ಮನೆ ಹೆಂಡತಿಗೆ ಅಡುಗೆಯಲ್ಲಿ ಸಹಾಯ ಮಾಡಿ ನಂತರ ಆಕೆ ನಿಮಗೆ ಮಿಲನಕ್ರಿಯೆಯಲ್ಲಿ ಜೊತೆಯಾಗುತ್ತಾಳೆ

ಇದು ನಾವು ಹೇಳಿದ ಮಾತಲ್ಲ ಇದು ವಿಜ್ಞಾನಿಗಳ ಹೊಸ ಸಂಶೋಧನೆ

:ನನಗೆ ಹಾಸಿಗೆಯಲ್ಲಿ ಸುಖವೇ ಸಿಗುತ್ತಿಲ್ಲ. ದಿನಾ ಬರೀ ಯಾಂತ್ರಿಕವಾಗಿ ಕೆಲಸ ಮುಗಿಸೋದಷ್ಟೇ. ಜೀವನವೇ ಬೇಸರ ಬಂದುಬಿಟ್ಟಿದೆ’ ಎಂದು ಕೊರಗುತ್ತಿರುವ ಪುರುಷ ಸಿಂಹಗಳಿಗೆ ಇಲ್ಲಿದೆ ಒಂದು ಸುಲಭ ಉಪಾಯ.

ಹಾಸಿಗೆ ಸುಖ ಹೆಚ್ಚಿಸಿಕೊಳ್ಳಬೇಕೇ? ಹಾಗಾದ್ರೆ ಅಡುಗೆ, ಮನೆಗೆಲಸ ಮಾಡಿ! ಇದೇನೂ ಢೋಂಗಿ ವೈದ್ಯರ ಜಾಹೀರಾತಲ್ಲ. ಕ್ಯಾಲಿಫೋರ್ನಿಯಾ ವಿವಿ ಸಂಶೋಧಕರ ಹೊಸ ಸಂಶೋಧನೆ.

ಪತ್ನಿಗೆ ಅಡುಗೆ ಕೆಲಸ, ಮನೆಗೆಲಸದಲ್ಲಿ ಸಹಕರಿಸುವ ಗಂಡನಿಗೆ ಲೈಂಗಿಕ ಕ್ರಿಯೆಯಲ್ಲೂ ಹೆಚ್ಚಿನ ಸುಖ ಸಿಗುತ್ತದೆ ಎಂದು ಈ ಸಂಶೋಧಕರು ಹೇಳುತ್ತಾರೆ. ಸರಿ, ಅಡುಗೆ ಮಾಡೋದಕ್ಕೂ ಹಾಸಿಗೆ ಸುಖಕ್ಕೂ ಏನಪ್ಪಾ ಸಂಬಂಧ ಅಂತೀರ ?

ಸಂಬಂಧ ಇದೆ…

ಮನೆಯಲ್ಲಿ ಹೆಂಡತಿಯ ಜತೆ ಕೆಲಸದಲ್ಲಿ ಗಂಡನೂ ಸೇರಿಕೊಂಡರೆ ಆಕೆಗೆ ಖುಷಿ ಹೆಚ್ಚಾಗುತ್ತೆ, ತೃಪ್ತಿ ಸಿಗುತ್ತದಂತೆ. ಮಿಲನ ಮಹೋತ್ಸವದಲ್ಲೂ ಅವಳು ಅದೇ ಖುಷಿಯಲ್ಲಿ ಪಾಲ್ಗೊಳ್ಳುತ್ತಾಳೆ. ಇದರಿಂದ ದಾಂಪತ್ಯವೂ ಸುಲಲಿತವಾಗಿ ಸಾಗುತ್ತದೆ ಎಂದು ಸಂಶೋಧಕರು ಗುಟ್ಟು ಬಿಟ್ಟುಕೊಟ್ಟಿದ್ದಾರೆ.

ಗಂಡ ಮನೆಗೆಲಸ ಮಾಡಿದ್ರೆ ನಮಗೂ ಸೆಕ್ಸ್‌ನಲ್ಲಿ ಆಸಕ್ತಿ ಹೆಚ್ಚಾಗುತ್ತದೆ ಎಂದು ಪತ್ನಿಯರು ಸಂಶೋಧಕರ ಮುಂದೆ ಉಲಿದಿದ್ದಾರೆ. ಅಂದಹಾಗೆ, ಮನೆಗೆಲಸ ಮಾಡ್ಬೇಕಾಗಿದ್ದಲ್ವೇ ಅಂತ ಹೇಳಿ ಚಾವಡಿಯಲ್ಲಿ ಮಗುವಿನ ಜತೆ ಆಟ ಆಡ್ತಾ ಕೂತರೆ ಪತಿ-ಪತ್ನಿ ಸಂಬಂಧ ಸುಧಾರಿಸೋದಿಲ್ಲ ಎಂದು ಎಚ್ಚರಿಸುತ್ತಾರೆ ಮನೋವೈದ್ಯರು.

ಹಾಗಾದರೆ ಇನ್ನೇಕೆ ತಡ ಹೋಗಿ ನಿಮ್ಮ ಪತ್ನಿಯರಿಗೆ ಅಡುಗೆ ಕೆಲಸದಲ್ಲಿ ಸಹಾಯ ಮಾಡಿ ಮುಂದೆ………….. 🙂

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here