City Big News Desk.
ಮಳೆಗಾಲ ಬಂತೆಂದರೆ ಸಾಕರು ಎಲ್ಲರಲ್ಲೂ ಕಾಡುವಂತಹ ಭಯ ಎಂದರೆ ಅದು ನೆಗಡಿ, ಕೆಮ್ಮು ಜ್ವರದ ಭಯ. ಈ ನೆಗಡಿ ಕೆಮ್ಮು ಜ್ವರದಿಂದ ಸಾಮಾನ್ಯವಾಗಿ ಎಲ್ಲರಲ್ಲಿ ಕಾಡುವಂತ ಸಂಗತಿ ಎಂದರೆ ಅದು ಕಫ ಈ ಕಫವನ್ನು ನಾವು ಮನೆಯಲ್ಲಿ ಸಿಗುವಂತಹ ಕೆಲವು ವಸ್ತುಗಳನ್ನು ಉಪಯೋಗಿಸಿಕೊಂಡು ನಿವಾರಣೆ ಮಾಡಿಕೊಳ್ಳಬಹುದು.
ಹೌದು, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಮನೆಯಲ್ಲಿ ಸಿಗುವಂತಹ ಕೆಲವು ಪದಾರ್ಥಗಳನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಗಂಟಲಿನಲ್ಲಿ ಕಫ ಹೆಚ್ಚಿದ್ದರೆ ನಿಂಬೆ ಹಣ್ಣಿನ ತುಂಡಿಗೆ ಸ್ವಲ್ಪ ಸೈಂಧವ ಉಪ್ಪು ಮತ್ತು ಕರಿಮೆಣಸಿನ ಪುಡಿ ಉದುರಿಸಿ ಆ ರಸವನ್ನು ಸೇವಿಸಿದರೆ ಕಫ ಶಮನವಾಗುತ್ತದೆ. ಹಸಿಶುಂಠಿ ಕಷಾಯ ಮಾಡಿ ಅದಕ್ಕೆ ಜೇನುತುಪ್ಪ ಕಲಸಿ ದಿನಕ್ಕೆ 2-3ಬಾರಿ ಕುಡಿದರೆ ಕಫ ಬೇಗ ಕರಗುತ್ತದೆ.
ಚಕ್ಕೆ ಮತ್ತು ಹಸಿ ಶುಂಠಿಯನ್ನು ನೀರಲ್ಲಿ ಸೇರಿಸಿ ಮಾಡಿದ ಕಷಾಯವನ್ನು ದಿನಕ್ಕೆ3 ಬಾರಿ ಸೇವಿಸಿದರೆ ಗಂಟಲ ಕಫ ನಿವಾರಣೆಯಾಗುತ್ತದೆ. ಕರಿಮೆಣಸಿನ ಪುಡಿಗೆ ಜೇನುತುಪ್ಪ ಸೇರಿಸಿ ದಿನಕ್ಕೆ 4 ರಿಂದ 5 ಬಾರಿ ಸ್ವಲ್ಪ ಸ್ವಲ್ಪ ಸೇವಿಸಿದರೆ ಗಂಟಲ ಕಫ ಕರಗುತ್ತದೆ.
ಈರುಳ್ಳಿಯನ್ನು ಕತ್ತರಿಸಿ ಅದಕ್ಕೆ ಸಕ್ಕರೆ ಬೆರೆಸಿ 30 ನಿಮಿಷ ಬಿಡಿ ನಂತರ ಅದರಿಂದ ಬಂದ ರಸವನ್ನು 2 ರಿಂದ 3 ಬಾರಿ ಸೇವಿಸಿದರೆ ಪ್ರಯೋಜನವಿದೆ. ಎರಡು ಪಲಾವ್ ಎಲೆಯನ್ನು ನೀರಲ್ಲಿ ಚೆನ್ನಾಗಿ ಕುದಿಸಿ. ಆ ನೀರನ್ನು ಪದೇ ಪದೆ ಬಿಸಿ ಬಿಸಿಯಾಗಿ ಕುಡಿದರೆ ಕಫ ಕರಗುತ್ತದೆ. ಹಸಿ ಕ್ಯಾರೆಟ್ಗೆ ಸ್ವಲ್ಪ ನೀರು ಸೇರಿಸಿ ಜ್ಯೂಸ್ ಮಾಡಿ ಅದಕ್ಕೆ ಜೇನುತುಪ್ಪ ಸೇರಿಸಿ ಆಗಾಗ ಕುಡಿದರೆ ಗಂಟಲಿನ ಕಫ ನಿವಾರಣೆಯಾಗುತ್ತದೆ.
City Big News.
Disclaimer: This Story is auto-aggregated by a Syndicated Feed and has not been Created or Edited By City Big News Staff.