ದೇಹದ ಅತಿಯಾದ ಬೊಜ್ಜು, ತೂಕಕ್ಕೆ , ಆಯುರ್ವೇದ ವೈದ್ಯರಾದ ಡಾಕ್ಟರ್ ಗೌತಮ್ ರವರಿಂದ ಶಾಶ್ವತ ಪರಿಹಾರ.

ನಮ್ಮ ಈಗಿನ ಆಧುನಿಕ ಜಗತ್ತಿನಲ್ಲಿ ಭಿನ್ನ ವಿಭಿನ್ನ ಆಚಾರ,ಆಹಾರ ಪದ್ಧತಿ,ವಿಚಾರಗಳ ನಡುವಿನ ಈ ತೊಳಲಾಟದ ಬದುಕಿಗಾಗಿ ನಾವು ಪಡುವ ಕಷ್ಟಗಳು ಒಂದೇ ಎರಡೇ .
ಮಾಡುವ ಪ್ರತಿಯೊಂದು ಕೆಲಸದಲ್ಲೂ ಅವಸರ; ಬೆಳಗಿನ ಉಪಹಾರದ ಸಮಯದಿಂದ ರಾತ್ರಿಯ ಊಟದವರೆಗೂ :ಮಾಡುವುದರ ಜೊತೆಗೆ ತೃಪ್ತಿ ಇಂದ ತಿನ್ನಲಿಕ್ಕು ಕೊಂಚ ಕ್ಷಣವಿಲ್ಲ.
ಅದರಲ್ಲೂ ಪಟ್ಟಣದಲಂತು ಉಸಿರಾಡಲು ಎಲ್ಲಿ ಸಮಯ ವ್ಯರ್ಥವಾದಿತು ಎಂಬ ಕಾಲ ಬಂದರು ಅಶ್ಚಯ ಪಡಬೇಕಾಗಿಲ್ಲ.ನಮ್ಮ ಈಗಿನ ಜೀವನ ಶೈಲಿ ನಮ್ಮ ಕೆಲಸಗಳನ್ನು ಎಷ್ಟು ಸುಲಭ ಮಾಡುತ್ತದೆಯೋ ,ಅದಕ್ಕಿಂತ ನೂರು ಪಟ್ಟು ಹೆಚ್ಚು ನಮ್ಮ ಆರೋಗ್ಯವನ್ನು ನಶಿಸಿ ಹೋಗುವಂತೆ ಮಾಡಿದೆ.
ಇಂತಹದರಲ್ಲಿ ಅತ್ಯಂತ ಸಾಮಾನ್ಯವಾಗಿ ಎಲ್ಲೆಡೆಯೂ ಎಲ್ಲರಲೂ ತನ್ನದೇ ಆದ ಛಾಪು ಮೂಡಿಸಿರುವ ಸಮಸ್ಯೆಯೆಂದರೆ ‘ ಬೊಜ್ಜು ‘ ಇದನ್ನು ಆಯುರ್ವೇದದಲ್ಲಿ ‘ಸ್ಥೌಲ್ಯ’ ಈಗಿನ ಕಾಲಘಟ್ಟದಲ್ಲಿ ‘ ಒಬೆಸಿಟಿ’ ಎಂದು ಪ್ರಖ್ಯಾತಿ ಪಡೆದಿದೆ.
ಇಡೀ ನಮ್ಮ ಪ್ರಪಂಚದಲ್ಲಿ ಐದರಲ್ಲಿ ಒಬ್ಬ ಭಾರತೀಯ ಸಿಗುತ್ತಾನೆ ಎಂದು ಹೇಗೆ ಹೇಳುತ್ತಾರೋ ಹಾಗೆಯೇ ಈಗ ಅದಕ್ಕಿಂತ ಹೆಚ್ಚು ಎಂಬಂತೆ ಐವರಲ್ಲಿ ಕನಿಷ್ಟ ಮೂರು ಮಂದಿಯಾದರು ಈ ಸಮಸ್ಯೆಯಿಂದ ಭಾಧಿತರಾಗಿರುತ್ತಾರೆ,ಉಳಿದ ಇಬ್ಬರು ಕೂಡ ಅದೇ ಪಥದಲ್ಲಿ ತಮ್ಮ ಪಯಣ ಶುರು ಮಾಡಿರುತ್ತಾರೆ.ಈ ಸಮಸ್ಯೆಯನ್ನು ನವಾಗೆ ನಮ್ಮ ಕೈಯ್ಯಾರೆ ಬಾಚಿ ತಬ್ಬಿಕೊಳ್ಳುತಿದ್ದೇವೆ.ನಮ್ಮ ದೈನಂದಿನ ಜೀವನ ಯಾವ ಮಟ್ಟಕ್ಕೆ ತಲುಪಿದೆಯೆಂದರೆ ಊಟಕ್ಕಾಗಿ ಹಗಲು ರಾತ್ರಿ ಎನ್ನದೇ ದುಡಿದು , ಆರೋಗ್ಯವನ್ನು ಮರೆತು , ಕೊನೆಗೆ ಇಂತಹ ಸಮಸ್ಯೆಗಳನ್ನು ಮೈಗೆರಿಸಿಕೊಳ್ಳುತ್ತಿದೇವೆ.

ಈ ಸಮಸ್ಯೆಯ ಮುಖ್ಯ ಕಾರಣಗಳೆಂದರೆ:
೧) ಆಹಾರ ಪದ್ಧತಿಯಿಂದ:
ಅತಿಯಾದ ಗುರು ಆಹಾರ,ಶೀತ ಆಹಾರ, ಮಧುರ ಆಹಾರ, ಹೆಚ್ಚಿನ ಕೊಬ್ಬಿನ ಅಂಶವಿರುವ ಪದಾರ್ಥಗಳ ಸೇವನೆಯಿಂದ.
ಶರೀರದಲ್ಲಿ ಮೇಧ ಧಾತುವಿನ ವೃದ್ಧಿಯಿಂದ.
ಅತಿಯಾದ ಸ್ನಿಗ್ಧ ( ಜಿಡ್ಡಿನ ಅಂಶ) ಆಹಾರದ ಬಳಕೆಯಿಂದ.

೨)ವಿಹಾರ ನಿಧಾನ:
ಶರೀರಕ್ಕೆ ಸ್ವಲ್ಪವೂ ಪರಿಶ್ರಮ ನೀಡದೆ ಸುಕಮಾರರಂತಿರುವುದು.
ವ್ಯಾಯಮ,ಕಸರತ್ತಿನಲ್ಲಿ ತಮ್ಮನು ತಾವು ತೊಡಗಿಸಿಕೊಳ್ಳದಿರುವುದು.
ದಿವಾ ಸ್ವಪ್ನ (ಹಗಲು ನಿದ್ದೆ) ಮಾಡುವುದು.

೩)ಮಾನಸಿಕ ನಿಧಾನ:
ಯಾವುದೇ ಆಗು ಹೋಗುಗಳ ಬಗ್ಗೆ ಚಿಂತೆ ಮಾಡದಿರುವುದು.
ಅತಿಯಾದ ಹರ್ಷಭರಿತವಾಗಿರುವುದು.(ಲಕ್ಸುರಿ ಲೈಫ್)

ಬೀಜ ದೋಷ ನಿಧಾನ (ಜೆನೆಟಿಕ್ಸ್):
ಕೆಲವರಿಗೆ ಯಾವ ನಿಧಾನವಿಲ್ಲದಿದ್ದರೂ ವಂಶವಾಹಿಯಾಗಿ (ಜೆನೆಟಿಕ್ಸ್) ಬರುವ ಸಾಧ್ಯತೆಗಳಿವೆ.

ಈ ಮೇಲಿನ ಎಲ್ಲಾ ನಿಧಾನಗಳಿಂದ ನಮ್ಮ ಜಠರಾಗ್ನಿ ಮಂದವಾಗಿ,ರಸ ಧಾತುವಿನ ಧುಷ್ಟಿಯಾಗುತ್ತದೆ ಅದರಿಂದ ಕಫ ದೋಷ ಹಾಗೂ ಮೇಧಾ ಧಾತುವಿನ ಕಾಲುವೆಗಳಲ್ಲಿ ಸಂಘ(ತಡೆ)ಯಾಗಿ ,ಮೇಧಾ ಧಾತು ಅದರ ಸಂಚಯ ಅವಸ್ಥೆಯಲ್ಲಿ ಸ್ಫೀಕ(ದೇಹದ ಹಿಂಭಾಗ), ಸ್ಥನ, ಉದರ (ಹೊಟ್ಟೆ) ಭಾಗದಲ್ಲಿ ಸ್ಥಿತವಾಗಿ ಈ ಸಮಸ್ಯೆಗೆ ಕಾರಣವಾಗುತ್ತದೆ.

ಇದರ ಲಕ್ಷಣಗಳು:
ಸಂಚಿತ ಮೇಧಾ ಧಾತು ದೇಹದ ಹಿಂಭಾಗ, ಸ್ಥನ, ಉದರ ಭಾಗದಲ್ಲಿ ಸ್ಥಿತವಾಗುತ್ತದೆ.

ಮೇಧಾ ಮತ್ತು ಮಾಂಸ ಧಾತುಗಳು ಬೆಳವಣಿಗೆ ದೇಹದಲ್ಲಿ ಹೆಚ್ಚಾಗುತ್ತದೆ.
ಆಲಸ್ಯ, ಜಡ್ಡುತನ,ದೌಗಂದ್ಯ, ನಿಶ್ಯಕ್ತಿ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಬೆವರು ಉತ್ಪತ್ತಿಯಾಗುತ್ತದೆ.
ಯಾವುದೇ ಕೆಲಸ ಮಾಡಲು ದೇಹ ಜೊತೆ ಕೊಡದಿರುವುದು.

ಇದರಿಂದ ಉದ್ಭವಿಸುವ ತೊಂದರೆಗಳು:
ಪುರುಷರಲ್ಲಿ ಈ ಸಮಸ್ಯೆಯಿಂದ ಅನೇಕ ರೋಗಗಳು ಉತ್ಪತ್ತಿಯಾಗುತ್ತವೆ. ಪ್ರಮುಖವೆಂದರೆ: ಡಯಾಬಿಟಿಸ್ (ಮಧು ಮೇಹ), ಹೈಪರ್ ಟೆನ್ಷನ್ (ಅಧಿಕ ರಕ್ತ ಚಪ), ನಪುಂಸಕತೆ,ಹೃದಯ,ಶ್ವಾಸಕೋಶ ಹಾಗೂ ಕಿಡ್ನಿಗಳ ಸಮಸ್ಯೆಗೂ ದಾರಿ ಮಾಡಿ ಕೊಡುತ್ತದೆ.

ಮಹಿಳೆಯರಲ್ಲಿ ಅತಿ ಹೆಚ್ಚಾಗಿ ಕಾಣ ಸಿಗುತ್ತದೆ,ಏಕೆಂದರೆ ಮದುವೆಯ ನಂತರ ತಮ್ಮ ಸಂಸಾರದ ಜೋಜಿನಲ್ಲಿ ತಮ್ಮ ಆರೋಗ್ಯವನ್ನು ಮರೆತು ಬಿಡುತ್ತಾರೆ ಇದರಿಂದ ಅವರಲ್ಲಿ ಮುಖ್ಯವಾಗಿ ಮಾನಸಿಕ ಒತ್ತಡ ಹಾಗೂ ನಿಶ್ಯಕ್ತಿ ಹೆಚ್ಚಾಗಿ ಕಾಣಬಹುದು,ಪುರುಷರಲ್ಲಿ ಕಂಡ ಎಲ್ಲ ಪ್ರಮುಖ ಸಮಸ್ಯೆಗಳು ಕೂಡ ಮಹಿಳೆಯರಲ್ಲು ಉದ್ಭವಿಸುತ್ತವೆ.

ಡಾಕ್ಟರ್ ಗೌತಮ್ ರವರಿಂದ ದೇಹದ ತೂಕಕ್ಕೆ ಚಿಕಿತ್ಸೆ

ಇದರ ಚಿಕಿತ್ಸೆ:
ಇತ್ತೀಚಿನ ದಿನಗಳಲ್ಲಿ ನಾವು ದೈನಂದಿನ ಪತ್ರಿಕಾ,ದೂರದರ್ಶನ ಮಾಧ್ಯಮಗಳಲ್ಲಿ ಹಲವಾರು ರೀತಿಯ ಔಷದೀಯ ಜಾಹೀರಾತುಗಳನ್ನು ನೋಡಿರುತ್ತೇವೆ.ಅದರ ಬಳಕೆಯ ಪರಿಣಾಮ ಸಮಸ್ಯೆ ಕಡಿಮೆಯಾಗುತ್ತದೆ ಎನ್ನುವುದಕ್ಕಿಂತ ಇನ್ನು ನಮ್ಮ ದೇಹದಲ್ಲಿ ಅನೇಕ ರೀತಿಯ ರೋಗಗಳಿಗೆ ಎಡೆಮಾಡಿಕೊಟ್ಟಂತಾಗುತ್ತದೆ.

ನಮ್ಮ ಆಯುರ್ವೇದ ಪದ್ಧತಿಯಲ್ಲಿ ಈ ಸಮಸ್ಯೆಗಳಿಗೆ ನಮ್ಮ ಋಷಿಮುನಿಗಳು ಅನೇಕ ವಿಧವಾದ ಪಥ್ಯ,ಔಷದ, ವಿಹಾರಗಳ ಬಗ್ಗೆ ಅತಿ ಸೊಗಸಾಗಿ ಉಲ್ಲೇಕಗಳ್ಳನು ನೀಡಿದ್ದಾರೆ. ಪಂಚಕರ್ಮ ಚಿಕಿತ್ಸೆಯು ಇಂತಹ ಅನೇಕ ರೋಗಗಳಿಗೆ ಅಂತಿಮ ಹಾಡಬಲ್ಲ ಶಕ್ತಿ ಹೊಂದಿದೆ. ಈ ಪದ್ಧತಿಯಿಂದ ಚಿಕಿತ್ಸೆ ಪಡೆದವರು ಬಹುಶಃ ಎಲ್ಲರೂ ತಮ್ಮ ಈ ಸಮಸ್ಯೆಯಿಂದ ಗುಣಮುಖರಾಗಿದ್ದಾರೆ.

ನಮ್ಮ ಪುರಾತನ ಪದ್ಧತಿ ದೇಹಕ್ಕೆ ಯಾವ ರೀತಿಯ ತೊಂದರೆಯ ನೀಡದೆ ಬದಲಾಗಿ ಅದಕ್ಕೆ ತೇಜ ಹಾಗೂ ಉತ್ಸಾಹವನ್ನು ತುಂಬುತ್ತದೆ.ನಮ್ಮಲಿ ಚಿಕಿತ್ಸಾ ವಿಧಾನಗಳ ನಂತರ ಪಾಲಿಸಬೇಕಾದ ಜೀವನ ಶೈಲಿ,ಆಹಾರ – ವಿಹಾರ ಎಲ್ಲದರ ಬಗ್ಗೆಯೂ ರೋಗಿಗಳಿಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ

ತಮ್ಮ ಮುಂದಿನ ದಿನಗಳನ್ನು ತಮ್ಮ ದೇಹವನ್ನು ತಾವು ಪ್ರೀತಿಸುತ್ತಾ ನಡೆಸುವಂತೆ ಮಾಡುವುದು.

ದೂರವಾಣಿ:- +918660227352
(ಗೌತಮ್ ವೈದ್ಯರು)

ವಿಶೇಷ ಸೂಚನೆ :- ಇದೊಂದು ಜಾಹಿರಾತು ಲೇಖನ ಆಗಿದೆ. 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here