ಹೊಸಕೋಟೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಅವರ ಪತ್ನಿ ಪದ್ಮಾವತಿ ಸುರೇಶ್  ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಯ ವೇಳೆಯಲ್ಲಿ ಅವರು ತಮ್ಮ ಆಸ್ತಿ ವಿವರಗಳನ್ನು ಘೋಷಣೆ ಮಾಡಿದ್ದು, ಅಫಿಡೆವಿಟ್​ ನ ಪ್ರಕಾರ ಅವರ ಆಸ್ತಿ ಒಟ್ಟು ಮೌಲ್ಯ 424 ಕೋಟಿ ರೂ. ಆಗಿದೆ. 424 ಕೋಟಿ 56 ಲಕ್ಷ 58 ಸಾವಿರ 436.34 ರೂ. ಆಸ್ತಿ ಅವರಿಗಿದ್ದು, 16 ಕೋಟಿ 63 ಲಕ್ಷ 68 ಸಾವಿರ 160 ರೂ 34 ಪೈಸೆ ಚರಾಸ್ತಿಯನ್ನು ಹೊಂದಿದ್ದು, 407 ಕೋಟಿ 92 ಸಾವಿರದ 90 ಸಾವಿರದ 276 ರೂ. ಸ್ಥಿರಾಸ್ತಿಯನ್ನು ಅವರು ಹೊಂದಿದ್ದಾರೆ.

ಭೈರತಿ ಸುರೇಶ್ ಹಾಗೂ ಅವರ ಪತ್ನಿ ಪದ್ಮಾವತಿ ಅವರು ತಮಗೆ 47 ಕೋಟಿ 77 ಲಕ್ಷದ 62 ಸಾವಿರದ 936 ರೂಪಾಯಿ 48 ಪೈಸೆ ರೂ.ಗಳಷ್ಟು ಸಾಲ ಇದೆ ಎಂದು ದಾಖಲೆಯಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಆಭರಣಗಳ ವಿಷಯದಲ್ಲಿ ಪದ್ಮಾವತಿ ಅವರು ಒಂದೂವರೆ ಕೆಜಿ ಚಿನ್ನ ಮತ್ತು 10 ಕೆಜಿ ಬೆಳ್ಳಿ ಆಭರಣ ಹೊಂದಿದ್ದು, ಸುರೇಶ್ ಅವರು ತಮ್ಮ ಬಳಿ 2 ಕೆಜಿ 12 ಗ್ರಾಂ ಚಿನ್ನ, 50 ಕೆಜಿ ಬೆಳ್ಳಿ ಆಭರಣ ಹೊಂದಿದ್ದಾರೆ. ಇದರ ಜೊತೆಗೆ ಪದ್ಮಾವತಿ ಅವರ ಹೆಸರಿನಲ್ಲಿ ಪ್ರ್ಯಾಡೋ, ಬೆಂಜ್ಹ್, ಆಡಿ, ಹುಂಡೈ ಐ20, JCB ಇದ್ದು, , ಸುರೇಶ್ ಅವರ ಹೆಸರಲ್ಲಿ 3 ಇನ್ನೋವಾ ಕಾರು, ಬೆಂಜ್ಹ್, ಮಹೀಂದ್ರಾ ಜೀಪ್ ಇದೆ.

ಇದೇ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿರುವ ಶರತ್ ಬಚ್ಚೇಗೌಡ ಅವರು 138 ಕೋಟಿ ರೂ. ಮೌಲ್ಯ ಆಸ್ತಿ ಹೊಂದಿರುವುದಾಗಿ, ಅದರಲ್ಲಿ 34.50 ಕೋಟಿ ರೂ. ಮೌಲ್ಯದ ಸ್ವಯಾರ್ಜಿತ ಆಸ್ತಿ ಹಾಗೂ 63 ಕೋಟಿ ರು. ಮೌಲ್ಯದ ಪಿತ್ರಾರ್ಜಿತ ಆಸ್ತಿ ಹೊಂದಿರುವುದಾಗಿ ತಮ್ಮ ಆಸ್ತಿ ಮೌಲ್ಯವನ್ನು ಘೋಷಿಸಿದ್ದಾರೆ.‌ ಇವರನ್ನು ಬಿಟ್ಟರೆ ರಾಜ್ಯದ ಶ್ರೀಮಂತ ರಾಜಕಾರಣಿಯೇ ಆಗಿರುವ ಎಂಟಿಬಿ ನಾಗರಾಜ್ ಅವರು ತಮ್ಮ ಆಸ್ತಿ ಮೌಲ್ಯ 1195 ಕೋಟಿ ಎಂದು ಅಫಿಡೆವಿಟ್ ಸಲ್ಲಿಸಿದ್ದಾರೆ. ಒಟ್ಟಾರೆ ಹೊಸಕೋಟೆ ಕ್ಷೇತ್ರದಲ್ಲಿ ಎಲ್ಲಾ ಕೋಟ್ಯಾಧಿಪತಿಗಳೇ ಚುನಾವಣಾ ಕಣದಲ್ಲಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here