ರಾಗಿ ತಿಂದವನಿಗೆ ರೋಗವಿಲ್ಲ ಎನ್ನುವ ಮಾತನ್ನು ನಾವೆಲ್ಲರೂ ಕೇಳಿಯೇ ಇದ್ದೇವೆ. ರಾಗಿ ದೇಹಕ್ಕೆ ತಂಪು ಅದರ ಜೊತೆಗೆ ರಾಗಿಯಲ್ಲಿರುವ ಅನೇಕ ಉತ್ತಮ ಗುಣಗಳು ನಮ್ಮ ದೇಹಕ್ಕೆ ಬಲವನ್ನು ನೀಡುವುದು ಮಾತ್ರವೇ ಅಲ್ಲದೇ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಕೂಡಾ ಹೆಚ್ಚಿಸುತ್ತದೆ. ಅದರಲ್ಲೂ ಕೊರೊನಾ ದಂತಹ ಸೋಂಕು ಹರಡುತ್ತಿರುವ ಇಂದಿನ ದಿನಗಳಲ್ಲಿ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಕೂಡಾ ನಮಗಿದೆ. ರಾಗಿ ನಮ್ಮಲ್ಲಿ ಪ್ರಾಚೀನ ಕಾಲದಿಂದಲೂ ಆಹಾರ ಧಾನ್ಯವಾಗಿ ಬಳಸುತ್ತಾ ಬದಲಾಗಿದ್ದು, ರಾಗಿ ಮುದ್ದೆ ಬಹಳ ಜನಪ್ರಿಯ ಕೂಡಾ ಹೌದು. ನಾವು ಇಂದು ಆರೋಗ್ಯ ಕರ ರಾಗಿ ಮಾಲ್ಟ್ ಮಾಡುವ ವಿಧಾನವನ್ನು ತಿಳಿಯೋಣ ಬನ್ನಿ.

ರಾಗಿ ಮಾಲ್ಟ್ ಮಾಡುವುದು ಬಹಳ ಸುಲಭ ಹಾಗೂ ಇದನ್ನು ಮಾಡಲು ಬೇಕಾಗಿರುವ ಸಾಮಗ್ರಿಗಳು ಕೂಡಾ ನಮ್ಮ ಮನೆಗಳಲ್ಲಿ ಲಭ್ಯವಿರುತ್ತದೆ. ಹಾಗಾದರೆ ಬನ್ನಿ, ಮೊದಲಿಗೆ ರಾಗಿ ಮಾಲ್ಟ್ ಬೇಕಾಗುವ ಸಾಮಗ್ರಿಗಳ ಬಗ್ಗೆ ತಿಳಿಯೋಣ. 3 ಟೇಬಲ್ ಸ್ಪೂನ್ ರಾಗಿ ಹಿಟ್ಟು, 3 ಟೇಬಲ್ ಸ್ಪೂನ್ ಬೆಲ್ಲ, ಒಂದು ಕಪ್ ನೀರು, ಒಂದು ಕಪ್ ಹಾಲು ಹಾಗೂ ಒಂದು ಚಿಟಿಕೆಯಾಗುವಷ್ಟು ಏಲಕ್ಕಿ ಪುಡಿ. ಕೆಲವರು ಏಲಕ್ಕಿ ಪುಡಿಯನ್ನು ಬಳಸುವುದಿಲ್ಲ. ಅದು ನಿಮ್ಮ ಇಷ್ಟಾನುಸಾರವಾಗಿ ಬೇಕಿದ್ದರೆ ಬಳಿಸಿ ಇಲ್ಲವಾದರೆ ಬೇಡ. ಬೆಲ್ಲದ ಬದಲಾಗಿ ಸಕ್ಕರೆ ಕೂಡಾ ಉಪಯೋಗಿಸುವರು. ಆದರೆ ಬೆಲ್ಲದ ಬಳಕೆ ಶ್ರೇಷ್ಠ.

ಇಷ್ಟೆಲ್ಲಾ ಸಿದ್ಧಪಡಿಸಿಕೊಂಡ ನಂತರ ಮೊದಲಿಗೆ ಅರ್ಧಕಪ್ ನೀರಿನಲ್ಲಿ ರಾಗಿಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಿ. ನಂತರ ಸ್ವವ್ ಹೊತ್ತಿಸಿ ಸ್ಟವ್ ಮೇಲೆ ಸಣ್ಣ ಪಾತ್ರೆ ಇಟ್ಟು ಉಳಿದ ಅರ್ಧಕಪ್ ನೀರು ಹಾಕಿ ಕುದಿಸಿ. ನೀರು ಕುದಿಯುವಾಗ ಕಲಿಸಿದ ರಾಗಿ ಹಿಟ್ಟು ಹಾಕಿ ಗಂಟು ಕಟ್ಟದ ಹಾಕಿ ಮಿಕ್ಸ್ ಮಾಡಿ. ನಂತರ ಅದಕ್ಕೆ ಬೆಲ್ಲವನ್ನು ಹಾಕಿ ಮಿಕ್ಸ್ ಮಾಡಿ. ಬೆಲ್ಲ ಕರಗಿದ ಮೇಲೆ ಹಾಲನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದು ಕುದಿ ಬಂದ ಮೇಲೆ ಕೊನೆಗೆ ಏಲಕ್ಕಿಯನ್ನು ಹಾಕಿ ಮಿಕ್ಸ್ ಮಾಡಿ ಇಳಿಸಿದರೆ ಆರೋಗ್ಯಕರವಾದ ರಾಗಿ ಮಾಲ್ಟ್ ಸಿದ್ಧವಾಗುತ್ತದೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here