ದೇಹದ ತೂಕ ಇಳಿಸುವುದು ಎಂದರೆ ಇತ್ತೀಚಿನ ದಿನಗಳಲ್ಲಿ ಅದಕ್ಕಾಗಿ ಅನೇಕರು ಅನೇಕ ವಿಧಾನಗಳನ್ನು ಬಳಸುತ್ತಾರೆ. ಕೆಲವರು ಬೇಗ ತೂಕ ಕಡಿಮೆಯಾಗಬೇಕೆಂಬ ಆಸೆ ಯಲ್ಲಿ ಶಸ್ತ್ರ ಚಿಕಿತ್ಸೆ ಕೂಡಾ ಮಾಡಿಸಿಕೊಂಡು, ಅನಂತರ ಸಮಸ್ಯೆಗಳನ್ನು ಎದುರಿಸಿದ್ದೂ ಉಂಟು. ಆದರೆ ನಿಧಾನವಾಗಿ, ನೈಸರ್ಗಿಕವಾಗಿ ದೇಹದ ಕೊಬ್ಬನ್ನು ಕರಗಿಸಲು ಸಾಧ್ಯವಿದ್ದು ಕೆಲವು ಜ್ಯೂಸ್ ಗಳು ನಮಗೆ ಅದಕ್ಕೆ ಸಹಾಯ ಮಾಡುತ್ತದೆ. ಇಂದು ಅಂತಹ ಕೆಲವು ಜ್ಯೂಸ್ ಗಳ ಬಗ್ಗೆ ತಿಳಿಯೋಣ ಬನ್ನಿ. ಇವುಗಳ ಸೇವನೆ ನಮ್ಮ ದೇಹದಲ್ಲಿನ ಕೊಬ್ಬು ಕರಗಿಸಿ, ತೂಕ ಇಳಿಸಲು ಕೂಡಾ ನೆರವಾಗುತ್ತದೆ.

೧. ಕ್ಯಾರೆಟ್ ಜ್ಯೂಸ್ : ಕ್ಯಾರೆಟ್ ನಲ್ಲಿ ಕಡಿಮೆ ಕ್ಯಾಲೊರಿ ಮತ್ತು ಫೈಬರ್ ತುಂಬಿರುವುದರಿಂದ ಕ್ಯಾರೆಟ್ ಜ್ಯೂಸ್ ತೂಕ ಇಳಿಸಲು ಅದ್ಭುತವಾದ ಪಾನೀಯವಾಗಿದೆ. ಹಸಿ ಕ್ಯಾರೆಟ್ ನಿಂದ ಜ್ಯೂಸ್ ಮಾಡುವುದು ಬಹಳ ಉತ್ತಮ. ಒಂದು ದೊಡ್ಡ ಗ್ಲಾಸ್ ಕ್ಯಾರೆಟ್ ಜ್ಯೂಸ್ ಮಧ್ಯಾಹ್ನದ ಲಂಚ್ ವರೆಗೆ ನಿಮ್ಮನ್ನು ಸದೃಢವಾಗಿರಿಸಬಲ್ಲುದು. ಕ್ಯಾರೆಟ್ ಜ್ಯೂಸ್ ಪಿತ್ತರಸ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ, ಇದು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ದೇಹದ ತೂಕ ಕಡಿಮೆಯಾಗಲು ಸಹಾಯವಾಗುತ್ತದೆ.

೨. ಹಾಗಲಕಾಯಿ ಜ್ಯೂಸ್ : ಹಾಗಲಕಾಯಿ ರಸ ಎಂದರೆ ಜನ ಅದರ ಕಹಿ ರುಚಿಗೆ ಮೂಗು ಮುರಿಯುತ್ತಾರೆ. ಆದರೆ ಸತ್ಯವೆಂದರೆ ಇದು ನಿಜವಾಗಿಯೂ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಲಕಾಯಿ ರಸವನ್ನು ನಿಯಮಿತವಾಗಿ ಕುಡಿಯುವುದರಿಂದ ದೇಹದ ಕೊಬ್ಬನ್ನು ಕರಗಿಸುವ ಜೊತೆಗೆ, ದೇಹದಲ್ಲಿ ಅಗತ್ಯವಿರುವ ಪಿತ್ತರಸ ಆಮ್ಲಗಳನ್ನು ಸ್ರವಿಸಲು ಇದು ಯಕೃತ್ತನ್ನು ಉತ್ತೇಜಿಸುತ್ತದೆ.

೩. ಸೌತೆಕಾಯಿ ಜ್ಯೂಸ್: ಹೆಚ್ಚಿನ ನೀರಿನ ಅಂಶವಿರುವ ಆಹಾರಗಳಲ್ಲಿ ಕ್ಯಾಲೊರಿ ಕಡಿಮೆ ಇರುತ್ತದೆ. ಅದಕ್ಕೆ ತೂಕ ಇಳಿಸಿಕೊಳ್ಳಲು ನೀವು ಕಡಿಮೆ ಕ್ಯಾಲೊರಿಗಳ ಆಹಾರ ಸೇವಿಸಬೇಕು ಅಥವಾ ಹೆಚ್ಚಿನ ಕ್ಯಾಲೊರಿಗಳನ್ನು ಕರಗಿಸುವ ಆಹಾರ ಅಥವಾ ಪಾನೀಯ ಸೇವನೆ ಮಾಡಬೇಕು. ಸೌತೆಕಾಯಿ ರಸವು ನಿಮಗೆ ಹೊಟ್ಟೆಯನ್ನು ಸುಲಭವಾಗಿ ತುಂಬುತ್ತದೆ ಮತ್ತು ಅದು ಉತ್ತಮವಾದ ಊಟದಂತೆ ಪರಿಣಾಮಕಾರಿ. ಈ ಜ್ಯೂಸ್ ಗೆ ನಾವು ಸ್ವಲ್ಪ ನಿಂಬೆ ರಸ ಹಾಗೂ ಪುದಿನಾ ಕೂಡಾ ಸೇರಿಸಿ ಬೇಸಿಗೆಯಲ್ಲಿ ಒಂದು ಆರೋಗ್ಯಕರವಾದ ಜ್ಯೂಸ್ ಮಾಡಬಹುದು.

೪. ನೆಲ್ಲಿ ಕಾಯಿ ಜ್ಯೂಸ್ : ನಿಮ್ಮ ದಿನವನ್ನು ಒಂದು ಲೋಟ ನೆಲ್ಲಿ ಕಾಯಿ ರಸದಿಂದ ಪ್ರಾರಂಭಿಸುವುದು ಒಂದು ಅದ್ಭುತ ದಿನದ ಆರಂಭ ಎನ್ನಬಹುದು. ಇದು ದಿನವಿಡೀ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ದೇಹದೊಳಗೆ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ ಹಾಗೂ ಕೊಬ್ಬನ್ನು ಕರಗಿಸುತ್ತದೆ. ಉತ್ತಮ ಪರಿಣಾಮಕ್ಕಾಗಿ ನೆಲ್ಲಿ ಕಾಯಿ ಜ್ಯೂಸ್ ಅನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದು ಉತ್ತಮ ಎನ್ನಲಾಗಿದೆ.

೫. ದಾಳಿಂಬೆ ಜ್ಯೂಸ್ : ದಾಳಿಂಬೆ ರಸವು ನಿಮ್ಮ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ಮರಳಿ ಪಡೆಯಲು ಅದ್ಭುತವಾಗಿದೆ, ಆದರೆ ಇದು ತೂಕ ಇಳಿಸಿಕೊಳ್ಳಲು ಕೂಡಾ ಸಹಾಯ ಮಾಡುತ್ತದೆ ಎಂಬುದು ನಿಜ ಎನ್ನುತ್ತಾರೆ ದೇಹದ ತೂಕ ನಿರ್ವಹಣೆ ಬಗ್ಗೆ ಅಧ್ಯಯನವನ್ನು ನಡೆಸಿರುವ ತಜ್ಞರು.

ಈ ಐದು ಜ್ಯೂಸ್ ಅಥವಾ ರಸಗಳು ನೈಸರ್ಗಿಕವಾದ ಕೊಡುಗೆಗಳಾಗಿದ್ದು, ದೇಹ ತೂಕ ಇಳಿಸುವ ಆಸೆ ಇರುವವರಿಗೆ ಉತ್ತಮ ಫಲಿತಾಂಶ ನೀಡುವುದರ ಜೊತೆಗೆ ಅವರ ದೇಹಾರೋಗ್ಯವನ್ನು ಕಾಪಾಡಲು ಕೂಡಾ ನೆರವಾಗುತ್ತದೆ. ಯಾವುದೋ‌ ರಾಸಾಯನಿಕ ಮಿಶ್ರಿತ ಮಾತ್ರೆ, ಔಷಧಿ ಅಥವಾ ಶಸ್ತ್ರ ಚಿಕಿತ್ಸೆ ಎನ್ನುವ ಬದಲಾಗಿ ಇಂತಹ ನೈಸರ್ಗಿಕ ಸಂಪತ್ತಿನ ಮೂಲಕ ಜೀವನವನ್ನು ಮತ್ತಷ್ಟು ಸೊಗಸು ಮಾಡೋಣ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here