ಓಲ್ಗಾ ಕರ್ಲಿಂಕೋ ಹಾಲಿವುಡ್ ನಟಿ‌. ಜೇಮ್ಸ್ ಬಾಂಡ್‌ ಖ್ಯಾತಿಯ ಈ ನಟಿ ಇದೀಗ ಕೊರೊನಾ ಬಗ್ಗೆ ಜನರಲ್ಲಿನ ಭೀತಿಯನ್ನು ಕಡಿಮೆ ಮಾಡುವ ಸಲುವಾಗಿ ತನ್ನದೇ ಅನುಭವವನ್ನು ತನ್ನ ಇನ್ಸ್ಟಾಗ್ರಾಂ ಖಾತೆಯ ಮೂಲಕ ವಿವರಿಸಿದ್ದಾರೆ. ಜಗತ್ತಿನಾದ್ಯಂತ ಜನರು ಕೊರೊನಾ ಭೀತಿಗೆ ಒಳಗಾಗಿದ್ದು, ಕೊರೊನಾ ಎಂಬುವ ಕಾಯಿಲೆ ಸಾಮಾನ್ಯವಾದುದು ಅಲ್ಲ‌. ಆದರೆ ಸರಿಯಾದ ಮಾರ್ಗ ಅನುಸರಿಸಿದರೆ ಅದರಿಂದ ಗುಣ ಮುಖ ಆಗಬಹುದು. ತನಗೆ ಕೊರೊನಾ ಬಂದು ತಾನು ಗುಣಮುಖಳಾಗಿದ್ದು, ಹದಿನಾಲ್ಕು ದಿನಗಳು ಪ್ರತ್ಯೇಕವಾಗಿ ಉಳಿದುಕೊಂಡಾಗಿನ ತನ್ನ ಅನುಭವ ಆಕೆ ಹಂಚಿಕೊಂಡಿದ್ದಾರೆ.

ಓಲ್ಗಾ ಕಳೆದ ಮಾರ್ಚ್ 15 ರಂದು ತಾನು ಕೊರೊನ ವೈರಸ್ ಸೋಂಕಿಗೆ ಒಳಗಾಗಿರುವುದನ್ನು ತಿಳಿಸಿದ್ದರು. ಅದಾದ ನಂತರ ವೈದ್ಯರ ಸಲಹೆಯ ಮೇಲೆ ಆಕೆ ಕ್ವಾರಂಟೇನ್ ನಲ್ಲಿ ಇದ್ದರು. ಮೊದಲನೇ ವಾರದಲ್ಲಿ ತಾನು ಬಹುತೇಕ ಹಾಸಿಗೆಯಲ್ಲಿ ತೀವ್ರ ಜ್ವರ ಹಾಗೂ ಹೆಚ್ಚು ತಲೆನೋವಿನಿಂದ ಮಲಗೇ ಇದ್ದೆ. ಎರಡನೇ ವಾರದಲ್ಲಿ ಜ್ವರ ವಾಸಿಯಾಯಿತು. ಆದರೆ ಕೆಮ್ಮು ಮತ್ತು ಸುಸ್ತು ಹೆಚ್ಚಿ ನಾನು ಬಳಲಬೇಕಾಯಿತು. ಎರಡನೇ ವಾರದ ಕೊನೆಗೆ ನಾನು ಆರೋಗ್ಯವಂತಳಾದೆ. ಈಗಲೂ ಬೆಳಗಿನ ಸಮಯ ಸ್ವಲ್ಪ ಕೆಮ್ಮು ಇರುತ್ತದೆ ಎಂದಿರುವ ಆಕೆ, ನಾನೀಗ ಸಂಪೂರ್ಣ ಗುಣಮುಖಳಾಗಿದ್ದೇನೆ ಎಂದು ವಿವರಿಸಿದ್ದಾರೆ.‌

ಈಗ ತನ್ನ ಮಗುವಿನೊಂದಿಗೆ ಸಂತೋಷದಿಂದ ಸಮಯ ಕಳೆಯುತ್ತಿರುವ ಆಕೆ ,ವೈದ್ಯರು ಹೇಳಿದ ಸಲಹೆ ಸೂಚನೆಗಳನ್ನು ಪಾಲಿಸಿ, ರೋಗ ‌ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಬರಲು ಸಾಧ್ಯ ಎಂದಿದ್ದಾರೆ. ಕೊರೊನಾ ಭೀತಿಯಲ್ಲಿರುವ ಅನೇಕರಿಗೆ ಈ ‌ನಟಿಯ ಮಾತುಗಳು ಸ್ವಲ್ಪ ಮಟ್ಟಿಗೆ ಧೈರ್ಯವನ್ನು ನೀಡುವಂತೆ ಇದೆ. ಓಲ್ಗಾ ಇದೀಗ ಸಂಪೂರ್ಣವಾಗಿ ಕೊರೊನಾ ರೋಗದಿಂದ ಮುಕ್ತರಾಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here