ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆಯಾಗಿದೆ. ಇದೆಂಥ‌ ಸುದ್ದಿ ರಾಜ್ಯದ ಹಾಗೂ ದೇಶದ ಅನೇಕ ಆಸ್ಪತ್ರೆಗಳಲ್ಲಿ ಹೆರಿಗೆ ನಡೆಯುತ್ತೆ, ಅದರಲ್ಲೇನು ವಿಶೇಷ ಎಂದು ಸುಮ್ಮನಾಗಬೇಡಿ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದ ಹೆರಿಗೆಗೆ ವಿಶೇಷತೆ ಒಂದಿದೆ. ಏನು ಆ ವಿಶೇಷ ಎನ್ನುವಿರಾ? ಇಲ್ಲ ಮಹಿಳೆಯೊಬ್ಬರು ಅವಳಿ ಅಥವಾ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿಲ್ಲ. ಬದಲಾಗಿ ಒಂದೇ‌ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹೌದು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ ಮಹಿಳೆ. ಬನ್ನಿ ಆ ಮಹಿಳೆ ಯಾರು? ಎಂಬುದನ್ನು ಕೂಡಾ ತಿಳಿಯೋಣ

ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಮಹಾಬುಬಿ ಎನ್ನುವ ಮಹಿಳೆಯೇ ಏಕಕಾಲದಲ್ಲಿ ಮೂರು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗುವಿಗೆ ಜನ್ಮ‌ ನೀಡಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೆರಿಗೆಗಾಗಿ ಆಗಮಿಸಿದ್ದ ಆಕೆ ಇಂದು ಮುಂಜಾನೆ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮಹಾಬುಬಿ ಅವರಿಗೆ ಇದು ಎರಡನೆಯ ಹೆರಿಗೆಯಾಗಿದ್ದು, ಈಗಾಗಲೇ ನಿಸಾರ ಅಕ್ಕಿ ಮತ್ತು ಮಹಾಬುಬಿ ದಂಪತಿಗೆ ಒಬ್ಬ ಗಂಡು ಮಗನಿದ್ದಾನೆ. ಎರಡನೇ ಹೆರಿಗೆಯಲ್ಲಿ ಮೂರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗುವಿನ ತಾಯಿಯಾಗಿದ್ದಾರೆ ಮಹಾಬುಬಿ.

ಹುಟ್ಟಿರುವ ನಾಲ್ಕು ಮಕ್ಕಳು ಕೂಡಾ ಆರೋಗ್ಯವಾಗಿದೆ ಎನ್ನಲಾಗಿದೆ. ಅಲ್ಲದೆ ಮೂರು ಮಕ್ಕಳು 2 ಕೆಜಿ ಇದ್ದು, ಒಂದು ಮಗುವಿನ ತೂಕ ಮಾತ್ರ ಕಡಿಮೆ ಇದೆ ಎನ್ನಲಾಗಿದೆ. ನಾಲ್ಕು ಮಕ್ಕಳನ್ನು ಕೂಡಾ ಎನ್.ಐ.ಸಿ.ಯು ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಮಹಾಬುಬಿ ನಾಲ್ಕು ಮಕ್ಕಳಿಗೆ ಜನ್ಮ ನೀಡುವ ಮೂಲಕ ನಿಜಕ್ಕೂ‌ ಮಹಾ ತಾಯಿ ಎನಿಸಿಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here