ಅಮೆರಿಕ ಅಮೆರಿಕ ಸಿನಿಮಾದ ನಟಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ದೊರೆ ಸಿನಿಮಾದ ನಾಯಕಿ, ತನ್ನ ನಟನೆಯ ಮೂಲಕವೇ ಜನರ ಮನಸ್ಸನ್ನು ಗೆದ್ದ ನಟಿ ಹೇಮಾ ಪಂಚಮುಖಿ. ಅವರು ಹೆಚ್ಚು ಚಿತ್ರಗಳಲ್ಲಿ ನಟಿಸಲಿಲ್ಲವಾದರೂ ನಟಿಸಿದ ಕೆಲವೇ ಚಿತ್ರಗಳ ಮೂಲಕವೇ ತನ್ನ ಅಭಿನಯ ಸಾಮರ್ಥ್ಯವನ್ನು ಕಲಾ ರಸಿಕರ ಮುಂದೆ ಇಟ್ಟು, ಮನ್ನಣೆ ಪಡೆದ ನಟಿ. ಇಂತಹ ಪ್ರತಿಭಾನ್ವಿತ ನಟಿ ಈಗ ಮತ್ತೊಮ್ಮೆ ಜನರ ಮುಂದೆ ಬರುತ್ತಿದ್ದಾರೆ. ರಕ್ಷಾ ಬಂಧನ ಎಂಬ ಧಾರಾವಾಹಿಯ ಮೂಲಕ ಮತ್ತೊಮ್ಮೆ ಜನರ ಹತ್ತಿರವಾಗಲು ಬರುತ್ತಿದ್ದಾರೆ ನಟಿ
ಹೇಮಾ ಅವರು.

ಹೇಮ ಅವರು ಕನ್ನಡದಲ್ಲಿ ನಟನಾಗಿದ್ದ, ರಂಗೋಲಿ ಸಿನಿಮಾದ ನಾಯಕ ಪ್ರಶಾಂತ್ ಅವರನ್ನು ಎರಡನೇ ಮದುವೆ ಆಗಿದ್ದು, ಅವರು ಈಗ ಹೇಮ ಪ್ರಶಾಂತ್ ಆಗಿದ್ದಾರೆ. ಸತಿ ಪತಿಯಿಬ್ಬರೂ ಕೂಡಾ ಭರತ ನಾಟ್ಯ ಕಲಾವಿದರು ಎಂಬುದು ಕೂಡಾ ವಿಶೇಷ. ಹೇಮಾ ಅವರು ಭರತ ನಾಟ್ಯ ತರಬೇತಿಯನ್ನು ಕೂಡಾ ನೀಡುವರು. ಇಬ್ಬರು ಮಕ್ಕಳ ತಾಯಿಯಾಗಿರುವ ಹೇಮಾ ಪ್ರಶಾಂತ್ ಅವರು ರಕ್ಷಾ ಬಂಧನ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಹೇಮಾ ಹಾಗೂ ಅವರ ಪತಿ ಪ್ರಶಾಂತ್ ಅವರು ತಮ್ಮದೇ ನಾಟ್ಯ ಶಾಲೆಯನ್ನು ನಡೆಸುತ್ತಿದ್ದು, ನಾಟ್ಯ ತರಬೇತಿಯನ್ನು ನೀಡುವ ಕಾಯಕದಲ್ಲಿ ಅವರು ತೊಡಗಿಕೊಂಡಿದ್ದಾರೆ. ಅಭಿನಯದ ಮೂಲಕವೇ ಜನರ ಮನಸ್ಸನ್ನು ಗೆದ್ದು, ಸದಭಿರುಚಿಯ ಚಿತ್ರಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದ ಇವರ ಅಮೆರಿಕ ಅಮೆರಿಕ ಸಿನಿಮಾ ಅವರ ಬಹಳ ಹೆಸರುವಾಸಿಯಾದ ಸಿನಿಮಾ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here