ಸಾಮನ್ಯವಾಗಿ ಮನೆಯಲ್ಲಿರುವವರಿಗೆ ರುಚಿರುಚಿಯಾದ ತಿಂಡಿಗಳನ್ನು ಮಾಡಿಕೊಂಡು ತಿನ್ನುವ ಅಭ್ಯಾಸವಿರುತ್ತದೆ. ಆದರೆ ಯಾವಾಗಲೂ ಒಂದೇ ತರಹದ ರುಚಿಯ  ತಿಂಡಿಗಳನ್ನು ತಿಂದು ಅಭ್ಯಾಸವಾಗಿರುವ ಕೆಲವರಿಗೆ ಹೊಸ ಹೊಸ ತಿಂಡಿಗಳನ್ನು ಮಾಡುವುದು ಹೇಗೆ ಎಂಬ ಆಲೋಚನೆ ಇರುತ್ತದೆ. ಸಾಮಾಜಿಕ ಜಾಲತಾಣದ ಫೇಸ್ಬುಕ್ ನಲ್ಲಿ ಪ್ರತಿದಿನ ಹಲವಾರು ಗೃಹಿಣಿಯರು ತಮಗೆ ಬರುವ ಹೊಸ ತಿಂಡಿಗಳನ್ನು ಹೇಗೆ ಮಾಡಬೇಕು ಎಂದು ಜನರಿಗೆ ತಿಳಿಸುತ್ತಿರುತ್ತಾರೆ. ಅಡುಗೆ ಮನೆ ಎಂಬ ಗುಂಪು ಮಾಡಿಕೊಂಡು ಪ್ರತಿದಿನ ಹೊಸ ಬಗೆಯ ರುಚಿಗಳನ್ನು ಮನೆಯಲ್ಲಿ ಮಾಡಿ ಸವಿಯಬಹುದಾಗಿದೆ. ಈ ಬಾರಿಯ ಸ್ಪೆಷಲ್ ಅವರೇಕಾಳು ರೊಟ್ಟಿ..

ಅವರೆಕಾಳು ರೊಟ್ಟಿ.

ಎರಡು ಕಪ್ ಅಕ್ಕಿ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ ಇದಕ್ಕೆ ಒಂದು ಕಪ್ ಬೇಯಿಸಿದ ಅವರೆಕಾಳು, ಒಂದು ಈರುಳ್ಳಿ ಹೆಚ್ಚಿದ್ದು, ಜೀರಿಗೆ ಒಂದು ಚಮಚ, ಉಪ್ಪು ರುಚಿಗೆ, ಹೆಚ್ಚಿದ ಕೊತ್ತಂಬರಿ ಮತ್ತು ಹಸಿ ಮೆಣಸಿನಕಾಯಿ, ತೆಂಗಿನಕಾಯಿ ಚೂರು ಮತ್ತು ನೀರು ಹಾಕಿ ಕಲಸಿ ತವಾದಲ್ಲಿ ತಟ್ಟಿ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿದರೆ ರುಚಿಯಾದ ಅವರೆಕಾಳು ರೊಟ್ಟಿ ಸವಿಯಲು ಸಿದ್ದ, ಇದನ್ನು ಚಟ್ನಿ, ಚಟ್ನಿಪುಡಿ ಅಥವಾ ಟೊಮೊಟೊ ಗೊಜ್ಜಿನ ಜೊತೆ ಸೇವಿಸಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here