ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಮಾಣವು ಹೆಚ್ಚಾಗುತ್ತಿಲೇ ಇದೆ. ಪ್ರತಿದಿನ ಕೂಡಾ ಅಂಕಿ ಅಂಶಗಳನ್ನು ಗಮನಿಸಿದಾಗ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯು ದಾಖಲಾಗುತ್ತಿದೆಯೇ ಹೊರತು ಇಳಿಕೆಯಲ್ಲ. ಸರ್ಕಾರವು ಕ್ರಮಗಳನ್ನು ಕೈಗೊಳ್ಳುತ್ತಿರುವುದರ ಹೊರತಾಗಿ ಕೊರೊನಾ ಆ ನಿಯಂತ್ರಣಕ್ಕೆ ಮೀರಿ ಹರಡುತ್ತಿರುವುದು ಕೂಡಾ ವಾಸ್ತವವಾಗಿದೆ‌. ಕೊರೊನಾ ಎಲ್ಲಾ ವರ್ಗದ ಜನರಿಗೂ ಸೋಕಿ ಮತ್ತಷ್ಟು ಆತಂಕವನ್ನು ಸೃಷ್ಟಿ ಮಾಡುತ್ತಲೇ ಇದೆ. ಇನ್ನು ಈ ನಡುವೆ ದೇಶದ ಗೃಹ ಸಚಿವ ಅಮಿತ್ ಶಾ ಅವರಿಗೂ ಕೊರೊನಾ ಪಾಸಿಟಿವ್ ಆಗಿದ್ದು, ಈ ವಿಷಯವನ್ನು ಅವರೇ ತಮ್ಮ ಟ್ವಿಟರ್ ನಲ್ಲಿ ವಿವರಿಸಿದ್ದಾರೆ. ‌

ಕರೋನದ ಆರಂಭಿಕ ರೋಗಲಕ್ಷಣಗಳನ್ನು ಕಂಡ ನಂತರ, ನಾನು ಪರೀಕ್ಷೆಯನ್ನು ಮಾಡಿಸಿದ್ದೇ‌ನೆ ಮತ್ತು ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಆದರೆ ಪ್ರಸ್ತುತ ನನ್ನ ಆರೋಗ್ಯ ಚೆನ್ನಾಗಿದೆ, ಆದರೆ ವೈದ್ಯರ ಸಲಹೆಯ ಮೇರೆಗೆ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ನನ್ನೊಂದಿಗೆ ಸಂಪರ್ಕಕ್ಕೆ ಬಂದ ನಿಮ್ಮೆಲ್ಲರಲ್ಲೂ ದಯವಿಟ್ಟು ವಿನಂತಿಸಿಕೊಳ್ಳುತ್ತೇನೆ, ದಯವಿಟ್ಟು ನಿಮ್ಮನ್ನು ನೀವು ಇತರರಿಂದ ಪ್ರತ್ಯೇಕಿಸಿಕೊಳ್ಳಿ ಹಾಗೂ ತಪ್ಪದೇ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಅಮಿತ್ ಶಾ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here