ದೇಶದಲ್ಲಿ ಇಂದಿಗೂ ಧರ್ಮಗಳ ಹೆಸರಿನಲ್ಲಿ ಹಿಂಸೆಗಳು ನಡೆಯುತ್ತಿವೆ. ಧರ್ಮದ ನಿಜವಾದ ಅರ್ಥ ತಿಳೀದೆ ಕೋಮುವಾದದ ಹೆಸರಲ್ಲಿ ಹಿಂಸೆಗೆ ತೊಡಗಿದ್ದಾರೆ ಸ್ವಾರ್ಥಿಗಳು. ಆದರೆ ಅದರ ನಡುವೆ ಕೆಲವು ಘಟನೆಗಳು ನಮ್ಮ ಕಣ್ತೆರೆಸುವಂತೆ ನಡೆಯುತ್ತೆ. ಅಂತಹುದೇ ಒಂದು ಘಟನೆ ಕೋಮು ಸಾಮರಸ್ಯ ಎಂದರೆ ಹೇಗಿರಬೇಕು ಎಂಬುದಕ್ಕೆ ಸ್ಪಷ್ಟವಾದ ಸಾಕ್ಷಿಯಾಗಿದೆ. ಅಸ್ಸಾಂನ ಹೈಲಕಂಡಿ ಜಿಲ್ಲೆಯಲ್ಲಿ ಆರು ದಿನಗಳ‌ ಹಿಂದೆ ನಡೆದ ಕೋಮು ಗಲಭೆಯ ಹಿಂಸಾಚಾರದಿಂದ ಕರ್ಪ್ಯೂ ವಿಧಿಸಿದ್ದರು. ಆದರೆ ಅದನ್ನು ಕೂಡ ಲೆಕ್ಕಿಸದೇ ಹೆರಿಗೆ ನೋವಿನಿಂದ ಸಂಕಟ ಪಡ್ತಾ ಇದ್ದ ಒಬ್ಬ ಹಿಂದು ಮಹಿಳೆಯನ್ನು ಮುಸ್ಲಿಂ ಆಟೋ ಚಾಲಕ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆಯನ್ನು ಮೆರೆದಿದ್ದಾನೆ.

ಹೈಲಕಂಡಿ ಜಿಲ್ಲೆಯ ನಿವಾಸಿ ಆಗಿರೋ ತುಂಬು ಗರ್ಭಿಣಿಯಾದ ನಂದಿತಾಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ ಅವರ ಪತಿ ರುಬಿನ್​ ದಾಸ್​ ಗೆ ಭಯ ಆಗಿದೆ. ಕಾರಣ ಇಡೀ ಗ್ರಾಮದಲ್ಲಿ ವಿಧಿಸಿರೋ ಕರ್ಪ್ಯೂ. ಆಂಬುಲೆನ್ಸ್​ ಬಹಳ ಅವಶ್ಯಕ ಆಗಿದ್ದ ಸಮಯ ಅದು. ಆದರೆ ಅದು ಸಾಧ್ಯವಾಗಲಿಲ್ಲ. ನಂದಿತಾಗೆ ಹೆರಿಗೆ ನೋವು ಹೆಚ್ಚಾಗ್ತಾ ಇತ್ತು. ಯಾರಾದ್ರೂ ಸಹಾಯಕ್ಕೆ ಬರಬಹುದಾ ಅಂತ ರುಬಿನ್ ಕಾದು ನೋಡಿದ್ದಾರೆ. ಆದ್ರೆ, ಯಾರು ಮುಂದೆ ಬರ್ದೇ ಇದ್ದಾಗ ಸ್ಥಳೀಯ ಮುಸ್ಲಿಂ ವ್ಯಕ್ತಿ ಮಕ್ಬೂಲ್​ ಅನ್ನೋ ಆಟೋ‌ ಚಾಲಕ ಮುಂದೆ ಬಂದು ಕರ್ಪ್ಯೂವನ್ನು ಕೂಡಾ ಲೆಕ್ಕ ಮಾಡ್ದೆ ರಿಸ್ಕ್ ತಗೊಂಡು ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ.

ನಂದಿತಾ ಆಸ್ಪತ್ರೇಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯ ತಿಳಿದ ಹೈಲಕಂಡಿ ಜಿಲ್ಲೆಯ ಡೆಪ್ಯೂಟಿ ಕಮಿಷನರ್​ ಕೀರ್ತಿ ಜಲ್ಲಿ,​ ನಂದಿತಾ ಮತ್ತು ರುಬಿನ್​ ಅವರನ್ನು ಭೇಟಿ ಮಾಡಿ ತಾಯಿ ಹಾಗೂ ಮಗುವಿನ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಸಹಾಯಕ್ಕೆ ಮುಂದೆ ಬಂದ ಆಟೋ ಚಾಲಕ ಮಕ್ಬೂಲ್ ನ ಕೂಡಾ ಭೇಟಿ ಮಾಡಿ ಧನ್ಯವಾದ ಹೇಳಿದ್ದಾರೆ. ಅವರು ಹಿಂದು-ಮುಸ್ಲಿಂ ಐಕ್ಯತೆ ಸಾರುವ ಇಂತಹ ಮತ್ತಷ್ಟು ಉದಾಹರಣೆಗಳು ಇಂದಿನ ಜನರಿಗೆ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here