ಹುಚ್ಚ ವೆಂಕಟ್ ಅವರ ಹುಚ್ಚಾಟಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ‌. ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹುಚ್ಚ ವೆಂಕಟ್ ಅವರ ವಿಡಿಯೋಗಳ ಶೇರ್ ಆಗುತ್ತಿದ್ದು ವ್ಯಾಪಕ ಟೀಕೆಗಳಿಗೆ ಗುರಿಯಾಗುತ್ತಿದೆ. ಕೆಲವು ದಿನಗಳ ಹಿಂದೆ ಚೆನ್ನೈನ ರಸ್ತೆಗಳಲ್ಲಿ ಕೊಳಕು ವಸ್ತ್ರಗಳನ್ನು ಧರಿಸಿ ಕಂಡು ಬಂದ ಹುಚ್ಚ ವೆಂಕಟ್ ವಿಡಿಯೋ ವೈರಲ್ ಆದ ಮೇಲೆ ಒಂದೊಂದೇ ಹೊಸ ವಿಡಿಯೋಗಳು ಬರ ತೊಡಗಿದ್ದವು. ರಸ್ತೆಯಲ್ಲಿ ಜನರ ಜೊತೆ ಜಗಳಕ್ಕೆ ನಿಂತಿದ್ದು, ಕಾರ್ ಗಾಜೊಂದನ್ನು ಒಡೆದು ಜನರಿಂದ ಏಟುಗಳನ್ನು ತಿಂದಿದ್ದು, ಎಲ್ಲೆಡೆ ಸುದ್ದಿಯಾಗಿತ್ತು. ಇವೆಲ್ಲಾ ಮಾಸುವ ಮುನ್ನವೇ ಈಗ ಹುಚ್ಚ ವೆಂಕಟ್ ನ ಮತ್ತೊಂದು ಹುಚ್ಚಾಟದ ವಿಡಿಯೋ ವೈರಲ್ ಆಗಿದೆ.

ಇಂದು ಬೆಳ್ಳಂಬೆಳಿಗ್ಗೆ ನಡುರಸ್ತೆಯಲ್ಲಿ ಹುಚ್ಚ ವೆಂಕಟ್ ರಂಪಾಟ ಮಾಡಿರುವ ವಿಡಿಯೋ ಇದೀಗ ಸುದ್ದಿ ಆಗಿದೆ‌. ಹುಚ್ಚ ವೆಂಕಟ್ ಬೆಂಗಳೂರು-ಹಿಂದುಪುರ ಹೆದ್ದಾರಿಯ ರಾಜಾನುಕುಂಟೆ ಸಮೀಪದ ಹರದೇಶನಹಳ್ಳಿ ಟೋಲ್ ಬಳಿ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ಪೀಡಿಸಿದ್ದಾರೆ. ಬಸ್ ಹತ್ತಲು ಮುಂದಾದ ಯುವತಿಯನ್ನು ತಡೆದು ಮದುವೆ ಆಗು ಎಂದು ಒತ್ತಾಯ ಮಾಡಿದ್ದಾರೆ. ಬಳಿಕ ಯುವತಿ ನಿರಾಕರಿಸಿದ್ದಕ್ಕೆ ತನ್ನ ಕಾರಿನ ಗಾಜುಗಳನ್ನು ಪುಡಿ ಮಾಡಿ ಹುಚ್ಚಾಟವನ್ನು ಮೆರೆದಿದ್ದಾರೆ.

ಹುಚ್ಚ ವೆಂಕಟ್ ಅವರ ಈ ಹುಚ್ಚಾಟಗಳು ದಿನೇ ದಿನೇ ಮುಂದುವರೆಯುತ್ತಲೇ ಇದ್ದು ಆಗಾಗ ಸುದ್ದಿಯಾಗುತ್ತಲೇ ಇದೆ. ಹೆಣ್ಣು ಮಕ್ಕಳಿಗೆ ಗೌರವ ನೀಡಬೇಕು, ಎಂದೆಲ್ಲಾ ಕೂಗಾಡುತ್ತಿದ್ದ ಹುಚ್ಚ ವೆಂಕಟ್ ಈಗ ಸ್ವತಃ ರಸ್ತೆಯಲ್ಲಿ ಯುವತಿಯೊಬ್ಬಳ ಜೊತೆ ನಡೆಸಿರುವ ಅನುಚಿತ ವರ್ತನೆ ನೋಡಿದರೆ ಆತನ ಹುಚ್ಚಾಟಕ್ಕೆ ಎಲ್ಲೆ ಇಲ್ಲದಂತಾಗಿದೆ ಎನಿಸಿದೆ. ವಿಡಿಯೋ ಇಲ್ಲಿದೆ ನೋಡಿ…… 

ಹುಚ್ಚ ವೆಂಕಟ್ ನಿಂದ ಮತ್ತೊಮ್ಮೆ ಹುಚ್ಚಾಟ .ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ಅರದೇಶಹಳ್ಳಿ ಟೋಲ್ ಹತ್ತಿರ ಹುಚ್ಚ ವೆಂಕಟ್ ನಿಂದ ತನ್ನ ಕಾರಿನ ಗಾಜುಗಳನ್ನು ತಾನೇ ಒಡೆದು ಜನರಲ್ಲಿ ಹಣ ಸಹಾಯ ಕೇಳಿ ಪಡೆದ ಹುಚ್ಚ ವೆಂಕಟ್ .

Suddi Mane यांनी वर पोस्ट केले गुरुवार, ३ ऑक्टोबर, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here