ಸ್ಯಾಂಡಲ್‌ವುಡ್ ನಟ ಹಾಗೂ ನಿರ್ದೇಶಕ ಹುಚ್ಚ ವೆಂಕಟ್ ಮಾತು ಮಾತಿಗೂ ‘ನನ್ನ್ ಎಕ್ಕಡ’ ಎಂದು ಹೇಳುತ್ತಿರುತ್ತಾರೆ. ಸದಾ ಈ ಡೈಲಾಗ್ ಹೊಡೆಯೋ ವೆಂಕಟ್ ಕಾಲಿಗೆ ಸ್ಲಿಪ್ಪರ್ಸ್ ಸಹ ಇಲ್ಲದೇ ಅಲೆಯುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ಚೆನ್ನೈನ ಬೀದಿ ಎಂದು ಹೇಳಲಾಗುತ್ತಿದ್ದು, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.ದುರಹಂಕಾರಿ’ ಚಿತ್ರ ನಿರ್ಮಿಸುವುದಾಗಿ ಹೇಳಿದ ವೆಂಕಟ್, ಈಗ ರಸ್ತೆಯಲ್ಲಿ ಅಕ್ಷರಶಃ ಹುಚ್ಚನಂತೆ ಅಲೆದಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಪ್ರೆಸ್ ಮೀಟ್ ಮಾಡಿದ್ದ ವೆಂಕಟ್, ಯಾವುದೇ ಕೆಲಸವಾದರೂ ಅದಕ್ಕೆ ಚಪ್ಪಲಿಯನ್ನೇ ತಮ್ಮ ಗುರು ಎಂದು ಭಾವಿಸುವುದಾಗಿ ಹೇಳಿದ್ದರು.

ಇದೀಗ ಅವರು ಚಪ್ಪಲಿ ಇಲ್ಲದೇ ನಡೆದಾಡುತ್ತಿದ್ದಾರೆ. ಅಷ್ಟೇ ಯಾಕೆ ರಾಜರಾಜೇಶ್ವರಿ ನಗರದಲ್ಲಿ ಚುನಾವಣೆಗೆ ನಿಂತಾಗಲೂ ಚಪ್ಪಲಿಯನ್ನೇ ತಮ್ಮ ಚೆಹ್ನೆಯನ್ನಾಗಿಸಿಕೊಂಡಿದ್ದರು.ಯಾವಾಗ ಏನು ಹೇಳುತ್ತಾರೋ ಎಂಬ ಭಯದಿಂದ ವೆಂಕಟ್ ಅಂದರೆ ಹೆಣ್ಣು ಮಕ್ಕಳು ಮಾರು ದೂರ ಹೋಗುತ್ತಾರೆ. ಅವರ ವರ್ತನೆ, ಮಾತನಾಡುವ ಶೈಲಿ..ಎಲ್ಲವನ್ನೂ ನೋಡಿದ ಮಂದಿ ಅವರಿಗೆ ‘ದುರಹಂಕಾರ’ ಎಂದೇ ಹೇಳುತ್ತಾರೆ. ಇದೇ ಕಾರಣದಿಂದ ತಮ್ಮ ಚಿತ್ರಕ್ಕೂ ‘ದುರಹಂಕಾರಿ’ ಎಂಬ ಟೈಟಲ್ ಇಟ್ಟಿದ್ದಾರೆ.

ಚಪ್ಪಲಿ, ಹುಚ್ಚ ಇದೀಗ ದುರಹಂಕಾರ ಎನ್ನುವ ಟೈಟಲ್ ಸಹ ವೆಂಕಟ್ ಅವರೊಂದಿಗೆ ಸೇರಿ ಕೊಳ್ಳುತ್ತಿದೆ.ಯಾವಾಗ ಏನು ಹೇಳುತ್ತಾರೋ ಎಂಬ ಭಯದಿಂದ ವೆಂಕಟ್ ಅಂದರೆ ಹೆಣ್ಣು ಮಕ್ಕಳು ಮಾರು ದೂರ ಹೋಗುತ್ತಾರೆ. ಅವರ ವರ್ತನೆ, ಮಾತನಾಡುವ ಶೈಲಿ..ಎಲ್ಲವನ್ನೂ ನೋಡಿದ ಮಂದಿ ಅವರಿಗೆ ‘ದುರಹಂಕಾರ’ ಎಂದೇ ಹೇಳುತ್ತಾರೆ. ಇದೇ ಕಾರಣದಿಂದ ತಮ್ಮ ಚಿತ್ರಕ್ಕೂ ‘ದುರಹಂಕಾರಿ’ ಎಂಬ ಟೈಟಲ್ ಇಟ್ಟಿದ್ದಾರೆ. ಚಪ್ಪಲಿ, ಹುಚ್ಚ ಇದೀಗ ದುರಹಂಕಾರ ಎನ್ನುವ ಟೈಟಲ್ ಸಹ ವೆಂಕಟ್ ಅವರೊಂದಿಗೆ ಸೇರಿ ಕೊಳ್ಳುತ್ತಿದೆ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here