ತನ್ನ ಹುಚ್ಚಾಟದಿಂದಲೇ ಹೆಸರು ಮಾಡಿದ್ದ ಹುಚ್ಚ ವೆಂಕಟ್ ಗೌಡ ಇಂದು ರಾಜರಾಜೇಶ್ವರಿ ನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.ಇದೇ ವೇಳೆ ಮಾತನಾಡಿದ ಹುಚ್ಚ ವೆಂಕಟ್ ನಿಮಗೆ ನಾನು ಸರಿಯಾದ ಅಭ್ಯರ್ಥಿ ಎನಿಸಿದರೆ ಗೆಲ್ಲಿಸಿ ಎಂದಿದ್ದಾರೆ.

ನನ್ನನ್ನು ಗೆಲ್ಲಿಸಿದರೆ ಮುಂದೊಂದು ದಿನ ದೇಶದ ಪ್ರಧಾನಿ‌ ಆಗುತ್ತೇನೆ ಎಂದು ಹುಚ್ಚ ವೆಂಕಟ್ ಹೇಳಿಕೆ ನೀಡಿದ್ದಾರೆ.ನಾನು ಬೇರೆಯವರ ರೀತಿ ಮತದಾರರಿಗೆ ಸೀರೆ ,ಹಣ ,ಎಣ್ಣೆಯನ್ನು ನೀಡುವುದಿಲ್ಲ ನನಗೆ ಮತನೀಡಬೇಕೆಂದು ಅನಿಸಿದರೆ ನೀವು ನನಗೆ ಮತ ನೀಡಿ ಎಂದು ವೀಡಿಯೋ ಮೂಲಕ ಕೇಳಿಕೊಂಡಿದ್ದಾರೆ.

ಇಂದು ರಾಜರಾಜೇಶ್ವರಿ ನಗರದಿಂದ ಚುನಾವಣೆಯಲ್ಲಿ ನಿಲ್ಲಲು ನಾಮಪತ್ರ ಸಲ್ಲಿಸಿರುವುದಾಗಿ ಹುಚ್ಚ ವೆಂಕಟ್ ಹೇಳಿದ್ದಾರೆ‌.ಒಟ್ಟಿನಲ್ಲಿ ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಅವರಿಗೆ ಫೈಟ್ ನೀಡುವ ಆಸೆಯೊಂದಿಗೆ ಹುಚ್ಚ ವೆಂಕಟ್ ಸ್ಪರ್ಧೆಗೆ ಇಳಿದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here