ಜಗತ್ತಿನ ದಿಗ್ಗಜ ಹಾಗೂ ಜನಪ್ರಿಯ ನಟರಾಗಿರುವ ಜೊತೆಗೆ ಕ್ಯಾಲಿಫೋರ್ನಿಯಾದ ಮಾಜಿ ಗವರ್ನರ್ ಕೂಡಾ ಆಗಿದ್ದ ಹಾಲಿವುಡ್ ನಟ ಅರ್ನಾಲ್ಡ್ ಸ್ವಾಜೆನೆಗ್ಗರ್ ಮೇಲೆ ದುಷ್ಕರ್ಮಿಯೊಬ್ಬನು ದಾಳಿ ನಡೆಸಿದ ಘಟನೆ ದಕ್ಷಿಣ ಆಫ್ರಿಕಾ ರಾಜಧಾನಿಯಾದ ಜೋಹಾನ್ಸ್‍ಬರ್ಗ್‍ನಲ್ಲಿ ಘಟಿಸಿದೆ. ನಟನ ಮೇಲೆ ಧಾಳಿ ಮಾಡಿದ್ದ ಆ ದುಷ್ಕರ್ಮಿಯನ್ನು ಪೋಲಿಸರು ಈಗಾಗಲೇ ಬಂಧಿಸಿ ಜೈಲು ಕಂಬಿಗಳ ಹಿಂದೆ ಸೇರಿಸಿದ್ದಾರೆ. ಆರ್ನಾಲ್ಡ್ ಅವರು ಜೋಹಾನ್ಸ್ ಬರ್ಗನಲ್ಲಿ ತಮ್ಮ ಅರ್ನಾಲ್ಡ್ ಕ್ಲಾಸಿಕ್ ಆಫ್ರಿಕಾ ಸ್ಪೋರ್ಟಿಂಗ್ ಕ್ರೀಡಾಕೂಟದ ಸಂದರ್ಭದಲ್ಲಿ ಈ ಘಟನೆ ನಡೆಸಿದೆ. ನೆರೆದಿದ್ದ ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದಾಗ ದುಷ್ಕರ್ಮಿಯೊಬ್ಬನು ಇಂತಹ ದುಷ್ಕಾರ್ಯಕ್ಕೆ ಮುಂದಾಗಿದ್ದಾನೆ.

ದುಷ್ಕರ್ಮಿಯೊಬ್ಬನು ಮಾತನಾಡುವುದರ ಕಡೆ ಗಮನ ಹರಿಸಿದ್ದ ಆರ್ನಾಲ್ಡ್ ಅವರ ಹಿಂದಿನಿಂದ ಅವರ ಮೇಲೆ ಧಾಳಿ ಮಾಡಿ, ಅರ್ನಾಲ್ಡ್ ಅವರನ್ನು ಜಾಡಿಸಿ ಒದ್ದಿದ್ದಾನೆ. ಘಟನೆ ನಡೆದ ಕೂಡಲೇ ನೆರೆದಿದ್ದ ಅಭಿಮಾನಿಗಳು ಅವನನ್ನು ಹಿಡಿದು ಗೂಸಾ ಕೊಟ್ಟಿದ್ದಾರೆ. ಅದಾದ ನಂತರ ಅವರು ಅವನನ್ನು ಪೋಲಿಸರ ವಶಕ್ಕೆ ನೀಡಿದ್ದಾರೆ. ಆರ್ನಾಲ್ಡ್ ಅವರ ಮೇಲೆ ಧಾಳಿ ನಡೆದ ಘಟನೆಯ ದೃಶ್ಯಾವಳಿಗಳ ವಿಡಿಯೋ ಫುಟೇಜ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅರ್ನಾಲ್ಡ್ ಮೇಲೆ ನಡೆದಿರುವ ಧಾಳಿಯನ್ನು ಅನೇಕರು ಖಂಡಿಸಿದ್ದಾರೆ.

ತಮ್ಮ ಸಿನಿಮಾಗಳಲ್ಲಿ ತಮ್ಮ ದೇಹದಾರ್ಢ್ಯಕ್ಕೆ ಹೆಸರಾದ ಆರ್ನಾಲ್ಡ್ ಅವರ ‌ಟರ್ಮಿನೇಟರ್ ಸಿನಿಮಾ ಅವರಿಗೆ ದೊಡ್ಡ ಹೆಸರುನ್ನು ತಂದು ಕೊಟ್ಟಿತ್ತು. ಅಲ್ಲದೆ ಅವರು ಆರು ಬಾರಿ ಮಿಸ್ಟರ್ ವರ್ಲ್ಡ್ ಪ್ರಶಸ್ತಿ ಪುರಸ್ಕಾರವನ್ನು ಪಡೆದಿದ್ದಾರೆ. 71 ವರ್ಷ ವಯಸ್ಸಿನ ಈ ನಟ ಯಾವುದೇ ವಿವಾದಗಳಿಗೆ ಗುರಿಯಾದವರಲ್ಲ. ಅಲ್ಲದೆ ತನ್ನನ್ನು ತಾನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಕ್ರೀಡೆಗಳಿಗೆ ಉತ್ತೇಜನ ನೀಡಲು ಲಕ್ಷಾಂತರ ಡಾಲರ್ ಹಣವನ್ನು ವೆಚ್ಚ ಮಾಡುತ್ತಿದ್ದಾರೆ. ಇಂತಹ ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಿರುವ ಅವರ ಮೇಲಿನ ಧಾಳಿಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here