ಇರುಳು ಕಳೆದು ಹಗಲಾಗುವ ವೇಳೆಗೆ ಇಂಟರ್ನೆಟ್ ನಲ್ಲಿ ಗಾಯನದಿಂದ ಸೆನ್ಸೇಷನ್ ಸೃಷ್ಟಿಸಿ, ಒಂದು ವಿಡಿಯೋದಿಂದಾಗಿ ರೈಲ್ವೆ ನಿಲ್ದಾಣದಲ್ಲಿ ಹಾಡಿದ್ದ ರಾನು ಮಂಡಲ್ ಖ್ಯಾತ ರಿಯಾಲಿಟಿ ಶೋ ಗೆ ತಲುಪಿ, ಅಲ್ಲಿಂದ ನಟ, ನಿರ್ದೇಶಕ , ಗಾಯಕ ಹಾಗೂ ಸಂಗೀತ ನಿರ್ದೇಶಕರೂ ಆದ ಹಿಮೇಶ್ ರೇಷಮಿಯಾ ಅವರು ನೀಡಿದ ಅವಕಾಶವೊಂದರಿಂದ ಬಾಲಿವುಡ್ ನಲ್ಲಿ ಗಾಯಕಿಯಾಗಿದ್ದು ಈಗ ಇತಿಹಾಸ.‌ ಹಿಮೇಶ್ ರೇಷಮಿಯ ತಮ್ಮ ಹೊಸ ಸಿನಿಮಾ ಹ್ಯಾಪಿ , ಹಾರ್ಡಿ ಅಂಡ್ ಹೀರ್ ಮೂಲಕ ರಾನು ಮಂಡಲ್ ಅವರನ್ನು ಬಾಲಿವುಡ್ ಗೆ ಪರಿಚಯಿಸಿರುವುದು ಮಾತ್ರವಲ್ಲದೆ ಚಿತ್ರದಲ್ಲಿ ಮೂರು ಹಾಡು ಗಳನ್ನು ಆಕೆಯಿಂದ ಹಾಡಿಸಿದ್ದಾರೆ.

ರಾನು ಮಂಡಲ್ ಗೆ ಒಂದು ಅವಕಾಶವನ್ನು ನೀಡಿ, ಆಕೆಯನ್ನು ಇಂದಿನ ಒಂದು ಒಳ್ಳೆಯ ಜೀವನ ನಡೆಸಲು ಕಾರಣವಾಗಿರುವ ಹಿಮೇಶ್ ರೇಷಮಿಯಾ ಇತ್ತೀಚಿಗೆ ಒಂದು ಪತ್ರಿಕಾಗೋಷ್ಠಿಯಲ್ಲಿ ರಾನು ತಮ್ಮ ಬಗ್ಗೆ ಹೇಳಿದ ಮಾತುಗಳನ್ನು ಕೇಳಿ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ. ರಾನು ಅವರು ಮಾತನಾಡುತ್ತಾ ಇಂದು ನಾನು ಪತ್ರಿಕಾಗೋಷ್ಠಿಗೆ ಬರಲು ಮುಖ್ಯ ಕಾರಣ ಹಿಮೇಶ್. ನಾನು ಅವರಿಂದಾಗಿಯೇ ನಾನು ಇವತ್ತು ಇಲ್ಲಿಗೆ ಬಂದಿದ್ದೇನೆ” ಎಂದು ರಾನು ಹೇಳುತ್ತಿದ್ದಂತೆ ಹಿಮೇಶ್ ಕಣ್ಣೀರು ಹಾಕಿದ್ದಾರೆ. ನನಗೆ ದೇವರ ದಯೆ ಇಲ್ಲದಿದ್ದರೆ ಹಾಡಲು ಅವಕಾಶ ಸಿಗುತ್ತಿರಲ್ಲಿವೇನೂ, ನನ್ನ ಮೇಲೆ ದೇವರ ದಯೆ ಇದೆ. ಅದಕ್ಕಾಗಿ ನಾನು ಹಾಡಬಲ್ಲೆ. ಎಂದು ಆಕೆ ಹೇಳಿದ್ದಾರೆ.

ಹಿಮೇಶ್ ತಮ್ಮ ಹೊಸ ಸಿನಿಮಾ “ಹ್ಯಾಪಿ ಹಾರ್ಡಿ ಆಂಡ್ ಹೀರ್” ಗಾಗಿ ರಾನು ಅವರಿಂದ ಮೂರು ಹಾಡು ಹಾಡಿಸಿದ್ದಾರೆ. ಒಂದು ಹಾಡನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು. ಚಿತ್ರದ ತೇರಿ ಮೇರಿ ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. “ಹ್ಯಾಪಿ ಹಾರ್ಡಿ ಆಂಡ್ ಹೀರ್” ಸಿನಿಮಾದಲ್ಲಿ ಹಿಮೇಶ್ ನಾಯಕನಾಗಿದ್ದು, ಅವರೇ ಸಿನಿಮಾದ ನಿರ್ದೇಶನ ಮತ್ತು ನಿರ್ಮಾಣವನ್ನು ಮಾಡುತ್ತಿದ್ದಾರೆ. ರಾನು ಮಂಡಲ್ ಬಳಿ ಹಾಡಿಸಿರುವ ಇನ್ನು ಎರಡು ಹಾಡುಗಳು ಶೀಘ್ರದಲ್ಲೇ ಜನರಿಗೆ ತೆರೆಯ ಮೇಲೆ ನೋಡಲು ಸಿಗಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here