ಶಾಲಾ ಶಿಕ್ಷಕರೊಬ್ಬರು ಶನಿವಾರ ತಮ್ಮ ಸೇವೆಯಿಂದ ನಿವೃತ್ತಿ ಹೊಂದಿದ ದಿನ, ತಮ್ಮ ಊರಿಗೆ ಮರಳಲು ಹೆಲಿಕಾಪ್ಟರ್ ನಲ್ಲಿ ಪತ್ನಿ ಹಾಗೂ ಮೊಮ್ಮಗನೊಂದಿಗೆ ಹೊರಟ ವಿಶೇಷ ಘಟನೆಯೊಂದು ನಡೆದಿದೆ‌. ನಿವೃತ್ತ ಶಿಕ್ಷಕರು ತಮ್ಮ ಪತ್ನಿಯ ಆಸೆಯನ್ನು ಪೂರೈಸಲು ಮಾಡಿರುವ ಈ ಪ್ರಯತ್ನ ಎಲ್ಲರ ಗಮನವನ್ನು ಸೆಳೆದಿದೆ. ರಾಜಾಸ್ಥಾನದ ಅಲ್ವಾರ್ ನಲ್ಲಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿರುವ ರಮೇಶ್ ಚಂದ್ ಮೀನಾ ಎನ್ನುವವರೇ ಪತ್ನಿಯ ಆಸೆಯನ್ನು ಪೂರೈಸಲು ಹೆಲಿಕಾಪ್ಟರ್ ಬುಕ್ ಮಾಡಿದ ಶಿಕ್ಷಕರು. ಹಿಂದೊಮ್ಮೆ ಅವರ ಪತ್ನಿ ಮನೆಯ ಮಹಡಿಯಲ್ಲಿ ಕುಳಿತಿರುವಾಗ ಹೆಲಿಕಾಪ್ಟರ್ ನೋಡುತ್ತಾ, ಹೆಲಿಕಾಪ್ಟರ್ ನಲ್ಲಿ ಸಂಚರಿಸುವ ಆಸೆಯನ್ನು ಹೇಳಿಕೊಂಡಿದ್ದರಂತೆ. ಅದನ್ನು ರಮೇಶ್ ಚಂದ್ ಮೀನಾ ಅವರು ಈಗ ಪೂರೈಸಿದ್ದಾರೆ.

34 ವರ್ಷ ಶಿಕ್ಷಕನಾಗಿ ಸೇವೆ ಸಲ್ಲಿಸಿದ ರಮೇಶ್ ಚಂದ್ ಮೀನಾ ಅವರಿಗೆ ಶನಿವಾರ ಶಾಲೆಯಿಂದ ಬೀಳ್ಕೊಡುಗೆ ನೀಡಲಾಯಿತು‌. ಅದಾದ ನಂತರ ಅಲ್ಲಿಂದ 22 ಕಿಮೀ ದೂರದಲ್ಲಿರುವ ತಮ್ಮೂರು ಮಾಲ್ವಾಲಿ ಗೆ ಹೋಗಲು ಅವರು ದೆಹಲಿ ಮೂಲದ ಒಂದು ಹೆಲಿಕಾಪ್ಟರ್ ಸರ್ವೀಸ್ ಅವರಿಗೆ 3.70 ಲಕ್ಷ ರೂಪಾಯಿ ನೀಡಿ ಹೆಲಿಕಾಪ್ಟರ್ ಬುಕ್ ಮಾಡಿದ್ದರು. ಬೀಳ್ಕೊಡುಗೆ ಕಾರ್ಯಕ್ರಮ ಮುಗಿದ ನಂತರ ತಮ್ಮ ಪತ್ನಿ ಮತ್ತು ಮೊಮ್ಮಗನ ಜೊತೆ ಶಾಲೆಯ ಬಳಿಯ ಹೆಲಿ ಪ್ಯಾಡ್ ನಿಂದ ತಮ್ಮ ಗ್ರಾಮಕ್ಕೆ ತೆರಳಿದ್ದಾರೆ. ಅವರ ಪ್ರಯಾಣ ಹದಿನೆಂಟು ನಿಮಿಷದ್ದು. ಆದರೆ ಆ ಪ್ರಯಾಣ ತಂದ ಅನುಭವ ಅವರ್ಚನೀಯ ಎನ್ನುತ್ತಾರೆ ರಮೇಶ್ ಚಂದ್ ಮೀನಾ ಅವರು.

ಗ್ರಾಮದಲ್ಲಿ ಕೂಡಾ ಅವರ ಆಗಮನವನ್ನು ನೋಡಲು ಬಹಳಷ್ಟು ಜನರು ನೆರೆದಿದ್ದರು. ಇನ್ನು ರಮೇಶ್ ಚಂದ್ ಮೀನಾ ಅವರು ತನಗೆ ಹೆಲಿಕಾಪ್ಟರ್ ನಲ್ಲಿ ಹೋಗಲು ಅನುಮತಿ ನೀಡಿದ ಜಿಲ್ಲಾಡಳಿತಕ್ಕೆ ಧನ್ಯವಾದ ಹೇಳಿದ್ದಾರೆ. ಅಗತ್ಯವಿರುವ ಎಲ್ಲಾ ಅನುಮತಿ ಪಡೆದಿದ್ದೆ ಎಂದು ಅವರು ಹೇಳಿದ್ದಾರೆ. ಅವರ ಪತ್ನಿ ಸೊಮೊತಿ ಮತ್ತು ಮೊಮ್ಮಗ ಅಜಯ್ ಇಬ್ಬರೂ ಕೂಡಾ ಹೆಲಿಕಾಪ್ಟರ್ ನ ಪ್ರಯಾಣದಿಂದ ಖುಷಿ ಪಟ್ಟಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here