ್ತು ಹಣ್ಣುಗಳನ್ನು ಹೆಚ್ಚಾಗಿ ಬಳಸಬೇಕು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here