ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿನಯದ, ಚಂದ್ರು ಅವರ ನಿರ್ದೇಶನದ ಈಗಾಗಲೇ ಬಿಡುಗಡೆಯಾಗಿ ಜನ ಮೆಚ್ಚುಗೆ ಪಡೆದು ಮುನ್ನುಗುತ್ತಿರುವ ಸಿನಿಮಾ ಐ ಲವ್ ಯೂ. ದಿನವೂ ಈ ಸಿನಿಮಾದ ಒಂದಲ್ಲ ಒಂದು ಸುದ್ದಿ ಇದ್ದೇ ಇರುತ್ತದೆ. ಇನ್ನು ಈ ಚಿತ್ರದ ಬಗ್ಗೆ ಸಿನಿಮಾ ನೋಡುವುದಕ್ಕಿಂತ ಮೊದಲು ಹುಚ್ಚ ವೆಂಕಟ್ ಅವರು ಅಸಮಾಧಾನ ವ್ಯಕ್ತಪಡಿಸುತ್ತಾ, ನಿರ್ದೇಶಕ ಚಂದ್ರ ಅವರ ಬಗ್ಗೆ ಕೋಪದಿಂದ ಮಾತನಾಡುತ್ತಾ, ಸ್ವಲ್ಪ ಕೆಟ್ಟದಾಗಿಯೇ ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಹುಚ್ಚ ವೆಂಕಟ್ ಅವರು ಆಗಾಗ ಇಂತಹ ವಿಷಯಗಳಿಂದಾಗಿಯೇ ಸುದ್ದಿಯಾಗುತ್ತಾರೆ.

ಆದರೆ ಇಂದು ಹುಚ್ಚ ವೆಂಕಟ್ ಅವರು, ಅವರ ತಂದೆಯ ಜೊತೆಗೆ ಐ ಲವ್ ಯೂ ಸಿನಿಮಾವನ್ನು ನೋಡಿದ್ದಾರೆ. ಸಿನಿಮಾ ನೋಡಿದ ಮೇಲೆ ಈ ಹಿಂದೆ ಸಿನಿಮಾ ನಿರ್ದೇಶಕರ‌ ವಿರುದ್ಧ ಕೋಪ, ಅಸಮಾಧಾನ ವ್ಯಕ್ತಪಡಿಸಿದ್ದ ಅವರೇ ತಮ್ಮ ಆಲೋಚನೆಯನ್ನು ಬದಲಾಯಿಸಿದ್ದಾರೆ. ಸಿನಿಮಾ ನೋಡಿ ಬಂದ ಹುಚ್ಚ ವೆಂಕಟ್ ಅವರು ಮಾದ್ಯಮಗಳ ಮುಂದೆ ನಾನು ಸಿನಿಮಾ ನೋಡದೆ ನಿರ್ದೇಶಕರ ಬಗ್ಗೆ ತಪ್ಪಾಗಿ ಮಾತನಾಡಿದ್ದೆ. ಅದಕ್ಕೆ ಕ್ಷಮೆಯಿರಲಿ, ಈ ಸಿನಿಮಾದಲ್ಲೊಂದು ಒಳ್ಳೆಯ ಸಂದೇಶವನ್ನು ನಿರ್ದೇಶಕರು ನೀಡಿದ್ದಾರೆಂದು‌‌ ಹೊಗಳಿಕೆ ನೀಡಿದ್ದಾರೆ.

ಮಾತು ಮುಂದುವರೆಸಿದ ಅವರು ಇನ್ನು ಮುಂದೆ ಯಾವುದೇ ಸಿನಿಮಾದ ಬಗ್ಗೆ , ಅದನ್ನು ನೋಡುವ ಮೊದಲೇ ಮಾತನಾಡುವುದಿಲ್ಲ ಎಂದಿರುವ ಅವರು, ನಿರ್ದೇಶಕ ಚಂದ್ರು ನನ್ನ ತಮ್ಮ ಇದ್ದ ಹಾಗೆ ನನ್ನ ಮಾತುಗಳಿಂದ ಅವರಿಗೇನಾದರೂ ನೋವಾಗಿದ್ದರೆ ಅವರ ಬಳಿ ನಾನು ಈಗಲೇ ಕ್ಷಮೆ ಕೇಳಿದ್ದೇನೆ ಎಂದು ಹೇಳಿದ್ದಾರೆ. ಅವರು ಇಂದು ತಮ್ಮ ತಂದೆಯ ಜೊತೆಯೇ ಸಿನಿಮಾ ನೋಡಿ, ಅನಂತರ ಸಿನಿಮಾ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಐ ಲವ್ ಯೂ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿ ನಾಡ ಜನತೆ ಮುಂದೆ ಕ್ಷಮೆ ಕೋರಿದ ಹುಚ್ಚ ವೆಂಕಟ್

ಕನ್ನಡವೇ ಸತ್ಯ ಕನ್ನಡವೇ ನಿತ್ಯ यांनी वर पोस्ट केले रविवार, २३ जून, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here