ಯೋಗಕ್ಕಿರುವ ಮಹತ್ವ ಅರಿತವರು ಅದರಿಂದ ದೂರಾಗಲಿ ಬಯಸುವುದಿಲ್ಲ. ಉತ್ತಮ ದೈಹಿಕ ಆರೋಗ್ಯಕ್ಕೆ, ದೈಹಿಕ ಸದೃಢತೆಗೆ ವ್ಯಾಯಾಮ ಬಹಳ ಮುಖ್ಯ. ಭಾರತೀಯ ಸಂಸ್ಕೃತಿಯಲ್ಲಿ ಯೋಗವು ಅವಿಭಾಜ್ಯ ಅಂಗವಾಗಿಯೇ ಹೋಗಿದೆ. ಆಧು‌ನಿಕತೆಯ ಹೆಸರಿನಲ್ಲಿ ಜನರು ಯೋಗವನ್ನು ಮರೆತು ಅನೇಕ ರೋಗಗಳಿಂದ, ಮಾನಸಿಕ ಕಿರಿಕಿರಿಯಿಂದ ಬಳಲುತ್ತಿದ್ದರೆ, ಸಣ್ಣ ಪುಟ್ಟ ವ್ಯತ್ಯಾಸವಾದರೂ ದೇಹದಲ್ಲಿ ರೋಗ ನಿರೋಧಕ ಶಕ್ತಿಯಿಲ್ಲದೆ ಆಸ್ಪತ್ರೆಗಳ ಕಡೆ ಓಡುತ್ತಾರೆ ಜನರು. ಇದಕ್ಕೆಲ್ಲಾ ಪರಿಹಾರ ಎಂದರೆ ಯೋಗ.

ಇನ್ನೇನು ವಿಶ್ವಯೋಗ ದಿನ ಹತ್ತಿರವಾಗುತ್ತಿದೆ. ಅದರ ಹಿನ್ನೆಲೆಯಲ್ಲಿ ಈಗೊಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಾವು ಲದಾಖ್ ನ ಕೊರೆಯುವ ಚಳಿಯಲ್ಲಿ, ಹಿಮಾಚ್ಛಾದಿತ ಪ್ರದೇಶದಲ್ಲಿ ಮುಂಜಾನೆ ಯೋಗ ಮಾಡುತ್ತಿರುವ ಯೋಧರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗುತ್ತಿದೆ. ಇಂಡೋ ಟಿಬೆಟ್ ಬಾರ್ಡರ್ ಪೋಲಿಸ್ ಸಿಬ್ಬಂದಿಯು ಲದಾಖ್ ನಲ್ಲಿ ಕೊರೆಯುವ ಚಳಿಯಲ್ಲಿ ಯೋಗಾಭ್ಯಾಸವನ್ನು ಮಾಡುತ್ತಿರುವ ವಿಡಿಯೋ ಎಲ್ಲರ ಗಮನವನ್ನು ಸೆಳಯುತ್ತಿದೆ.

 

ಐಟಿಬಿಪಿ ತನ್ನ ಟ್ವಿಟರ್ ಖಾತೆಯಲ್ಲಿ 18,000 ಅಡಿ ಎತ್ತರದಲ್ಲಿ ಸಂಪೂರ್ಣ ಹಿಮಾಚ್ಛಾದಿತವಾಗಿರುವ ಲದಾಖ್ ನಲ್ಲಿ ಯೋಧರು ಯೋಗ ಮಾಡುತ್ತಾ ಎಲ್ಲರ ಗಮನವನ್ನು ಸೆಳೆದಿದೆ. ಜೂನ್ 21 ರಂದು ವಿಶ್ವ ಯೋಗ ದಿನವಿದ್ದು, ಅದಕ್ಕಿಂತ ಮೊದಲು ಈ ವಿಡಿಯೋವನ್ನು ಹಾಕುವ ಮೂಲಕ ಐಟಿಬಿಪಿ ಯೋಧರು ಜನರಿಗೆ ಯೋಗದ ಪ್ರಾಮುಖ್ಯತೆ ಯನ್ನು ಹಾಗೂ ಯೋಗ ದಿನಕ್ಕೆ ಜನರಿಗೆ ಪ್ರೇರಣೆಯೊಂದನ್ನು ರವಾನಿಸಿದಂತೆ ಇದೆ ಈ ವಿಡಿಯೋ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here