ಹೌದೋ ಹುಲಿಯಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕೂಗಿ ಸಾಕಷ್ಟು ಟ್ರೋಲ್ ಆಗಿದ್ದ ಪೀರಪ್ಪ ಕಟ್ಟೀಮನಿ ಇಂದು ಸಿದ್ದರಾಮಯ್ಯ ರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾನ್ನೆ ಈ ಕುರಿತು ಸ್ವತಃ ಸಿದ್ದರಾಮಯ್ಯ ನವರೆ ತಮ್ಮ ಟ್ವಿಟ್ಟರ್ ಪುಟದಲ್ಲಿ ಭೇಟಿಯ ಕುರಿತು ಪೋಸ್ಟ್ ಮಾಡಿದ್ದಾರೆ .
ಉಪಚುನಾವಣೆ ಪ್ರಚಾರದ ವೇಳೆ ಫುಲ್ ವೈರಲ್ ಆದ ಡೈಲಾಗ್ ‘ಹೌದು ಹುಲಿಯಾ’. ಕಾಗವಾಡದಲ್ಲಿ ಕಾಂಗ್ರೆಸ್ ಆಭ್ಯರ್ಥಿ ಪರ ಸಿದ್ದರಾಮಯ್ಯನವರು ಪ್ರಚಾರದ ಭಾಷಣ ಮಾಡುವ ವೇಳೆ ಇಂದಿರಾಗಾಂಧಿ ದೇಶಕ್ಕೋಸ್ಕರ ಪ್ರಾಣ ತೆತ್ತರು ಅಂದಾಗ ವೇದಿಕೆ ಮುಂದೆ ಕುಳಿತಿದ್ದ ಪಕೀರಪ್ಪ ಕಟ್ಟಿಮನಿ ಹೌದು ಹುಲಿಯಾ ಅಂತಾ ಜೋರಾಗಿ ಕೂಗಿ ಹೇಳಿದ್ದರು.

ಕುಡಿದ ಮತ್ತಿನಲ್ಲಿ ಹೌದು ಹುಲಿಯಾ ಎಂದು ಹೇಳಿದ್ದು ಮಾತು ರಾಜ್ಯಾದ್ಯಂತ ಫೇಮಸ್ ಆಗಿ ಸೋಶಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಆಗಿತ್ತು. ಟಿಕ್ ಟಾಕ್ ಗಳಲ್ಲಿ ಎಲ್ಲಾ ಫುಲ್ ಬಳಕೆ ಮಾಡಿಕೊಂಡು ಡಬ್ ಸ್ಮ್ಯಾಶ್ ಮಾಡಿದ್ರು. ಇದಾದ ಬಳಿಕ ಡೈಲಾಗ್ ಹೇಳಿದ ಪಕೀರಪ್ಪ ಕಟ್ಟಿಮನಿ ಕೂಡ ಫುಲ್ ಫೇಮಸ್ ಆದರು. ಇದರ ಬೆನ್ನಲ್ಲೆ ಇಂದು ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದಾರೆ.

ಸಿದ್ದರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ ಬಳಿಕ ಪಕೀರಪ್ಪ ಕಟ್ಟಿಮನಿ ಭೇಟಿಯಾಗಿದ್ದಾರೆ. ಈ ವೇಳೆ ಪಕೀರಪ್ಪ ಕಟ್ಟಿಮನಿ ಸಿದ್ದರಾಮಯ್ಯನವರ ಕಾಲಿಗೆ ಮುಗಿದು ನಮಸ್ಕರಿಸಿ ನೀವೆ ನಮ್ಮ ಒಡೆಯಾ ನೀವು ಕೊಟ್ಟ ಒಂದು ರೂಪಾಯಿ ಕೆ.ಜಿ ಅಕ್ಕಿ ತಿಂದು ಇವತ್ತು ಉದ್ಧಾರ ಆಗಿದ್ದೀವಿ ಒಡೆಯ ಅಂತಾ ಸಿದ್ದರಾಮಯ್ಯರಿಗೆ ನಮಸ್ಕರಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here