,ಹುಚ್ಚ ವೆಂಕಟ್ ಹುಚ್ಚಾಟ ಈಗ ಮಿತಿ‌ಮೀರಿದೆಯಾ ? ಹೌದು ಎನ್ನುತ್ತೀರ ಈ‌ ವೀಡಿಯೋ ನೋಡಿದ್ರೆ ಖಂಡಿತವಾಗಿ ಹೌದು ಅಂತೀರ.ದೊಡ್ಡ ದೊಡ್ಡದಾಗಿ ಸಮಾಜದ ಬಗ್ಗೆ ಉದ್ದುದ್ದ ಭಾಷಣ ಬಿಗಿದು ವೀಡಿಯೋ ಮಾಡುತ್ತಿದ್ದ ಹುಚ್ಚ ವೆಂಕಟ್ ಈಗ ಸಮಾಜದ ಕಣ್ಣಿನಲ್ಲಿ ಅಕ್ಷರಶಃ ಹುಚ್ಚನಂತೇ ವರ್ತನೆ ಮಾಡುತ್ತಿದ್ದಾನೆ. ಕಳೆದ ಎರಡು ದಿನಗಳಿಂದ ಕೆಂಗೇರಿ ಬಳಿಯ ಉಳ್ಳಾಳ ಬಳಿ‌ ಹುಚ್ಚ ವೆಂಕಟ್ ಹುಚ್ಚಾಟದ ವರ್ತನೆ ಸ್ಥಳೀಯರಿಗೆ ತಲೆ ನೋವು ತರಿಸಿದೆ. ಕಂಠಾ ಪೂರ್ತಿ ‌ಕುಡಿದು ಹುಚ್ಚಾ ವೆಂಕಟ್ ಸಿಕ್ಕ ಸಿಕ್ಕವರ ಬಳಿ‌ ಹಲ್ಲೆ ಮಾಡಿದ್ದಾನೆ.

ಹುಚ್ಚ ವೆಂಕಟ್ ನ ಹುಚ್ಚಾಟ ಕಂಡ ಸ್ಥಳೀಯರು ಹುಚ್ಚ ವೆಂಕಟ್ ನನ್ನು ಪೋಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.ಹುಚ್ಚಾ ವೆಂಕಟ್ ಈ ವರ್ತನೆಗೆ ಕಾರಣ ಏನೆಂದು ನಿಖರವಾಗಿ ತಿಳಿದಿಲ್ಲ ಆದರೆ ಸ್ಥಳೀಯರು ಹೇಳುವ ಪ್ರಕಾರ ಹುಚ್ಚಾ ವೆಂಕಟ್ ಕುಡಿದ ಮತ್ತಿನಲ್ಲಿ ಹೀಗೆ ಆಡುತ್ತಿದ್ದಾನೆ ಎಂದು ಹೇಳುತ್ತಿದ್ದಾರೆ
ಬೇಕರಿ ಬಳಿ ಬಂದ ಹುಚ್ಚ ವೆಂಕಟ್ ಬೇಕರಿ‌ ಹುಡುಗನ ಬಳಿ‌ ಹುಚ್ಚ ನಂತೇ ವರ್ತನೆ ಮಾಡಿದ್ದಾನೆ.ಬೇಕರಿ ಹುಡುಗನಿಗೆ ಟೀ ಎರಚಿದ ಹುಚ್ಚ ವೆಂಕಟ್ ಕಾಲಿನಿಂದ ಹುಡುಗನಿಗೆ ಒದ್ದಿದ್ದಾನೆ.

ಈತನ ‌ಹುಚ್ಚಾಟ ಮಿತಿ ಮೀರುತ್ತಿದ್ದಂತೇ ಸ್ಥಳಿಯರು ಪೋಲೀಸ್ ಗೆ ಫೋನ್ ಮಾಡಿದ್ದಾರೆ.ಕೂಡಲೇ ಸ್ಥಳಕ್ಕೆ ಧಾವಿಸಿದ ಜ್ಞಾನ ಭಾರತಿ ಪೋಲೀಸ್ ಠಾಣೆಯ ಪೋಲಿಸರು ಹುಚ್ಚ ವೆಂಕಟ್ ನನ್ನು‌ ಠಾಣೆಗೆ ಕರೆದೊಯ್ದಿದ್ದಾರೆ.ಹುಚ್ಚ ವೆಂಕಟ್ ನೀಲಿ ಬಣ್ಣದ ಕಾರಿನಲ್ಲಿ ಬಂದಿದ್ದು ಕಾರು ಅಲ್ಲಿಯೇ ನಿಲ್ಲಿಸಿ‌ ಓಡಾಡಿದ್ದಾನೆ. ನೆನ್ನೆಯು ಸಹ ಹುಚ್ಚ ವೆಂಕಟ್ ವೀರಸಂದ್ರ ಬಳಿ‌ಕುಡಿದು ಟೈಟಾಗಿದ್ದ.ಕೋಕ ಕೋಲಾ ಬಾಟಲ್ ಒಳಗೆ ಡ್ರಿಂಕ್ಸ್ ಮಿಕ್ಸ್ ಮಾಡಿ ಕುಡಿದು ಓಡಾಡುತ್ತಿದ್ದ ಎಂದು ಇಲ್ಲಿನ ಯುವಕರು ಹೇಳಿದ್ದಾರೆ. ಮೂರು ದಿನಗಳಿಂದ ಒಂದೇ ಬಟ್ಟೆಯಲ್ಲಿ ಓಡಾಡಿಕೊಂಡಿರುವ ಹುಚ್ಚ ವೆಂಕಟ್ ಗೆ ಏನಾಗಿದೆ .ಯಾಕಿಂಗೆ ವರ್ತನೆ ಮಾಡುತ್ತಿದ್ದಾನೆ ಎಂಬುದು ತಿಳಿದುಬಂದಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here