ಸ್ಯಾಂಡಲ್‍ವುಡ್​​ನಲ್ಲಿ ಹಾಗೂ ಕಿರು ತೆರೆಯ ನಟ ನಟಿಯರ ವಿವಾಹಗಳ ಸಂಭ್ರಮ ಇತ್ತೀಚಿಗೆ ಎಲ್ಲೆಲ್ಲೂ ಸುದ್ದಿಯಾಗಿದೆ. ಈಗ ಅದೇ ಸಾಲಿನಲ್ಲಿ ತೆರೆಯ ಮೇಲೆ ಜೋಡಿಯಾಗಿ ಕಂಡ ಜೋಡಿಯೊಂದು ವಾಸ್ತವ ಜೀವನದಲ್ಲೂ ಕೂಡಾ ಜೋಡಿಯಾಗಲು ಹೊರಟಿದೆ. ಯಾರು ಆ ಜೋಡಿ ಎನ್ನುವುದಾದರೆ ಕನ್ನಡ ಚಿತ್ರರಂಗದಲ್ಲಿ, ಕಿರು ತೆರೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಹಾಸ್ಯ ನಟ, ನಿರೂಪಕ ಆದ ಹಿರಿಯ ನಟ ಸಿಹಿ-ಕಹಿ ಚಂದ್ರು ಅವರ ಮಗಳು ಹಿತಾ ಚಂದ್ರಶೇಖರ್ ‘ ಅವರು ಹಾಗೇ ಸುಮ್ಮನೇ’ ಖ್ಯಾತಿಯ ಕಿರಣ್ ಶ್ರೀನಿವಾಸ್ ಜೊತೆ ವಿವಾಹವೆಂಬ ಮಧುರ ಬಂಧನದಲ್ಲಿ ಜೊತೆಯಾಗಲು ಸಿದ್ಧವಾಗಿದ್ದಾರೆ.

ಈ ಯುವ ಜೋಡಿಯ ನಿಶ್ಚಿತಾರ್ಥ ಇದೇ ವರ್ಷ ಮೇ ತಿಂಗಳಲ್ಲಿ ನಡೆದಿತ್ತು. ವಿವಾಹವು ಇದೇ ಡಿಸೆಂಬರ್‌ನಲ್ಲಿ ನಡೆಯಲಿದೆ ಎನ್ನಲಾಗಿದೆ. ಡಿಸೆಂಬರ್ ನಲ್ಲಿ ಮದುವೆ ಎನ್ನಲಾಗಿದೆಯಾದರೂ, ಕುಟುಂಬದವರು ಇನ್ನೂ ಮದುವೆ ದಿನಾಂಕದ ಬಗ್ಗೆ ಬಹಿರಂಗಪಡಿಸಿಲ್ಲ. ಹಿತಾ ಹಾಗೂ ಕಿರಣ್ ಶ್ರೀ‌ನಿವಾಸ್ ಇಬ್ಬರೂ ಒಂಥರಾ ಬಣ್ಣಗಳು ಎಂಬ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಆ ಸಿನಿಮಾ ಮೂಲಕ ಆದ ಪರಿಚಯ, ಅವರಲ್ಲಿ ಸ್ನೇಹ ಮೂಡಲು ಕಾರಣವಾಗಿತ್ತು. ಹೀಗೆ ಸ್ನೇಹ ಪ್ರೀತಿಯಾದ ಮೇಲೆ ಎರಡೂ ಕುಟುಂಬದವರಿಗೆ ವಿಚಾರ ತಿಳಿಸಿ, ಒಪ್ಪಿಗೆ ಪಡೆದು, ಈಗ ಸಂತಸದಿಂದ ಮದುವೆಗೆ ಸಿದ್ಧವಾಗಿದ್ದಾರೆ.

ಕಿರಣ್ ಶ್ರೀ ನಿವಾಸ್ ‘ಹಾಗೇ ಸುಮ್ಮನೆ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಅದಾದ ನಂತರ ‘ಚಿರು’, ‘ಮುಗಿಲ ಮಲ್ಲಿಗೆಯೋ’, ‘ಕಾಂಚನಾ’ ಸೇರಿದಂತೆ ಸುಮಾರು ಚಿತ್ರಗಳಲ್ಲಿ ಅಭಿನಯಿಸಿದ್ದು,ಇನ್ನೂ ಹಿತಾ ಚಂದ್ರಶೇಖರ್ ಅವರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಡಾನ್ಸಿಂಗ್ ಸ್ಟಾರ್’ ಸೀಸನ್ 3 ರ ಬಹುಮಾನ ವಿಜೇತರಾಗಿದ್ದರು. ಅದಾದ ನಂತರ ಅವರು ‘ಕಾಲ್ ಕೆಜಿ ಪ್ರೀತಿ’ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಈಗ ಈ ಯುವ ಜೋಡಿ ತಮ್ಮ ಹೊಸ ಜೀವನಕ್ಕೆ ಜೊತೆಯಾಗಿ ಅಡಿ ಇಡಲಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here