ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ವಿರುದ್ಧ ಫೈರ್ ಆಗಿದ್ದಾರೆ ಹುಚ್ಚ ವೆಂಕಟ್. ವಿಡಿಯೋ ಒಂದರ ಮೂಲಕ ರಚಿತಾ ರಾಮ್ ಅವರ ವಾಗ್ದಾಳಿ ನಡೆಸಿರುವ ಹುಚ್ಚ ವೆಂಕಟ್ ರಚಿತಾ ಅವರ ಹೊಸ ಸಿನಿಮಾ ಏಕ್ ಲವ್ ಯಾ ದಲ್ಲಿನ ಟೀಸರ್ ನಲ್ಲಿ ರಚಿತಾ ರಾಮ್ ನಾಯಕ ರಾಣಾ ಜೊತೆ ಸಿಗರೇಟ್ ಸೇದಿರುವ ಹಾಗೂ ಲಿಪ್ ಲಾಕ್ ಮಾಡಿರುವ ದೃಶ್ಯದ ವಿರುದ್ಧ ಕಿಡಿ ಕಾರಿದ್ದಾರೆ. ರಚಿತ ರಾಮ್ ಬಗ್ಗೆ ಮಾತನಾಡುತ್ತಲೇ ಅವರು ಸಿನಿಮಾದ ನಿರ್ದೇಶಕ ಪ್ರೇಮ್ ಅವರಿಗೆ ಹಾಗೂ ನಾಯಕ ನಟನಿಗೆ ಕೂಡಾ ಕೆಲವು ಸಲಹೆಗಳನ್ನು ಕೂಡಾ ನೀಡಿದ್ದಾರೆ. ರಚಿತಾ ರಾಮ್ ಅವರನ್ನು ಯಾಕ್ರೀ ಇಂತಹ ಪಾತ್ರಗಳನ್ನು ಮಾಡಿ ಜನರ ಮನಸ್ಸನ್ನು ಹಾಳು ಮಾಡ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.

ಸಿನಿಮಾವನ್ನು ಮಕ್ಕಳು ಹಾಗೂ ಕುಟುಂಬದ ಜೊತೆ ಕುಳಿತು ನೋಡೋಕಾಗುತ್ತಾ?? ಹೆಣ್ಣು ಮಕ್ಕಳಿಗೆ ಮುಜುಗರ ಆಗೋದಿಲ್ವಾ?? ಎಂದು ಪ್ರಶ್ನಿಸುತ್ತಾ ನಿರ್ದೇಶಕರು ಕೊಟ್ಟರು ನಾವು ಮಾಡಿದ್ವಿ ಅಂತ ಎಲ್ಲಾ ಡೈರೆಕ್ಟರ್ ಮೇಲೆ ಹಾಕ್ತೀರಾ, ನಿಮಗೆ ಇಷ್ಟ ಇಲ್ಲ ಅಂದ್ರೆ ಡೈರೆಕ್ಟರ್ ಬಲವಂತ ಮಾಡಲು ಸಾಧ್ಯವಿಲ್ಲ ಯಾಕೆ ಈ ಥರಾ ಮಾಡ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಕಳೆದ ಸಿನಿಮಾದಲ್ಲೂ ಹೀಗೆ ಮಾಡಿದ್ರಿ, ಈಗ ಕೂಡಾ ಹೀಗೆ ಮಾಡಿದ್ದೀರಿ , ನಿಮ್ಮ ಪ್ರತಿಭೆ ತೋರಿಸೋಕೆ ಬೇರೆ ದಾರಿ ಇಲ್ವಾ? ನಿಮ್ಮ ಪ್ರತಿಭೆ ಬೇರೆ ಕಡೆ ತೋರಿಸಿ, ಹೀಗೆ ಮಾಡೋದನ್ನ ಪ್ರತಿಭೆ ಅಂತಾರಾ ಎಂದು ಹೀಗಳೆದಿದ್ದಾರೆ.

ಇನ್ನು ರಚಿತ ಅವರ ತಂದೆ ತಾಯಿಗೆ ನಿಮ್ಮ ಮಗಳಿಗೆ ಬುದ್ಧಿ ಹೇಳಿ ಎಂದು ಅವರು ಸಲಹೆ ನೀಡಿದ್ದಾರೆ. ಸಿನಿಮಾದಿಂದ ಲಿಪ್ ಲಾಕ್ ಹಾಗೂ ಸಿಗರೇಟ್ ಸೇದುವ ಸೀನ್ ತೆಗೆದುಹಾಕಿ ಎಂದಿರುವ ಅವರು, ನಾಯಕ ನಟನಿಗೆ ನೀನು ಹೊಸದಾಗಿ ಸಿನಿಮಾಗೆ ಬರುತ್ತಿರುವೆ, ಒಂದು ಉತ್ತಮ ಸಿನಿಮಾದೊಂದಿಗೆ ಕಾಲಿಡು ಎಂದು ಹೇಳಿದ್ದಾರೆ. ಈ ಹಿಂದೆ ಕನ್ನಡ ಇಂಡಸ್ಟ್ರಿ ಹೇಗಿತ್ತು? ಆಗ ಅಶ್ಲೀಲ ಎನ್ನುವುದು ಇರಲಿಲ್ಲ. ಇವತ್ತು ಏನಾಗಿದೆ ನೋಡಿ, ಪ್ರೇಮ್ ನಿನಗೆ ಇದು ಬೇಕಿತ್ತಾ? ಇದರಿಂದ ಜನರಿಗೆ ನೀನು ತೋರಿಸೋದಾದ್ರೂ ಏನು? ಆ ದೃಶ್ಯ ತೆಗೆದುಹಾಕೆಂದು ಸಲಹೆ ‌ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here