ಹಿಮಾಚಲ ಪ್ರದೇಶ ವಿಧಾನಸಭೆಯು ಹೊಸ ಮಸೂದೆಯನ್ನು ಅಂಗೀಕರಿಸಿದೆ. ಅದರ ಅನ್ವಯ ಯಾರನ್ನೇ ಆಗಲಿ ಹೊಸ ಮತ್ತವೊಂದನ್ನು ಒಪ್ಪಿಕೊಳ್ಳಲು, ಬಲವಂತವಾಗಿಯಾಗಲೀ, ಪ್ರಚೋಚನೆ ನೀಡುವ ಮೂಲಕವಾಗಲೀ ಅಥವಾ ವಿವಾಹಗಳ ಮೂಲಕ ಮತಾಂತರ ಮಾಡುವುದರ ವಿರುದ್ಧ ಶುಕ್ರವಾರ ಮಸೂದೆಯನ್ನು ಅಂಗೀಕರಿಸಿತು. ಹಿಮಾಚಲ ಪ್ರದೇಶದ ಸ್ವಾತಂತ್ರ್ಯ ಧರ್ಮ ಮಸೂದೆ 2019 ಅನ್ನು ಎಲ್ಲಾ ಪ್ರತಿಪಕ್ಷಗಳು ಬೆಂಬಲಿಸಿದವು ಹಾಗೂ ಈ ಮಸೂದೆಯನ್ನು ವಿಧಾನ ಸಭೆಯು, ಸರ್ವಾನುಮತದಿಂದ ಅಂಗೀಕರಿಸಿದ್ದು, ಇದೊಂದು ಉತ್ತಮ ನಿರ್ಣಯವೆಂದು ಶ್ಲಾಘಿಸಲ್ಪಟ್ಟಿದೆ.

ಈ ಮಸೂದೆಯ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ
ಮುಖ್ಯಮಂತ್ರಿ ಜೈ ರಾಮ್ ಠಾಕೂರ್, “ಬಲವಂತದ ಮತಾಂತರ”, ವಿಶೇಷವಾಗಿ ರಾಂಪುರ್ ಮತ್ತು ಕಿನ್ನೌರ್ನಲ್ಲಿ ಹೆಚ್ಚುತ್ತಿರುವ ಕಾರಣ ಹೊಸ ಕಠಿಣ ಶಾಸನ ಅಗತ್ಯವಿದ್ದು, 2006 ರ ಅದೇ ಕಾನೂನುನ್ನ ಈಗ ಮತ್ತಷ್ಟು ಕಠಿಣಗೊಳಿಸಲಾಗಿದೆ , ಅದರ ಅಗತ್ಯವೂ ಇದೆ ಎಂದು ಹೇಳಿದ್ದಾರೆ. ಬಲವಂತವಾಗಿ ಮತಾಂತರಕ್ಕೆ ಪ್ರಯತ್ನ ಮಾಡಿದರೆ ಅಂತಹವರಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಹೇಳಿದ್ದು, ಅದನ್ನು ಈ ಮಸೂದೆ ಸ್ಪಷ್ಟವಾಗಿ ಹೇಳಿದೆ.

ಧರ್ಮವನ್ನು ತಪ್ಪಾಗಿ ನಿರೂಪಣೆ ಮಾಡುವುದು, ಮತಾಂತರಕ್ಕೆ ಬಲ, ಅನಗತ್ಯ ಪ್ರಭಾವ, ಬಲಾತ್ಕಾರ, ಪ್ರಚೋದನೆ, ಮದುವೆ ಅಥವಾ ಯಾವುದೇ ಮೋಸದ ವಿಧಾನಗಳನ್ನು ಮಸೂದೆಯು ನಿಷೇಧಿಸುತ್ತದೆ. ಮತಾಂತರದ ಏಕೈಕ ಉದ್ದೇಶಕ್ಕಾಗಿ ಮಾಡಿದ ಯಾವುದೇ ಮದುವೆಯನ್ನೇ ಆಗಲಿ ಮಸೂದೆಯ ಸೆಕ್ಷನ್ 5 ರ ಅಡಿಯಲ್ಲಿ ಶೂನ್ಯ ಮತ್ತು ಅನೂರ್ಜಿತವೆಂದು ಘೋಷಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here