ವಲಸೆ ಕಾರ್ಮಿಕರ ಕರುಣಾಜನಕ ಸ್ಥಿತಿಯನ್ನು ನೋಡಿ ಕುರಿತಾಗಿ ಇದು ಮನುಷ್ಯನ ದುರಂತವಲ್ಲದೆ ಮತ್ತೇನೂ ಅಲ್ಲವೆಂದು ಮದ್ರಾಸ್ ಹೈಕೋರ್ಟ್ ಮಾನವೀಯ ಬಿಕ್ಕಟ್ಟಿನ ಸ್ಥಿತಿಯನ್ನು ಕಠಿಣವಾದ ಪದಗಳಲ್ಲಿ ಬಣ್ಣಿಸಿ ಹೇಳಿದೆ. ತಮಿಳುನಾಡು ಹೈ ಕೋರ್ಟ್ ವಲಸೆ ಕಾರ್ಮಿಕರ ಸುರಕ್ಷತೆಯನ್ನು ಕಾಪಾಡುವಲ್ಲಿ ವಿಫಲವಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡನ್ನು ಕೂಡ ತರಾಟೆಗೆ ತೆಗದುಕೊಂಡಿದೆ. ವಲಸೆ ಕಾರ್ಮಿಕರ ಬಿಕ್ಕಟ್ಟನ್ನು ರಾಜ್ಯವಾರು ಡೇಟಾ ಆಧಾರದ ಮೇಲೆ ನೋಡಿ ಅವರ ಸಂಕಷ್ಟಕ್ಕೆ ಸರ್ಕಾರವು ಮಿಡಿಯಬೇಕು ಎಂದು ಹೈಕೋರ್ಟ್ ಸೂಚನೆಯನ್ನು ಕೂಡಾ ಈ ಸಂದರ್ಭದಲ್ಲಿ ನೀಡಿದೆ.

ವಲಸೆ ಕಾರ್ಮಿಕರು ತಮ್ಮ ಊರುಗಳನ್ನು ಸೇರಲು ದಿನಗಟ್ಟಲೆ ಗುಂಪು ಗುಂಪಾಗಿ ಕಾಲ್ನಡಿಗೆಯಲ್ಲಿ ಹೋಗುತ್ತಿರುವುದು ವಿಷಾದಕರ ಸಂಗತಿಯಾಗಿದೆ ಎಂದಿರುವ ತಮಿಳುನಾಡಿನ ಹೈಕೋರ್ಟ್, ಹೀಗೆ ನಡೆದು ಹೋಗುತ್ತಿರುವ ಕಾರ್ಮಿಕರಲ್ಲಿ ಹಲವರು ಅಪಘಾತಗಳಿಗೆ ತುತ್ತಾಗಿದ್ದಾರೆ, ಎಲ್ಲಾ ರಾಜ್ಯಗಳು ಕೂಡಾ ತಮ್ಮ ವಲಸೆ ಕಾರ್ಮಿಕರಿಗೆ ಮಾನವೀಯ ಸೇವೆಗಳನ್ನು ಇನ್ನಷ್ಟು ವಿಸ್ತರಿಸಬೇಕಿತ್ತು ಎಂದು ಹೇಳಿದ್ದು, ಮಾದ್ಯಮಗಳಲ್ಲಿ ತೋರಿಸಿದ ವಲಸೆ ಕಾರ್ಮಿಕರ ದುಸ್ಥಿತಿಯು ಮಾನವ ದುರಂತವಲ್ಲದೆ ಮತ್ತೇನು? ಅದನ್ನು ನೋಡಿ ಕಣ್ಣೀರು ಸುರಿಸುವಂತಾಗಿದೆ ಎಂದು ನ್ಯಾಯಮೂರ್ತಿಗಳು ಎನ್ ಕಿರುಬಕರನ್ ಮತ್ತು ಆರ್ ಹೇಮಲತಾ ಹೇಳಿದರು.

ನ್ಯಾಯಾಲಯವು ಹೀಗೆ ಟೀಕೆ ಮಾಡಿದ ನಂತರ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ವಲಸೆ ಕಾರ್ಮಿಕರಿಗೆ ಶಿಬಿರಗಳಲ್ಲೇ ಇರಿ ಎಂದು, ಸರ್ಕಾರ ನಿಮಗೆ ನೆರವು ನೀಡಲಿದೆ ಎಂದು ಭರವಣೆಯನ್ನು ನೀಡಿದ್ದಾರೆ. ಅಲ್ಲದೇ ನಿಮ್ಮೆಲ್ಲರನ್ನೂ ರೈಲುಗಳ ಮೂಲಕ ಕಳುಹಿಸಲು ವಿವಿಧ ರಾಜ್ಯಗಳ ಜೊತೆಗೆ ಸಮನ್ವಯ ಸಾಧಿಸಲು ಪ್ರಯತ್ನಗಳನ್ನು ಕೂಡಾ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here