ರಸ್ತೆಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ಯುವಕನೊಬ್ಬ ಪೋಲಿಸ್ ಸಿಬ್ಬಂದಿಯೊಬ್ಬರು ತಪಾಸಣೆಗಾಗಿ ಯುವಕ ತನ್ನ ಬೈಕ್ ನಿಲ್ಲಿಸಲಿಲ್ಲ ಎಂದು ಕೋಪಗೊಂಡು, ಪೋಲಿಸ್ ಸಿಬ್ಬಂದಿ ತನ್ನ ಕೈಯಲಿದ್ದ ಲಾಠಿಯನ್ನು ಎಸೆದ ಪರಿಣಾಮವಾಗಿ 19 ವರ್ಷದ ಯುವಕನೊಬ್ಬ ನಿಯಂತ್ರಣ ತಪ್ಪಿ ಎದುರಿನಿಂದ‌ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿ ಗಂಭೀರ ಸ್ಥಿತಿಯನ್ನು ತಲುಪಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ‌ ಕೊಲ್ಲಂ‌ನ ಕಾಡಕ್ಕಲ್ ಮುಖ್ಯ ರಸ್ತೆಯಲ್ಲಿ ಇಂತಹುದೊಂದು ಘಟನೆ ನಡೆದಿದ್ದು, ಅಪಘಾತ ಮಧ್ಯಾಹ್ನ 12 ಸಮಯದಲ್ಲಿ ನಡೆದಿದೆ ಎನ್ನಲಾಗಿದೆ.

ಅಪಘಾತಕ್ಕೆ ಈಡಾದ ಯುವಕನ ಹೆಸರು ಸಿದ್ಧಿಕ್ ಎಂದು ತಿಳಿದು ಬಂದಿದ್ದು. ಈತ ಬೈಕಿನಲ್ಲಿ ಹೆಲ್ಮೆಟ್ ಇಲ್ಲದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ. ಹೆಲ್ಮೆಟ್ ಧರಿಸದ ಕಾರಣ ಮುಖ್ಯ ರಸ್ತೆಯಲ್ಲಿರುವ ಚೆಕ್ ಪೋಸ್ಟ್ ಬಳಿ ಪೋಲಿಸರಿಗೆ ಸಿಗಬಾರದು ಎಂಬ ಪ್ರಯತ್ನದಲ್ಲಿ ಆತ ಇದ್ದನು. ಆ ಸಮಯದಲ್ಲಿ ಸಿವಿಲ್ ಪೋಲಿಸ್ ಸಿಬ್ಬಂದಿ ವಾಹನಗಳ ತಪಾಸಣೆಯನ್ನು ನಡೆಸಿದ್ದರು. ಯುವಕನಿಗೂ ಕೂಡಾ ತನ್ನ ಬೈಕ್ ನಿಲ್ಲಿಸಲು ಸೂಚನೆ ನೀಡಿದ್ದಾರೆ. ಆದರೆ ಸಿದ್ದೀಕ್ ಪೋಲಿಸರ ಸೂಚನೆಗೆ ಗಮನ ನೀಡದೆ ಅಲ್ಲಿಂದ ತಪ್ಪಿಸಿಕೊಳ್ಳಲು ಬೈಕ್ ನಲ್ಲಿ ಮುಂದೆ ಸಾಗಿದ್ದಾನೆ.

ಸಿದ್ದಿಕ್ ನ ಈ ವರ್ತನೆ ನೋಡಿದ ಚಂದ್ರಮೋಹನ್ ಎಂಬ ಸಿಬ್ಬಂದಿ ತಮ್ಮ ಕೈಯಲ್ಲಿದ್ದ ಲಾಠಿಯನ್ನು ಸಿದ್ದಿಕ್ ಕಡೆ ಎಸೆದಿದ್ದು, ಅದರಿಂದ ತಪ್ಪಿಸಿಕೊಳ್ಳಲು ಹೋದ ಯುವಕ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ತೀವ್ರ ಅಪಘಾತವಾಗಿದ್ದು, ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಗಂಭೀರವಾದ ಗಾಯಗಳಾಗಿವೆ. ಈ ವಿಷಯವಾಗಿ ಎಸ್.ಪಿ.ಶಂಕರ್ ಅವರು ಚಂದ್ರ ಮೋಹನ್ ಅವರು ಲಾಠಿ ಬೀಸಿರುವುದು ಖಚಿತವಾದ್ದರಿಂದ ಅವರನ್ನು ಅಮಾನತ್ತು ಮಾಡಲಾಗಿದೆ ಎಂದೂ ಸಮಗ್ರವಾದ ತನಿಖೆಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here